ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಮಿತಿ : ಸಂಬಳದಾರರಿಗೆ ನಿರಾಶೆ

By Mahesh
|
Google Oneindia Kannada News

ನವದೆಹಲಿ, ಫೆ.28: 'ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ' ಎಂದು ವಿತ್ತ ಸಚಿವ ಪಿ ಚಿದಂಬರಂ ಘೋಷಿಸಿದ್ದಾರೆ. 2013-14ನೇ ಸಾಲಿನ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರು.ನಿಂದ 3 ಲಕ್ಷ ರು.ಗೆ ಏರಿಸಲು ಸಂಸದೀಯ ಸ್ಥಾಯಿ ಸಮಿತಿ ಅಸೋಸ್ಸಾಚಂ ಶಿಫಾರಸು ಮಾಡಿತ್ತು. ಆದರೆ, ಪಿ ಚಿದಂಬರಂ ಅವರು ಸಂಬಳದಾರರಿಗೆ ನಿರಾಶೆ ಮೂಡಿಸಿದ್ದಾರೆ.

ಆದರೆ, 1 ಕೋಟಿ ರು,ಗೂ ಅಧಿಕ ಆದಾಯಕ್ಕೆ ಶೇ 10 ರಷ್ಟು ಸರ್ ಚಾರ್ಚ್ ಹಾಕಲಾಗಿದೆ. 5 ಲಕ್ಷ ರುವರೆಗಿನ ಆದಾಯಕ್ಕೆ 2 ಸಾವಿರ ರು ತೆರಿಗೆ ವಿನಾಯತಿ ಘೋಷಿಸಲಾಗಿದೆ. ಉಳಿದಂತೆ ಆದಾಯ ತೆರಿಗೆ ವಿನಾಯತಿ ಕಳೆದ ಬಾರಿಯಂತೆ ಮುಂದುವರೆಯಲಿದೆ.

8ನೇ ಬಾರಿಗೆ ಬಜೆಟ್ ಮಂಡಿಸಿದ ಚಿದಂಬರಂ ಅವರು ಯಾವುದೇ ಹೊಸ ತೆರಿಗೆಗಳನ್ನು ವಿಧಿಸದೆ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಗೃಹ ಸಾಲ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. [ಬಜೆಟ್ ಮುಖ್ಯಾಂಶಗಳನ್ನು ಓದಿ]

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

2 ಲಕ್ಷ ರು.ವರೆಗೆ ಸಂಬಳ ಪಡೆಯುವವರು ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. 2ರಿಂದ 5 ಲಕ್ಷ ರು. ಸಂಬಳ ಪಡೆಯುವವರು ಶೇ.10ರಷ್ಟು ತೆರಿಗೆ ಕಟ್ಟಬೇಕು. 5 ಲಕ್ಷ ರು.ನಿಂದ 10 ಲಕ್ಷ ರು. ಸಂಬಳ ಗಳಿಸುವವರು ಶೇ.20ರಷ್ಟು ಮತ್ತು 10 ಲಕ್ಷ ರು.ಗಿಂತ ಹೆಚ್ಚು ಆದಾಯ ಪಡೆಯುವವರು ಶೇ.30ರಷ್ಟು ತೆರಿಗೆ ಕಟ್ಟಬೇಕು.

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ರಿಟರ್ನ್ ಫೈಲ್ ಮಾಡುವುದು ಕ್ಷೇಮ : 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ರಿಟರ್ನ್ ಫೈಲ್ ಮಾಡಬೇಕಾಗಿಲ್ಲವಾದರೂ, ನಮ್ಮ ಹೂಡಿಕೆಯ ಆಧಾರದ ಮೇಲೆ ರಿಫಂಡ್ ಬರಬೇಕಿದ್ದರೆ ಅಥವಾ ಯಾವುದೇ ಸಾಲ ಪಡೆಯಲು ಯತ್ನಿಸುತ್ತಿದ್ದರೆ ಅಂಥವರು ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಒಳಿತು.

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ಆರೋಗ್ಯ ವೆಚ್ಚಗಳು ಹೆಚ್ಚಿರುವುದರಿಂದ ಈಗಿನ ತೆರಿಗೆ ಮುಕ್ತ ಮಿತಿಯನ್ನು 15 ಸಾವಿರ ರೂ.ಗಳಿಂದ ಕನಿಷ್ಠ 50 ಸಾವಿರ ರೂ.ಗೆ ಏರಿಸಬೇಕು. ಮನೆಗೆ ಸಂಚರಿಸಲು ನೀಡುವ ಭತ್ಯೆ ತೆರಿಗೆಯಿಂದ ಮುಕ್ತವಾಗಿದ್ದರೂ ಅದಕ್ಕೆ ನಿಗದಿಪಡಿಸಿರುವ ಮಿತಿ ಕೇವಲ ಮಾಸಿಕ 800 ರೂ. ಇದು ದಶಕದ ಹಿಂದೆಯೇ ನಿಗದಿತವಾಗಿದೆ. ಇದನ್ನು ಕನಿಷ್ಠ ಮಾಸಿಕ 3 ಸಾವಿರ ರೂ.ಗೆ ಏರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು,

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

50 ಲಕ್ಷ ರೂ. ಗಿಂತ ಅಧಿಕ ಆಸ್ತಿ ವಹಿವಾಟಿಗೆ ಮೂಲದಲ್ಲಿ ಶೇ. 1ರಷ್ಟು ತೆರಿಗೆ ಕಡಿತ (TDS). ಕಾರ್ಪೊರೇಟ್ ಕಂಪನಿಗಳಿಗೆ ಮೇಲ್ತೆರಿಗೆ ಹೆಚ್ಚಳ

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ವಿಮೆ, ಪ್ರಾವಿಡೆಂಟ್ ಫಂಡ್ ವ್ಯವಹಾರಗಳನ್ನು ಷೇರು ಮಾರುಕಟ್ಟೆಯ ಸಾಲ ವಿಭಾಗದಲ್ಲೇ ನಿರ್ವಹಿಸಲು ಅವಕಾಶ. ಹಿರಿಯ ನಾಗರೀಕರಿಗೆ (80 ವರ್ಷ ಮೇಲ್ಪಟ್ಟವರಿಗೆ) ಆದಾಯ ತೆರಿಗೆ ಮಿತಿ ವಾರ್ಷಿಕ 5 ಲಕ್ಷ ರು ಮುಂದುವರೆಯಲಿದೆ. ಆದಾಯ ಮಿತಿ ದಾಟಿದರೆ 10 ಲಕ್ಷ ರು ತನಕ ಆದಾಯದ ಶೇ 20 ರಷ್ಟು ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ.

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ತೆರಿಗೆ ಮುಕ್ತ ಮಿತಿ ಏರಿಕೆ ಇಲ್ಲ

ಹಿರಿಯ ನಾಗರಿಕರಿಗೆ( 60 ವರ್ಷದಿಂದ 80 ವರ್ಷದೊಳಗೆ)
* 0 to 2,50,000- ತೆರಿಗೆ ಇಲ್ಲ
* 2,50,001 to 5,00,000- 10%
* 5,00,001 to 10,00,000- 20%
* 10,00,000 ಗೂ ಅಧಿಕ- 30%

English summary
Union Budget 2013-14 : Tax slabs not revised : Up to Rs 2 lakh: no tax, Rs 2 to 5 lakh: 10%, Rs 5 to 10 lakh: 20%, Above 10 lakh: 30%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X