• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಿಪೇಯ್ಡ್ ಮೊಬೈಲ್ ಚಲಾವಣೆಯಲ್ಲಿರಲು 20ರೂ ಸಾಕು

By Srinath
|

ನವದೆಹಲಿ, ಫೆ.26: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮತ್ತೊಮ್ಮೆ ಮೊಬೈಲ್ ಗ್ರಾಹಕರ ನೆರವಿಗೆ ಧಾವಿಸಿದೆ. ಫೆ. 23ರಂದು ಸ್ಪಷ್ಟ ಆದೇಶ ಹೊರಡಿಸಿರುವ ಟ್ರಾಯ್ ಪ್ರಿಪೇಯ್ಡ್ ಗ್ರಾಹಕರ ನಿಷ್ಕ್ರಿಯಗೊಂಡಿರುವ ಮೊಬೈಲ್ ಫೋನ್ ಖಾತೆಯಲ್ಲಿ ಕನಿಷ್ಠ 20 ರೂಪಾಯಿ ಉಳಿಕೆ ಇದ್ದರೆ ಅಂಥವರ ಸಂಪರ್ಕಗಳನ್ನು ಕಡಿತಗೊಳಿಸಲಾಗದು ಎಂದು ಸ್ಪಷ್ಟಪಡಿಸಿದೆ. ಮಾರ್ಚ್ 22ರಿಂದ ಇದು ಜಾರಿಗೆ ಬರಲಿದೆ.

ಅಂತಹ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲು 90 ದಿನಗಳವರೆಗೆ ಕಾದು ನೋಡಬೇಕಾಗುತ್ತದೆ ಎಂದೂ ಟ್ರಾಯ್ ತಿಳಿಸಿದೆ. ಗ್ರಾಹಕ ಹಿತರಕ್ಷಣೆಯ ಈ ತಿದ್ದುಪಡಿ ನಿಯಮವನ್ನು ಪ್ರಕಟಿಸಿರುವ ಟ್ರಾಯ್, ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡಿದ ನಂತರ ಪ್ರಿಪೇಯ್ಡ್ ಗ್ರಾಹಕರು ತಮ್ಮ ಮೊದಲಿನ ಸೇವೆಯನ್ನು ಉಳಿಸಿಕೊಳ್ಳುವ ವ್ಯವಸ್ಥೆಯನ್ನು ಟೆಲಿಕಾಂ ಸೇವಾದಾರರು ಆರಂಭಿಸಬೇಕು ಎಂದು ಸೂಚಿಸಿದೆ.

ಇದರರ್ಥ 90 ದಿನಗಳಾದರೂ ನಿಮ್ಮ ಪ್ರಿಪೇಯ್ಡ್ ಖಾತೆಯಲ್ಲಿ 20 ರೂಪಾಯಿ ಬ್ಯಾಲೆನ್ಸ್ ಇಲ್ಲಾಂದ್ರೆ ಅಂತಹ ಸಂಖ್ಯೆಯ ಮೊಬೈಲ್ ಸೇವೆಯನ್ನು ಸೇವಾ ಕಂಪನಿಗಳು ನಿಷ್ಕ್ರಿಯಗೊಳಿಸಬಹುದು.

ಟ್ರಾಯ್ ಇಂತಹ ಆದೇಶ ಏಕೆ ಹೊರಡಿಸಿದೆ ಅಂದ್ರೆ ಸರಾಸರಿ 6 ರೂಪಾಯಿಯಷ್ಟೇ ಬ್ಯಾಲೆನ್ಸ್ ಹೊಂದಿರುವ ಮತ್ತು 30 ದಿನಗಳಾದರೂ ಮೊಬೈಲ್ ಸೇವೆಯನ್ನು ಬಳಸದ ಸುಮಾರು 20 ಕೋಟಿ ಮೊಬೈಲ್ ಸೇವೆಗಳನ್ನು ಸೇವಾ ಕಂಪನಿಗಳು ರದ್ದುಗೊಳಿಸಿದ್ದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pre-paid Mobiles having balance of Rs 20 cannot be deactivated-TRAI.In a relief to consumers, the telecom regulator has announced that effective from March 22 inactive mobile connections of pre-paid customers cannot be shut down if they have a balance of Rs. 20 and the time period for considering 'inactive' has been set at 90 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more