ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲ್ ಗಾಗಿ ಡೀಲ್, ಸೋಮ, ಸುರೇಶ್ ಗಡಗಡ

By Mahesh
|
Google Oneindia Kannada News

SC Notice to Gali Brother Somashekar Reddy
ನವದೆಹಲಿ, ಫೆ.25: ಬೇಲ್‌ಗಾಗಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಸಹೋದರ, ಶಾಸಕ ಸೋಮಶೇಖರ್ ರೆಡ್ಡಿ, ಕಂಪ್ಲಿ ಶಾಸಕ ಸುರೇಶ್ ಬಾಬು ಹಾಗೂ ನ್ಯಾ. ಪಟ್ಟಾಭಿರಾಮರಾವ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.25)ನೋಟಿಸ್ ಜಾರಿ ಮಾಡಿದೆ.

ಬೇಲ್ ಡೀಲ್ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದ ಈ ನಾಲ್ವರು ಆರೋಪಿಗಳ ಜಾಮೀನನ್ನು ರದ್ದು ಮಾಡಬೇಕು ಎಂದು ಕೋರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 6 ವಾರದಲ್ಲಿ ಉತ್ತರಿಸುವಂತೆ ನಾ.ಪಟ್ಟಾಭಿರಾಮರಾವ್ ಸೇರಿದಂತೆ ಸೋಮಶೇಖರ ರೆಡ್ಡಿ ಮತ್ತು ತಂಡಕ್ಕೆ ನೋಟಿಸ್ ಜಾರಿ ಮಾಡಿದೆ.

ಹೈಕೋರ್ಟಿನಿಂದ ಪಡೆದ ಜಾಮೀನು ರದ್ದಾದರೆ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಮತ್ತೆ ಜೈಲು ಸೇರುವ ಸಾಧ್ಯತೆ ಇದೆ. ಹೀಗಾಗಿ ಬಿಎಸ್ ಆರ್ ಪಕ್ಷದಿಂದ ಚುನಾವಣೆ ಎದುರಿಸುವ ಕನಸು ಕಾಣುತ್ತಿದ್ದ ಸೋಮಶೇಖರ ರೆಡ್ಡಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆಯಿದೆ.

ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿದಂತೆ 7 ಆರೋಪಿಗಳಿಗೆ ಆಂಧ್ರ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದಕ್ಕೆ ಆಕ್ಷೇಪಿಸಿ ಎ.ಸಿ.ಬಿ ನ್ಯಾಯಾಲಯ ಜ.28ರಂದು ಸುಪ್ರೀಂ ಕೋರ್ಟ್ ಗೆ ಜ.28 ರಂದು ಮೇಲ್ಮನವಿ ಸಲ್ಲಿಸಿತ್ತು.

ಬೇಲ್ ಗಾಗಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ಧನ ರೆಡ್ಡಿ, ಸೋಮಶೇಖರ ರೆಡ್ಡಿ, ಕಂಪ್ಲಿ ಶಾಸಕ ಸುರೇಶ್ ಬಾಬು, ಸೂರ್ಯ ಪ್ರಕಾಶ್ ಬಾಬು, ದಶರಥರಾಮ ರೆಡ್ಡಿ, ಜಡ್ಜ್ ಗಳಾದ ಲಕ್ಷ್ಮಿ ನರಸಿಂಹ, ಪ್ರಭಾಕರ್ ರಾವ್ ಅವರಿಗೆ ಅಕ್ಟೋಬರ್ 31ರಂದು ಆಂಧ್ರ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ಓಬಳಾಪುರಂ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿಗೆ ಮೇ11 ರಂದು ಜಡ್ಜ್ ಪಟ್ಟಾಭಿರಾಮರಾವ್ ಅವರು ಜಾಮೀನು ನೀಡಿದ್ದರು. ನಂತರ ಸಿಬಿಐ ತನಿಖೆಯಿಂದ ಜಡ್ಜ್ ಹಾಗೂ ಗಾಲಿ ರೆಡ್ಡಿ ನಡುವೆ ನಡೆದಿದ್ದ ಡೀಲ್ ಬಹಿರಂಗಗೊಂಡಿತ್ತು. ಜೂ.19ರಂದು ರಾವ್ ಅವರನ್ನು ಅಮಾನತುಗೊಳಿಸಲಾಗಿತ್ತು ಹಾಗೂ ಬಂಧಿಸಲಾಗಿತ್ತು.

ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಶ್ರೀಕಾಕುಲಂ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಡಿ. ಪ್ರಭಾಕರ ರಾವ್‌ ಅವರನ್ನು ಅಮಾನತುಗೊಳಿಸಲಾಗಿತ್ತು. ಟ್ಟಾಭಿರಾಮರಾವ್ ಪುತ್ರ ರವಿಚಂದ್ರ, ಹಾಗೂ ಅವರ ಬಹುಕಾಲದ ಗೆಳೆಯ ಜಡ್ಜ್ ಚಲಪತಿರಾವ್, ರೌಡಿ ಶೀಟರ್ ಯಾದಗಿರಿರಾವ್ ಹಾಗೂ ಹೈದರಾಬಾದಿನ ಉದ್ಯಮಿ ಬಿ ಸೂರ್ಯ ಪ್ರಕಾಶ್ ಅವರನ್ನು ಜೈಲಿಗೆ ತಳ್ಳಲಾಗಿತ್ತು.ಮೊದಲ ಎಫ್ ಐಆರ್ ನಲ್ಲಿ 8 ಜನರ ಹೆಸರಿದೆ. ಇನ್ನೊಂದು ಎಫ್ ಐಆರ್ ನಲ್ಲಿ 5 ಜನರ ಹೆಸರಿಸಲಾಗಿತ್ತು.

English summary
Bail deal scam: Supreme court today(Feb.25) issued a notice to Gali Janardhana Reddy's brother MLA Somashekar Reddy, Kampli MLA Suresh Babu, Justice Pattabhiramrao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X