ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ಮಂಡನೆ‌: :ಸಾರಾಂಶ ಏನು?

By Srinath
|
Google Oneindia Kannada News

Union Budget 2013- Finance Minister P Chidambaram budget highlights
ನವದೆಹಲಿ, ಫೆ. 28: ಹಣಕಾಸು ಸಚಿವ ಪಿ ಚಿದಂಬರಂ ಅವರು ಯುಪಿಎ ಮೈತ್ರಿಕೂಟ ಸರಕಾರದ ಕೊನೆಯ ಬಜೆಟ್‌ ಅನ್ನು ಲೋಕಸಭೆಯಲ್ಲಿ ಇಂದು ಗುರುವಾರ ಮಂಡಿಸಿದರು.
ಮುಂಗಡ ಪತ್ರದ ಸಾರಾಂಶ:

* 12.45 ಬಜೆಟ್ ಭಾಷಣ ಮುಕ್ತಾಯ
* ವಿದೇಶದಿಂದ ಚಿನ್ನದ ಸಾಗಣೆ ಮಿತಿ ಏರಿಕೆ: ಪುರುಷರಿಗೆ 50 ಸಾವಿರ ರೂ ಮಿತಿ, ಮಹಿಳೆಯರಿಗೆ 1 ಲಕ್ಷ ರೂ. ಮಿತಿಗೆ ಏರಿಕೆ
* ಸೆಟ್ ಟಾಪ್ ಬಾಕ್ಸ್ ಮತ್ತಷ್ಟು ಬೆಲೆಯೇರಿಕೆ
* 2000 ರೂ. ಗಿಂತ ಅಧಿಕ ಮೊತ್ತದ ಮೊಬೈಲ್ ಗಳ ಬೆಲೆ ಏರಿಕೆ
* ಸಿಗರೇಟ್ ಮತ್ತು SUV ವಾಹನಗಳ ಬೆಲೆಯೇರಿಕೆ [ಟ್ವಿಟ್ಟರಲ್ಲಿ ಪ್ರತಿಕ್ರಿಯೆ]

* 50 ಲಕ್ಷ ರೂ. ಗಿಂತ ಅಧಿಕ ಆಸ್ತಿ ವಹಿವಾಟಿಗೆ ಮೂಲದಲ್ಲಿ ಶೇ. 1ರಷ್ಟು ತೆರಿಗೆ ಕಡಿತ (TDS)
* ಕೃಷಿ ಆಸ್ತಿ ಮಾರಾಟಕ್ಕೆ ಟಿಡಿಎಸ್ ಅನ್ವಯವಾಗದು.
* ಪಟಿಯಾಲದಲ್ಲಿ ಕ್ರೀಡಾ ತರಬೇತಿ ಕೇಂದ್ರ
* ಹೊಸದಾಗಿ 289 ಎಫ್‌ಎಂ ರೇಡಿಯೋ ಚಾನೆಲ್‌ಗಳ ಲೈಸೆನ್ಸ್ ಹರಾಜು
* ಕಾರ್ಪೊರೇಟ್ ಕಂಪನಿಗಳಿಗೆ ಮೇಲ್ತೆರಿಗೆ ಹೆಚ್ಚಳ
* ಸಂಬಳದಾರರಿಗೆ ಖುಷಿ ವಿಚಾರ: ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

* ಯೋಜನಾ ವೆಚ್ಚ 555322 ಕೋಟಿ ರೂ- ಯೋಜನೇತರ ವೆಚ್ಚ 1199074 ಕೋಟಿ ರೂ
* ಮಹಿಳೆಯರ ರಕ್ಷಣೆಗಾಗಿ ಹೊಸ 'ನಿರ್ಭಯಾ ನಿಧಿ' ಸ್ಥಾಪನೆ- 1000 ಕೋಟಿ ರೂ ಅನುದಾನ
* ಅಂಚೆ ಕಚೇರಿ ತಂತ್ರಜ್ಞಾನ ಆಧುನೀಕರಣಕ್ಕೆ 532 ಕೋಟಿ ರೂ
* ರಕ್ಷಣಾ ವೆಚ್ಚ 2,03,672 ಕೋಟಿ ರೂ. ಗೆ ಏರಿಕೆ
* ವಿಮೆ, ನೌಕರರ ಭವಿಷ್ಯ ನಿಧಿಗಳು ಸಾಲ ವಿಭಾಗದ ಮೂಲಕ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಬಹುದು.

* ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆ (ಜಪಾನ್ ಸಹಯೋಗದಲ್ಲಿ)
* ರಕ್ಷಣಾ ಖಾತೆಗೆ 2,20,000 ಕೋಟಿ
* ಬಾಹ್ಯಾಕಾಶ ಇಲಾಖೆಗೆ 5400 ಕೋಟಿ ರೂ
* ಅಣು ಶಕ್ತಿ ಇಲಾಖೆಗೆ 5600 ಕೋಟಿ ರೂ
* NHB ಸಹಯೋಗದಲ್ಲಿ ನಗರ ಗೃಹ ನಿರ್ಮಾಣ ಬ್ಯಾಂಕ್
* 1000 ಕೋಟಿ ರೂ ಬಂಡವಾಳದೊಂದಿಗೆ ಮೊದಲ ಮಹಿಳಾ ಸಾರ್ವಜನಿಕ ಬ್ಯಾಂಕ್ ಸ್ಥಾಪನೆ
* ಮನೆಗೆಲಸದವರು ಮತ್ತು ಅಂಗನವಾಡಿ ಕಾರ್ಯಕರ್ತಕರಿಗೆ ಸಮೂಹ ವಿಮೆ

* 2014ರ ವೇಳೆಗೆ ಎಲ್ಲ ಸಾರ್ವಜನಿಕ ಬ್ಯಾಂಕುಗಳ ಎಲ್ಲ ಶಾಖೆಗಳಲ್ಲೂ ATMಗಳ ಸ್ಥಾಪನೆ
* 13 ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ಆದಾಯ ಸಂಗ್ರಹ 14000 ಕೋಟಿ ರೂ
* 6 ನೂತನ AIIMS ಗಳ ಸ್ಥಾಪನೆ
* ಜವಳಿ ಕ್ಷೇತ್ರದಲ್ಲಿ ತಂತ್ರಜ್ಞಾನ ಉನ್ನತೀಕರಣಕ್ಕೆ 2400 ಕೋಟಿ ರೂ

ಬೆಂಗಳೂರು-ಮುಂಬೈ ಕಾರಿಡಾರ್ ಯೋಜನೆಗೆ ವಿಶೇಷ ಒತ್ತುಬೆಂಗಳೂರು-ಮುಂಬೈ ಕಾರಿಡಾರ್ ಯೋಜನೆಗೆ ವಿಶೇಷ ಒತ್ತು

* ವಿದ್ಯುತ್ ಯಂತ್ರೋಪಕರಣಕ್ಕೆ ಶೂನ್ಯ ಕಸ್ಟಮ್ಸ್ ತೆರಿಗೆ
* ಗೃಹಸಾಲದ ಮೇಲೆ ರಿಯಾಯಿತಿ: ಮೊದಲ 25 ಲಕ್ಷ ರೂ ಸಾಲ ಮಿತಿಯಲ್ಲಿ ಒಂದು ಲಕ್ಷ ರೂ. ತೆರಿಗೆ ಮುಕ್ತ
* ಗ್ರಾಮೀಣಾಭಿವೃದ್ಧಿ ಖರ್ಚು ಶೇ. 46ರಷ್ಟು ಹೆಚ್ಚಳ
* ನಾಲ್ಕು infrastructure bonds ಮೂಲಕ 25000 ಕೋಟಿ ರೂ ಸಂಗ್ರಹ
* AIIMS ಮಾದರಿಯ ಇನ್ನೂ 6 ವೈದ್ಯಕೀಯ ಕಾಲೇಜುಗಳ ಆರಂಭ
* 700000 ಕೋಟಿ ರೂ ಕೃಷಿ ಸಾಲ ಯೋಜನೆಗೆ

* ಎಸ್ಸಿ/ ಎಸ್ಟಿ ಶಿಷ್ಯವೇತನಕ್ಕೆ ಹೆಚ್ಚಿನ ಒತ್ತು
* ಆಯುಷ್ ಇಲಾಖೆಗೆ 1069 ಕೋಟಿ ರೂ
* 3400 ಕೋಟಿ ರೂ ಕೃಷಿ ಸಂಶೋಧನೆಗೆ
* ಶಿಕ್ಷಣಕ್ಕೆ 65867 ಕೋಟಿ ರೂ
* 4727 ಕೋಟಿ ವೈದ್ಯಕೀಯ ಸಂಶೋಧನೆಗೆ
* ಆರೋಗ್ಯಕ್ಕೆ 33000 ಕೋಟಿ ರೂ.

* ವಿಕಲಚೇತರಿಗೆ 110 ಕೋಟಿ ವಿಶೇಷ ಯೋಜನೆ
* ಅಲ್ಪಸಂಖ್ಯಾತರ ಕಲ್ಯಾಣಕ್ಕೆ 3511 ಕೋಟಿ ರೂ.
* ಪರಿಶಿಷ್ಟ ಜಾತಿಗೆ 41000 ಕೋಟಿ ರೂ, ಬುಡಕಟ್ಟು ಜನರ ಕಲ್ಯಾಣಕ್ಕಾಗಿ 28500 ಕೋಟಿ ರೂ.
* ಪ್ರಸಕ್ತ ವರ್ಷ ಶೇ.5.1ರ ಜಿಡಿಪಿ ತಲುಪುವ ಗುರಿ

* 1630825 ಕೋಟಿ ರೂ ಒಟ್ಟು ಖರ್ಚು. 555322 ಕೋಟಿ ರೂ. ಯೋಜನಾ ಖರ್ಚು
* ಭಾರತದ ಪ್ರಗತಿಗೆ ಯಾವುದೇ ಅಡ್ಡಿ-ಆತಂಕವಿಲ್ಲ. ಆದರೆ ಕರೆಂಟ್ ಅಕೌಂಟ್ ಕೊರತೆಯದ್ದೇ ಬಾಧೆ.
* ಆರ್ಥಿಕ ಪ್ರಗತಿಯಲ್ಲಿ ಚೀನಾ ಮತ್ತು ಇಂಡೋನೇಷ್ಯಾ ಮಾತ್ರವೇ ಭಾರತಕ್ಕಿಂತ ಮುಂದಿರುವುದು.
* 11.02ಕ್ಕೆ ಬಜೆಟ್ ಭಾಷಣ ಆರಂಭ
ಬಜೆಟ್-2013 ಸಂಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ

English summary
The Finance Minister P Chidambaram presented his Eight Central Budget-2013 in the Lok Sabha today (Feb 28). Budget highlights...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X