ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೆ, ಆಪರೇಷನ್ ಮಾಡಬಾರದಿತ್ತು: ಡಾ. ಯಡಿಯೂರಪ್ಪ

By Srinath
|
Google Oneindia Kannada News

dr-yeddyurappa-regret-over-resorting-to-operation-lotus
ಬೆಂಗಳೂರು,ಫೆ. 25: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಡವಾಗಿ ಜ್ಞಾನೋದಯವಾದಂತಿದೆ. ತಮ್ಮ ಸರಕಾರವನ್ನು ಉಳಿಸಿಕೊಳ್ಳಲು ಆಪರೇಷನ್ ಕಮಲ ನಡೆಸಿ, ತನ್ಮೂಲಕ ರಾಜಕೀಯ ಅನೈತಿಕತೆಗೆ ಹೊಸ ಭಾಷ್ಯ ಬರೆದಿದ್ದಕ್ಕೆ ಈಗ ಪರಿತಪಿಸುತ್ತಿದ್ದಾರೆ.

ಇದೇನು ಚುನಾವಣೆ ಹೊಸ್ತಿಲಲ್ಲಿ ಡಾ.ಯಡಿಯೂರಪ್ಪ ಅವರ ಪ್ರಾಯಶ್ಚಿತ್ತ/ಪಶ್ಚಾತಾಪವೋ ಅಥವಾ ನಿಜಕ್ಕೂ ಅದರ ಬಗ್ಗೆ ಖುದ್ದು ಅವರಿಗೇ ಅಸ್ಯವುಂಟಾಗಿದೆಯೋ ಎಂಬುದನ್ನು ತಿಳಿಯಲು ಮುಂದಿನ ವಿಧಾನಸಭೆಯೇ ಉತ್ತರ ನೀಡಬೇಕಿದೆ. ಏಕೆಂದರೆ 'ಅಧಿಕಾರದಾಹಿ ಯಡಿಯೂರಪ್ಪ' ಮಾತುಗಳನ್ನು ಅಷ್ಟು ಸುಲಭವಾಗಿ ನಂಬುವಂತಿಲ್ಲ.

ಪ್ರಸ್ತುತ ಕೆಜೆಪಿ ಎಂಬ ಹೊಸ ಪಕ್ಷಕ್ಕೆ ಸೇರ್ಪಡೆಯಾಗಿ ಅದರ ಅಧ್ಯಕ್ಷರಾಗುವ ಮಟ್ಟಕ್ಕೆ ಬಂದಿರುವ ಯಡಿಯೂರಪ್ಪ ಅವರು ನಿನ್ನೆ ಭಾನುವಾರ ಪಕ್ಷದ ಕಾರ್ಮಿಕ ಘಟಕವನ್ನು ಉದ್ಘಾಟಿಸಿ 'ಆಪರೇಷನ್ ಕಮಲ'ದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ರಾಜಕೀಯ ಪ್ರಯೋಗಕ್ಕೆ ತಾವೇ ಬಲಿಪಶು ಆಗಬೇಕಾಯಿತು ಎಂಬ ಅಸಹಾಯಕತೆಯೂ ಅವರನ್ನು ಕಾಡುತ್ತಿದೆಯಂತೆ. ಸಾಂಖ್ಯಿಕ ಬಲ ಹೆಚ್ಚಿಸಿಕೊಳ್ಳಲು ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಿ, ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವಂತಾಗಲು ಅವಕಾಶ ಮಾಡಿಕೊಟ್ಟಿದ್ದೇನೆ. ಆದರೆ ನಾನು ಮುಖ್ಯಮಂತ್ರಿಯಾಗಿರಲು ನಮ್ಮವರೇ ಬಿಡಲಿಲ್ಲ.

ನಮ್ಮದೇ ಪಕ್ಷದ ದಿಲ್ಲಿ ಮತ್ತು ಬೆಂಗಳೂರಿನ ನಾಯಕರು ನನ್ನ ವಿರುದ್ಧ ಖಾಸಗಿ ದೂರು ಸಲ್ಲಿಸಿ, 24 ದಿನ ಜೈಲು ವಾಸ ಅನುಭವಿಸುವಂತೆ ಮಾಡಿದರು. ಇದೆಲ್ಲದರ ಕುರಿತು ಚಿಂತಿಸಿದರೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂದು ತಿಳಿಯದೆ ಗೊಂದಲದಲ್ಲಿದ್ದೇನೆ' ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಸ್ಥಳೀಯ ಸಂಸ್ಥೆ ಚುನಾವಣೆಯು ಪ್ರಾದೇಶಿಕ ಪಕ್ಷಗಳ ಬಲವರ್ಧನೆಗೆ ಸುವರ್ಣಾವಕಾಶ ಒದಗಿಸಿದೆ. ಅದನ್ನು ಕೆಜೆಪಿ ಸದ್ಬಳಕೆ ಮಾಡಿಕೊಳ್ಳಲಿದೆ. ಕೆಜೆಪಿ ಬಲ ಏನೆಂಬುದನ್ನು ತೋರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಚುನಾವಣೆ ಕೆಜೆಪಿ ಬಲವರ್ಧನೆಗೆ ಸುವರ್ಣಾವಕಾಶವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಈಶ್ವರಪ್ಪ ಸಮರ್ಥನೆಯೇ ಬೇರೆ: ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಕೆಎಸ್ ಈಶ್ವರಪ್ಪ ಅವರು ಹೇಳುವುದೇ ಬೇರೆ...
'ಪಕ್ಷಾಂತರ ಎಂಬುದು ರಾಜಕಾರಣದ ಒಂದು ಭಾಗವಾಗಿ ಹೋಗಿದೆ. ಅದು ಆಯಾ ಸಂದರ್ಭಕ್ಕೆ ಅನುಗುಣವಾಗಿ ನಡೆದುಕೊಂಡು ಬರುತ್ತಿದೆ. ಅದನ್ನು ತಪ್ಪು ಎಂದು ನಾನು ಹೇಳುವುದಿಲ್ಲ' ಎಂದಿದ್ದಾರೆ. 'ಆದರೆ, ಆಪರೇಷನ್ ಕಮಲದಿಂದ ಯಡಿಯೂರಪ್ಪನವರಿಗೆ ಏನೂ ನಷ್ಟ ಆಗಿಲ್ಲ. ಆಗಿರುವುದೆಲ್ಲ ಬಿಜೆಪಿಗೇ' ಎಂಬುದು ಈಶ್ವರಪ್ಪನವರ ಖಚಿತ ಅಭಿಪ್ರಾಯ.

English summary
Dr Yeddyurappa regrets over resorting to Operation Lotus to save BJP govt. Karnataka Janata Paksha (KJP) president B.S. Yeddyurappa has expressed regret over resorting to ‘Operation Lotus’ to boost the strength of the Bharatiya Janata Party in the Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X