ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕರರ ಭವಿಷ್ಯ ನಿಧಿ ಬಡ್ಡಿ ಶೇ 8.5ಕ್ಕೆ ಏರಿಕೆ

By Mahesh
|
Google Oneindia Kannada News

Provident Fund deposits to fetch 8.5% interest for 2012-13
ನವದೆಹಲಿ, ಫೆ. 25: ಸುಮಾರು ಐದು ಕೋಟಿ ಉದ್ಯೋಗಿಗಳಿಗೆ ಅನ್ವಯವಾಗುವಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ 2012-13ನೇ ಸಾಲಿನಲ್ಲಿ ತನ್ನ ಚಂದಾದಾರರಿಗೆ ತುಸು ಹೆಚ್ಚಿಗೆ ಬಡ್ಡಿ ನೀಡಲು ನಿರ್ಧರಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ನೀಡಿದ್ದ ಬಡ್ಡಿದರ ಶೇ 8.25ರ ಬದಲಿಗೆ ಶೇ 8.5 ಭವಿಷ್ಯ ನಿಧಿ ಬಡ್ಡಿಯನ್ನು ನಿಗದಿಪಡಿಸಲಾಗಿದೆ ಎಂದು EPFO ಹೇಳಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸಲಹಾ ಮಂಡಳಿಯಾಗಿರುವ ಹಣಕಾಸು ಮತ್ತು ಹೂಡಿಕೆ ಸಮಿತಿ ನೀಡಿದ ಸಲಹೆಯಂತೆ ಪ್ರಸಕ್ತ ವರ್ಷ ನೌಕರರ ಭವಿಷ್ಯ ನಿಧಿಗೆ ಶೇ 8.5 ಬಡ್ಡಿಯನ್ನು ನೀಡಲು ತೀರ್ಮಾನಿಸಿದ್ದು, ಸೋಮವಾರ(ಫೆ.25) ಅಂತಿಮ ಆದೇಶ ಹೊರಡಿಸಿದೆ.

ಶೇ 8.6ರ ಬಡ್ಡಿ ದರದಲ್ಲಿ ಚಂದಾದಾರರಿಗೆ ಹಣ ಪಾವತಿಸಿದಲ್ಲಿ 240.49 ಕೋಟಿ ರೂ ಕೊರತೆಯನ್ನು ಎದುರಿಸುವ ಸಾಧ್ಯತೆಗಳಿರುವುದರಿಂದ ಭವಿಷ್ಯ ನಿಧಿ ಠೇವಣಿಗಳಿಗೆ ಶೇ. 8.5 ಬಡ್ಡಿ ದರದಲ್ಲಿ ಹಣವನ್ನು ಪಾವತಿಸುವುದರಿಂದ 4.13 ಕೋಟಿ ರೂ. ಉಳಿಕೆಯಾಗಲಿದೆ. 2010-11ನೇ ಸಾಲಿನಲ್ಲಿ ಸಂಸ್ಥೆ ಶೇ. 9.5 ಬಡ್ಡಿ ದರವನ್ನು ಪಾವತಿಸಿದ್ದರೆ ಕಳೆದ ಸಾಲಿನಲ್ಲಿ ಶೇ. 8.25 ಬಡ್ಡಿ ದರವನ್ನು ಪಾವತಿಸಿತ್ತು.

2012-23ನೇ ಸಾಲಿನಲ್ಲಿ EPFO ಬಳಿ 2,63,000 ಕೋಟಿ ರೂ. ಕಾಪು ನಿಧಿ ಸಂಗ್ರಹಗೊಂಡಿದ್ದು, 21,147 ಕೋಟಿ ರೂ. ನಿವ್ವಳ ಆದಾಯದ ನಿರೀಕ್ಷೆಯಲ್ಲಿದೆ. ಸಾಮಾನ್ಯವಾಗಿ EPFO ವರ್ಷದ ಆರಂಭದಲ್ಲೇ ಬಡ್ಡಿದರ ಏರಿಕ್ ಬಗ್ಗೆ ಘೋಷಿಸುತ್ತದೆ. ಆದರೆ, ಈ ಬಾರಿ ಏರಿಕೆ ಬಗ್ಗೆ ತಡವಾಗಿ ಘೋಷಿಸಿದೆ.

English summary
Retirement fund body EPFO today(Feb.25) decided to pay 8.5 per cent interest rate to its over five crore subscribers on their PF deposits for 2012-13, higher than 8.25 per cent provided in the previous fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X