ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದತ್ಮಕ ಹೇಳಿಕೆ - ವರುಣ್ ಗಾಂಧಿ ದೋಷಮುಕ್ತ

|
Google Oneindia Kannada News

Varun Gandhi
ಉತ್ತರ ಪ್ರದೇಶ, ಫೆ.27: ಚುನಾವಣಾ ಪ್ರಚಾರದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ದೋಷಮುಕ್ತಗೊಳಿಸಿ ಪಿಲಿಬಿಟ್ ಕೋರ್ಟ್ ಆದೇಶ ನೀಡಿದೆ. 2009ರ ಚುನಾವಣೆ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಅರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ವರುಣ್ ಗಾಂದಿ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಬುಧವಾರ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಪಿಲಿಬಿಟ್ ಕೋರ್ಟ್, ಸಂಸದ ವರುಣ್ ಗಾಂಧಿ ವಿರುದ್ಧದ ಎರಡು ಪ್ರಕರಣನ್ನು ರದ್ದುಗೊಳಿಸಿ ಅವರನ್ನು ದೋಷಮುಕ್ತಗೊಳಿಸಿತು. ವರುಣ್ ಗಾಂಧಿ ವಿರುದ್ಧವಿದ್ದ 15 ಸಾಕ್ಷಿಗಳು ಅಗತ್ಯ ಸಾಕ್ಷ್ಯಾಧಾರ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.

2009ರ ಮಾರ್ಚ್ 17 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ವರುಣ್ ಗಾಂಧಿ "ಹಿಂದೂಗಳ ಮೇಲೆ ಕೈ ಎತ್ತಿದರೆ ಕೈ ಕಡಿಯುವುದಾಗಿ" ಹೇಳಿಕೆ ನೀಡಿದ್ದರು. ರಾಷ್ಟ್ರಾದ್ಯಂತ ವರುಣ್ ಗಾಂಧಿಯವರ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. ಅಲ್ಪ ಸಂಖ್ಯಾತರ ವಿರೋಧಕ್ಕೂ ಕಾರಣವಾಗಿತ್ತು.

ಇದರಿಂದಾಗಿ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವರುಣ್ ಗಾಂಧಿಯವರನ್ನು ಬಂಧಿಸಿ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಿತ್ತು. 19 ದಿನಗಳ ಜೈಲುವಾಸದ ನಂತರ ವರುಣ್ ಗಾಂಧಿ ಬಿಡುಗಡೆಗೊಂಡಿದ್ದರು. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ವರುಣ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ ಸೂಚನೆಯಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ. ಪ್ರಚೋದನಾಕಾರಿ ಹೇಳಿಕೆ ನೀಡುವುದಿಲ್ಲ ಎಂದು 2009ರ ಏಪ್ರಿಲ್ 15ರಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ವರುಣ್ ಗಾಂಧಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು.

English summary
It must be a great relief for Bharatiya Janata Party (BJP) leader Varun Gandhi who has been acquitted in one of the two hate speech cases. A court in Uttar Pradesh on Wednesday, Feb 27 exonerated Mr Gandhi who during his election campaign at his constituency of Pilibhit in 2009 allegedly had made hate speeches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X