ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಪ್ಪಾ ವರಸೆ! ಜೈಲಿನಿಂದಲೇ ಚುನಾವಣಾ ಭಾಷಣ

By Srinath
|
Google Oneindia Kannada News

Law gone to dogs: Ajay Chautala addresses rally from Tihar Jail on mobile
ನವದೆಹಲಿ, ಫೆ.25: ರಾಜಧಾನಿಯಲ್ಲಿ ತಿಹಾರ್ ಜೈಲು ಅಂತ ಒಂದಿದೆ. ಅಲ್ಲಿಂದು ಕಾನೂನನ್ನು ಅಪಹಾಸ್ಯಕ್ಕೀಡು ಮಾಡಿದ ಭೂಪ, ಯಾರದೇ ಅಂಜಿಕೆ-ಅಳುಕಿಲ್ಲದೆ ಚುನಾವಣೆ ಭಾಷಣ ಮಾಡಿ, ಚಪ್ಪಾಳೆ ಗಿಟ್ಟಿಸಿದ್ದಾನೆ.

ಏನೋ, ಜೈಲು ಪಾಲಾಗಿದ್ದರೂ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಈ ನಾಡಿನಲ್ಲಿ ಮಾಮೂಲು. ಆದರೆ ಜೈಲಿನಲ್ಲಿದ್ದುಕೊಂಡೇ liveನಲ್ಲಿ ಭಾಷಣ ಬಿಗೀತಾನೆ ಅಂದರೆ ಈ ದೇಶದ ದುರ್ಗತಿಗೆ ನಿಜಕ್ಕೂ ಮರುಕಪಡಬೇಕಾಗಿದೆ.

ಓಂ ಪ್ರಕಾಶ್ ಚೌತಾಲಾ ಎಂಬ ಮಾಜಿ ಉಪಪ್ರಧಾನಿ/ ಮಾಜಿ ಮುಖ್ಯಮಂತ್ರಿಯೊಬ್ಬ ಶಿಕ್ಷಕರ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ಮಗನ ಸಮೇತ ಜೈಲುಪಾಲಾದ ಸುದ್ದಿಯಿನ್ನೂ ನಿಮ್ಮ ಜ್ಞಾಪಕದಲ್ಲಿದೆಯಲ್ಲವೇ? ಆ ಪ್ರಕರಣದಲ್ಲಿ ಅಪ್ಪನ ಜತೆ ಅಂದು ತಿಹಾರಿನ ಜೈಲುಪಾಲಾಗಿದ್ದ ಪುತ್ರರತ್ನ ಅಜಯ್ ಚೌತಾಲಾ ಸೋನೆಪತ್ ನಲ್ಲಿ ಇಂದು ನಡೆದ ಚುನಾವಣೆ ಸಮಾವೇಶದಲ್ಲಿ ಮೊಬೈಲ್ ಮೂಲಕ ಜೈಲಿನಿಂದಲೇ ಭಾಷಣ ಬಿಗಿದಿದ್ದಾನೆ.

ಹಾಗಾದರೆ ಈ ಗಣ್ಯ ಅಪ್ಪ-ಮಗನಿಗೆ ಜೈಲಿನಲ್ಲಿ ಇನ್ನೂ ಏನೆಲ್ಲ ರಾಜಾತಿಥ್ಯ ದೊರೆಯುತ್ತಿರಬಹುದೋ, ಅಲ್ವಾ?

ಏನಾಯಿತೆಂದರೆ ತಿಹಾರ್ ಜೈಲಿನಲ್ಲಿರುವ ತನ್ನಪ್ಪ ಹರಿಯಾಣಾ ಸೋನೆಪತ್ ನಲ್ಲಿ ಚುನಾವಣೆ ಭಾಷಣ ಮಾಡಿದರೆ ಹೇಗೆ ಎಂಬ ಐಡಿಯಾ ಬಂದಿದ್ದೇ ತಡ, ಅಪ್ಪ ಅಜಯ್ ಚೌತಾಲಾ ಜತೆ ಆತನ ಪುತ್ರ ದುಶ್ಯಂತ ಮೊಬೈಲ್ ಫೋನಿನಲ್ಲಿ ಮಾತನಾಡಿದ್ದಾನೆ. ಹಾಗೇ ಮಾತನಾಡುತ್ತಾ 'ಅಪ್ಪಾ ಜೈಲಿನಲ್ಲಿರುವುದಕ್ಕೆ ನೀನೇನೂ ಭಯ ಪಡಬೇಡ. ಇಲ್ಲಿ ಚುನಾವಣೆ ಸಭೆ ಆಯೋಜಿಸಿದ್ದೇನೆ. ನೀನೀಗ ಭಾಷಣ ಮಾಡು. ನಾನು ಮೊಬೈಲ್ ಅನ್ನು ಸ್ಪೀಕರ್ ಮೋಡ್ ಗೆ ಹಾಕುತ್ತೇನೆ. ನೀನು ಮಾತನಾಡು' ಎಂದಿದ್ದಾನೆ.

ಇಂತಹ ಸುವರ್ಣಾವಕಾಶಕ್ಕೇ ಕಾಯುತ್ತಿದ್ದ ಅಪ್ಪ ಅಜಯ್ ಚೌತಾಲಾ, ಯಾವುದೇ ಎಗ್ಗು-ಸಿಗ್ಗು ಇಲ್ಲದೆ ಭಾಷಣ ಬಿಗಿದಿದ್ದಾನೆ. ಜತೆಗೆ, ತನ್ನ ಜತೆ ಜೈಲುಪಾಲಾಗಿರುವ ಅಪ್ಪ ಓಂ ಪ್ರಕಾಶ್ ಚೌತಾಲಾ ಆರೋಗ್ಯದ ಬಗ್ಗೆಯೂ ಅಪ್ ಡೇಟ್ ಮಾಡಿದ್ದಾನೆ, ಪುಣ್ಯಾತ್ಮ. ಜೈ ಭಾರತಾಂಬೆ!

English summary
Law gone to dogs: Ajay Chautala addresses rally from Tihar Jail on mobile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X