ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯಲ್ಲಿ ಬೆಂಗಳೂರಲ್ಲಿ ನೀರಿನ ಸಮಸ್ಯೆ ಇರಲ್ಲ

By Mahesh
|
Google Oneindia Kannada News

ಬೆಂಗಳೂರು, ಫೆ.25: ಬೇಸಿಗೆಯಲ್ಲಿ ತೀವ್ರವಾದ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂಬ ಭಯಾನಕ ಸುದ್ದಿಗೆ ಜಲ ಮಂಡಳಿ ಬ್ರೇಕ್ ಹಾಕಿದೆ. ಸದ್ಯಕ್ಕೆ ಶೇಖರಿಸಿರುವ ನೀರು ಮುಂದಿನ ಮಳೆಗಾಲದ ತನಕ ಸಾಕಾಗುತ್ತದೆ. ಅಲ್ಲದೆ, ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ನೀರು ಹರಿಯಲು ಆರಂಭಿಸಿರುವುದರಿಂದ ಜಲ ಸಮಸ್ಯೆ ಇನ್ನಿಲ್ಲ ಎಂದು BWSSB ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಹೇಳಿದ್ದಾರೆ.

ಬೆಂಗಳೂರು ಜಲಮಂಡಳಿ ಬಳಿ ಸದ್ಯಕ್ಕೆ 200 MLD(million litres per day) ಪ್ರಮಾಣದ ನೀರು ಪೂರೈಕೆ ಮಾಡಲಾಗುತ್ತಿದೆ. ಮಾರ್ಚ್ 2012ಕ್ಕೆ ಹೋಲಿಸಿದರೆ ಈ ಪ್ರಮಾಣ ಅಧಿಕವಾಗಿದೆ ಹಾಗೂ ಬೆಂಗಳೂರಿಗರ ನೀರಿನ ದಾಹ ನೀಗಿಸಲಿದೆ. ಮೂರು ಮುಖ್ಯ ಪಂಪಿಂಗ್ ಸ್ಟೇಷನ್ ಗಳಾದ ಹಾರೋಹಳ್ಳಿ, ತಾತಗುಣಿ ಹಾಗೂ ಟಿಕೆ ಹಳ್ಳಿ ಹಾಗೂ ಎಂಡಿ ಗೌರವ್ ಗುಪ್ತಾ ಅವರು ಕೊಟ್ಟ ಪ್ರತಿಕ್ರಿಯೆ ಪ್ರಕಾರ

Bangalore Water Availability in Summer

ಬೆಂಗಳೂರು ನಗರಕ್ಕೆ 18 ಟಿಎಂಸಿ ಅಡಿ ಗಳಷ್ಟು ನೀರು ಪ್ರತಿ ವರ್ಷ ಬೇಕಾಗುತ್ತದೆ. ಪ್ರತಿ ತಿಂಗಳ ಬಳಕೆ ಸರಾಸರಿ 1.5 ಟಿಎಂಸಿ ಅಡಿಗಳಷ್ಟಿದೆ. ನಗರಕ್ಕೆ ಸರಬರಾಜು ಮಾಡುವ ನೀರಿನ ಪ್ರಮಾಣ 200 MLD ದಾಟುತ್ತಿದೆ. ಆದರೆ, ಕಾವೇರಿ 4ನೇ ಘಟ್ಟ 2ನೇ ಹಂತದ ಕಾಮಗಾರಿ ಮುಕ್ತಾಯವಾಗಿರುವುದು ಸಮಸ್ಯೆಯನ್ನು ಬಗೆಹರಿಸಿದೆ.

ಜಲ ಮಂಡಳಿ ಏಪ್ರಿಲ್ ತನಕ 200 MLD ಪೂರೈಕೆ ಮಾಡಲಿದೆ. ಕೆಆರ್ ಎಸ್ ಪ್ರಮಾಣ ತಗ್ಗುತ್ತಿರುವುದು ಆತಂಕಕಾರಿಯಾದರೂ ಬೆಂಗಳೂರಿಗೆ ಅದರ ಬಿಸಿ ತಟ್ಟುವುದಿಲ್ಲ ಎಂದಿದ್ದಾರೆ. ಕೆಆರ್ ಎಸ್ ನಿಂದ 500 MLD ಪಡೆಯಬಹುದಾದರೂ ಸದ್ಯಕ್ಕೆ 250 MLD ಪಡೆಯಲಾಗಿದೆ. ತೊರೆಕಾಡನಹಳ್ಳಿ ಜಲಾಶಯ 135 MLD ಪೂರೈಕೆ ಸಾಮರ್ಥ್ಯ ಹೊಂದಿದೆ. ಇಲ್ಲಿಂದ 40 MLD ಮಾತ್ರ ಪಡೆಯಲಾಗುತ್ತಿದೆ.

ಅಕ್ರಮ ನೀರಿನ ಸಂಪರ್ಕ ಹಾಗೂ ನೀರು ಪೋಲಾಗುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಜಲ ಸಂಪರ್ಕಗಳು ಎಲೆಕ್ಟ್ರಾನಿಕ್ ಮೀಟರ್ ಗೆ ಒಳಪಡುವಂತೆ ನೋಡಿಕೊಳ್ಳಲಾಗಿದೆ.

ಜಲಮಂಡಳಿ ಮುಖ್ಯ ಇಂಜಿನಿಯರ್ ಟಿ ವೆಂಕಟರಾಜು ಪ್ರಕಾರ, ಅಕ್ರಮ ಜಲ ಸಂಪರ್ಕ ಗುರುತಿಸುವುದು ಮಂಡಳಿಗೆ ದೊಡ್ಡ ತಲೆನೋವಾಗಿದೆ. ಸುಮಾರು 16 ಲಕ್ಷ ಸಂಪರ್ಕಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ದಾಖಲಾಗಿದೆ. ಆದರೆ, ಲಭ್ಯ ಮಾಹಿತಿ ಪ್ರಕಾರ 7.15 ಲಕ್ಷ ಸಂಪರ್ಕಗಳು ಮಾತ್ರ ಇದೆ. ಶೇ 50ಕ್ಕೂ ಅಧಿಕ ಸಂಪರ್ಕಗಳು ಅಕ್ರಮವಾಗಿದೆ ಎಂದಿದ್ದಾರೆ.

ಇತ್ತೀಚೆಗೆ ಮೇಯರ್ ಜೊತೆ ಬಿಬಿಎಂಪಿ ಕಾರ್ಪೊರೇಟರ್ ಗಳು ತಮ್ಮ ವಾರ್ಡಿನ ಜಲ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾ.15 ರಿಂದ ಸಮಸ್ಯೆಗಳ ಪರಿಹಾರ ಕಾರ್ಯ ನಡೆಯುವ ಸುದ್ದಿ ಸಿಕ್ಕಿದೆ. BWSSB ಈಗ ಆನ್ ಲೈನ್ ಮೂಲಕ ಬಿಲ್ ಪಾವತಿ ಸೇವೆ ಕೂಡಾ ಒದಗಿಸುತ್ತಿದ್ದು, ದೂರು ಕೂಡಾ ಸಲ್ಲಿಸಬಹುದಾಗಿದೆ ಎಂದು ಜಲಮಂಡಳಿ ಹೇಳಿದೆ.

English summary
Bangalore will not face water problem till April said BWSSB stating that it has 200 MLD of water more than what it had in March 2012. the commissioning of the Cauvery stage IV phase 2, has ensured that the situation will not be too scary said MD Gaurav Gupta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X