ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭರವಸೆಯ ಬೆಳಕು' ಚೆಲ್ಲುವ ಬಿಜೆಪಿ ಪ್ರಣಾಳಿಕೆ

|
Google Oneindia Kannada News

Ruling BJP party
ಬೆಂಗಳೂರು, ಫೆ.27: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದೆ. ಪಕ್ಷದ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ "ಭರವಸೆಯ ಬೆಳಕು" ಶೀರ್ಷಿಕೆಯಡಿ ತಯಾರಿಸಲಾಗಿರುವ ಪ್ರಣಾಳಿಕೆಯನ್ನು ನಗರದ ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ಕಸದ ಸಮಸ್ಯೆ ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. ಪ್ರಣಾಳಿಕೆಯನ್ನು ಎಲ್ಲಾ ನಗರಗಳ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. ಚುನಾವಣೆಗಳಲ್ಲಿ ಬಿಜೆಪಿ 2,800 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಣಾಳಿಕೆಯಲ್ಲೇನಿದೆ?

* ಎಲ್ಲಾ ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ

* ಐದು ವರ್ಷಗಳಲ್ಲಿ ಎಲ್ಲಾ ನಗರಕ್ಕೂ ಮೂಲಭೂತ ಸೌಲಭ್ಯ,ಕೊಳಚೆ ಪ್ರದೇಶಗಳ ನಿರ್ಮೂಲನೆ ಮಾಡುವುದು.

* ಮನೆಯಿಂದ ಪ್ರತಿನಿತ್ಯ ಕಸ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿ

* ನಗರದ ಉದ್ಯಾನವನಗಳ ಅಭಿವೃದ್ಧಿ

* ನೂತನವಾಗಿ ನಗರ ಅರಣ್ಯ ನಿರ್ಮಾಣ ಯೋಜನೆ ಜಾರಿ, ಮನೆಗೆರೆಡು ಮರ ಯೋಜನೆ ಪ್ರಾರಂಭ

* ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ.

* ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ವ್ಯಕ್ತಿತ್ವ ವಿಕಸನ ಕೇಂದ್ರ ನಿರ್ಮಾಣ

* ಪ್ರತಿ ನಗರದಲ್ಲಿ ಅಟಲ್ ಜಿ ಕ್ರೀಡಾ ಸಂಸ್ಥೆಗಳ ಸ್ಥಾಪನೆ

* ವೈಜ್ಞಾನಿಕ ಮಾಹಿತಿ ಆಧರಿಸಿ ಆಸ್ತಿ ಪದ್ಧತಿ ಜಾರಿ

* ಮಾಜಿ ಸಚಿವ ದಿ.ವಿ.ಎಸ್.ಆಚಾರ್ಯ ಹೆಸರಿನಲ್ಲಿ ನಗರೀಕರಣ ಅಧ್ಯಯನ ಕೇಂದ್ರ ಸ್ಥಾಪನೆ.

* ಎಲ್ಲಾ ನಗರಗಳಲ್ಲೂ ಬೆಂಗಳೂರು ಒನ್ ಕೇಂದ್ರದ ಮಾದರಿಯಲ್ಲಿ ನೂತನ ನಾಗರೀಕ ಸೇವಾಕೇಂದ್ರ ಸ್ಥಾಪನೆ

* ಮನೆ ನಿರ್ಮಾಣ ಪರವಾನಿಗೆ ಸರಳೀಕರಣ, ಎಲ್ಲಾ ನಗರಗಳಿಗೂ ಸಮರ್ಪಕ ಒಳ ಚರಂಡಿ ವ್ಯವಸ್ಥೆ ನಿರ್ಮಾಣ

* ಪ್ರತಿ ವಾರ್ಡ್ ನಲ್ಲೂ ಸುಲಭ್ ಶೌಚಾಲಯ ಸ್ಥಾಪನೆ

* ಜಿಲ್ಲೆ, ತಾಲ್ಲೂಕು, ಪಟ್ಟಣಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಸ್ಥಾಪನೆ.

English summary
Ruling BJP party has released manifesto for the urban local bodies elections on Wednesday Feb.27. The party state president and Deputy Chief Minister K.S.Eshwarappa released 'Promising Light' manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X