ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶಾನ್ಯ ಭಾರತ: ಕಾಂಗ್ರೆಸ್ಸಿಗೆ ಹೆಚ್ಚಿನ ಲಾಭವಿಲ್ಲ

By Mahesh
|
Google Oneindia Kannada News

Tripura: Left wins 23 seats, Meghalaya: Cong wins 5 seats
ಅಗರ್ತಲ, ಫೆ.28 : ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಉಪಾಧ್ಯಕ್ಷ ಪಟ್ಟ ಧರಿಸಿದ ಮೇಲೆ ರಾಹುಲ್ ಗಾಂಧಿ ಅವರು ಈ ಪ್ರದೇಶಗಳಿಗೆ ಭೇಟಿ ನೀಡಿದ್ದರೂ ಹೆಚ್ಚಿನ ಸಾಧನೆ ಕಂಡು ಬಂದಿಲ್ಲ. ಎಡಪಂಥೀಯ ಒಕ್ಕೂಟ ಎನ್ ಪಿಎಸ್ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ನಿರೀಕ್ಷೆಯಂತೆ ಮೇಘಾಲಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ ಪಡೆಯುವ ಯತ್ನದಲ್ಲಿದೆ.

ತ್ರಿಪುರ: ತ್ರಿಪುರಾದಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಡಪಂಥೀಯ ಒಕ್ಕೂಟ ಪ್ರಚಂಡ ಜಯಭೇರಿ ಬಾರಿಸುವ ಮೂಲಕ 5ನೇ ಬಾರಿಗೆ ಅಧಿಕಾರ ಉಳಿಸಿಕೊಂಡಿದೆ. ಸಿಎಂ ಮಾಣಿಕ್ ಸರ್ಕಾರ್ ಮತಗಳಿಂದ ಜಯ ದಾಖಲಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ 60 ಸ್ಥಾನಗಳ ಪೈಕಿ 49 ಸ್ಥಾನಗಳಿಸಿದ್ದು, ಕಾಂಗ್ರೆಸ್ 9ಸ್ಥಾನದಲ್ಲಿ ಮಾತ್ರ ಮುಂದಿದೆ.

ನಾಗಾಲ್ಯಾಂಡ್: ಆಡಳಿತಾರೂಢ ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್(ಎನ್ ಪಿಎಫ್) ಜಯಭೇರಿ ಬಾರಿಸಿದೆ. 24 ಸೀಟುಗಳನ್ನು ಗೆದ್ದಿದೆ.ಕಾಂಗ್ರೆಸ್ 4 ಸ್ಥಾನ ಮಾತ್ರ ಗಳಿಸಿದೆ.

ಮೇಘಾಲಯ: ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದೆ. 27 ಸೀಟುಗಳನ್ನು ಗೆದ್ದಿದ್ದು 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

3.25 : ನಾಗಾಲ್ಯಾಂಡ್ ನಲ್ಲಿ 24 ಸೀಟು ಗೆಲ್ಲುವ ಮೂಲಕ NPF ಭರ್ಜರಿ ಜಯ ದಾಖಲಿಸುತ್ತಿದೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ತಲಾ 4 ಸೀಟು ಗಳಿಸಿದೆ.
* ತ್ರಿಪುರದಲ್ಲಿ ಎಡಪಕ್ಷ 47 ಸ್ಥಾನ ಖಾತ್ರಿ ಪಡಿಸಿಕೊಂಡಿದೆ. ಮೇಘಾಲಯದಲ್ಲಿ ಕಾಂಗ್ರೆಸ್ 11 ಸೀಟು ಗೆದ್ದಿದೆ.
* ಪಿಎ ಸಂಗ್ಮಾ ಅವರ NPP ಮೇಘಾಲಯದಲ್ಲಿ ಕೇವಲ 1 ಸ್ಥಾನ ಗಳಿಸಿದೆ.

* ನಾಗಾಲ್ಯಾಂಡ್ ಸಿಎಂ ನೈಫಿಯು ರಿಯೋ 12,671 ಮತಗಳಿಸಿ ಜಯ ಗಳಿಸಿದ್ದರೆ, ತ್ರಿಪುರ ಸಿಎಂ ಅಭ್ಯರ್ಥಿ ಮಾಣಿಕ್ ಸರ್ಕಾರ್ 5,000 ಮತಗಳಿಂದ ಜಯ ದಾಖಲಿಸಿದ್ದಾರೆ.

ಮಧ್ಯಾಹ್ನ 2.30: NPF ನಾಗಾಲ್ಯಾಂಡ್ ನಲ್ಲಿ 22 ಸೀಟು ಗಳಿಸಿದ್ದು, 10 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 4, ಜೆಡಿಯು 1 ಸ್ಥಾನ ಗೆದ್ದಿದೆ.
* ತ್ರಿಪುರದಲ್ಲಿ ಎಡಪಕ್ಷ ಭರ್ಜರಿಯಾಗಿ 35 ಸ್ಥಾನ ಗಳಿಸಿದೆ.
* ತ್ರಿಪುರದಲ್ಲಿ ಕಾಂಗ್ರೆಸ್ ಕೇವಲ 5 ಸೀಟು ಗೆಲ್ಲಲು ಸಾಧ್ಯವಾಗಿದೆ.
* ನಾಗಾಲ್ಯಾಂಡ್ ನಲ್ಲಿ 7 ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ.

ಮಧ್ಯಾಹ್ನ 1.05: ಈಶಾನ್ಯ ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರಿದಿದ್ದು ಪೂರ್ಣ ಫಲಿತಾಂಶಕ್ಕಾಗಿ ನಿರೀಕ್ಷಿಸಿ.. ಸದ್ಯದ ಮಾಹಿತಿ ಇಲ್ಲಿದೆ...
* ತ್ರಿಪುರದಲ್ಲಿ ಎಡಪಕ್ಷಗಳು 24 ಸೀಟುಗಳನ್ನು ಗೆದ್ದುಕೊಂಡಿದೆ.
* ಕಾಂಗ್ರೆಸ್ 4 ಸೀಟುಗಳಿಗೆ ತೃಪ್ತಿ ಪಟ್ಟಿದೆ.
* ಮೇಘಾಲಯದಲ್ಲಿ UDPಗೆ 3 ಸ್ಥಾನಗಳು

ತ್ರಿಪುರ, ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿ ತಲಾ 60 ಸ್ಥಾನಗಳ ಫಲಿತಾಂಶ ಹೊರಬೀಳಬೇಕಿದೆ. 2008ರಲ್ಲಿ ನಾಗಾಲ್ಯಾಂಡ್ ನಲ್ಲಿ ಎನ್ ಪಿಎಫ್ 26 ಸ್ಥಾನ, ಕಾಂಗ್ರೆಸ್ 23 ಸ್ಥಾನ ಪಡೆದಿತ್ತು. ಮೇಘಾಲಯದಲ್ಲಿ ಕಾಂಗ್ರೆಸ್ 25, ಯುಡಿಪಿ 14 ಸ್ಥಾನ ಪಡೆದಿತ್ತು. ತ್ರಿಪುರದಲ್ಲಿ ಸಿಪಿಐಎಂ 46 ಸ್ಥಾನಗಳಿಸಿತ್ತು, ಕಾಂಗ್ರೆಸ್ 10 ಸ್ಥಾನ ಪಡೆದಿತ್ತು.

UNDP - United Nagaland Democratic Party, NPP - National People's Party, UDP - United Democaratic Party, INPT - Indigenous Nationalist Party of Tripura, RSP - Revolutionary Socialist Party ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ

English summary
Results for the assembly elections in Tripura, Nagaland and Meghalaya were announced on Thursday. While the Left Front retained Tripura and formed its fifth consecutive government in the state, the Naga People's Front (NPF) and the Congress-UDP alliance were likely to retain Nagaland and Meghalaya, respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X