ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳಬಾಗಿಲು ಶಾಸಕ ಅಮರೇಶ್ ಬಂಧನ

By Srinath
|
Google Oneindia Kannada News

Kolar Mulbagal Congress MLA Amaresh arrested- Forgery case
ಕೋಲಾರ, ಫೆ. 28: ಫೋರ್ಜರಿ ಆರೋಪದ ಮೇಲೆ ಮುಳಬಾಗಿಲು ಮೀಸಲು ಕ್ಷೇತ್ರದ ಶಾಸಕ ಅಮರೇಶ್ ಅವರನ್ನು ಬಂಧಿಸಲಾಗಿದೆ. ಅಮರೇಶ್ ಅವರನ್ನು ಕೋರ್ಟ್ ಸೂಚನೆ ಮೇರೆಗೆ ಮುಳಬಾಗಿಲು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಾಂಗ್ರೆಸ್ ಶಾಸಕ 47 ವರ್ಷದ ಅಮರೇಶ್ ಅವರು 2006ರಲ್ಲಿ ಆಸ್ತಿ ಪರಭಾರೆ ಸಂದರ್ಭದಲ್ಲಿ ದಾಖಲೆ ಪತ್ರಗಳಿಗೆ ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪ ಹೊತ್ತಿದ್ದರು. ಮುಳಬಾಗಿಲು ಮ್ಯಾಜಿಸ್ಟ್ರೇಟ್ (ಸಿವಿಲ್) ನ್ಯಾಯಾಧೀಶರು ಶಾಸಕರ ಬಂಧನಕ್ಕೆ ಆದೇಶ ಹೊರಡಿಸಿದ್ದರು.

ಮುಳಬಾಗಿಲು ತಾಲೂಕು ಬೈರಕೂರು ಗ್ರಾಮದ ಬಳಿ 3.16 ಎಕರೆ ಕೃಷಿ ಭೂಮಿಯ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಶಾಸಕ ಅಮರೇಶ್ ಮೇಲಿದೆ.

ತಾಜಾ ಸುದ್ದಿ: 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಮರೇಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿದ ಮುಳಬಾಗಿಲು ಕೋರ್ಟ್, ಜಾಮೀನು ಮಂಜೂರು ಮಾಡಿದೆ. ಇದರಿಂದ ಅಮರೇಶ್ ಸದ್ಯಕ್ಕೆ ಬಂಧ ಮುಕ್ತರಾಗಿದ್ದಾರೆ.

English summary
Kolar Mulbagal Congress MLA Amaresh arrested in a Forgery case today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X