ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಸ್ಫೋಟ: NIA ತಂಡ ಸದ್ಯದಲ್ಲೇ ಪರಪ್ಪನ ಜೈಲಿಗೆ

By Srinath
|
Google Oneindia Kannada News

Hyderabad Twin Blasts- NIA team may question Abdul Nasser Madani in Bangalore
ಹೈದರಾಬಾದ್, ಫೆ.23: ಬೆಂಗಳೂರು ಮತ್ತು ಹೈದರಾಬಾದ್ ಸ್ಫೋಟದ ರೂವಾರಿಗಳು ಹತ್ತಿರದ ಸಂಬಂಧಿಗಳು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಇತ್ತೀಚೆಗೆ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಲ್ಲಿ ಆರೈಕೆ ಮಾಡಿಕೊಂಡು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿದ್ದಾನೆ. ಈ ನಡುವೆಯೇ ಹೈದರಾಬಾದಿನಲ್ಲಿ ಅವಳಿ ಸ್ಫೋಟ ಸಂಭವಿಸಿದೆ.

ಹಾಗಾದರೆ ಹೈದರಾಬಾದ್ ಅವಳಿ ಸ್ಫೋಟಕ್ಕೂ ಅಬ್ದುಲ್ ನಾಸೀರ್ ಮದನಿಗೂ ಲಿಂಕ್ ಇದೆಯಾ? ಎಂದು ತಲೆಕೆಡಿಸಿಕೊಳ್ಳಲು ಆರಂಭಿಸಿದ್ದಾರೆ. ಜತೆಗೆ, ಸದ್ಯಕ್ಕೆ ಹೈದರಾಬಾದ್ ಅವಳಿ ಸ್ಫೋಟದ ಪ್ರಮುಖ ರೂವಾರಿ ಎಂದು ಗುರುತಿಸಲಾಗಿರುವ ಅಬು ಉಸ್ತಾದ್ ಮತ್ತು ಅಬ್ದುಲ್ ನಾಸೀರ್ ಮದನಿ ಮಧ್ಯೆ ನಿಕಟ ಸಂಪರ್ಕವಿದೆ. ಇದು ಪೊಲೀಸರ ಅನುಮಾನವನ್ನು ಮತ್ತಷ್ಟು ಗಾಢವಾಗಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ತಂಡ ಸದ್ಯದಲ್ಲೇ ಬೆಂಗಳೂರಿಗೆ ಬಂದು ಪರಪ್ಪನ ಅಗ್ರಹಾರ ಜೈಲುವಾಸಿಗಳನ್ನು ವಿಚಾರಿಸಿಕೊಳ್ಳಲಿದ್ದಾರೆ. ಈ ಸಂಭಂದ ಅದಾಗಲೇ ಉನ್ನತಾಧಿಕಾರಿಗಳ ಮಧ್ಯೆ ಮಾತುಕತೆ ನಡೆದಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

ಈ ಅಬು ಉಸ್ತಾದ್ ಹೈದರಾಬಾದಿನಲ್ಲಿ 'ನೂರಿಷಾ ತರೀಖತ್' ಎಂಬ ಮದರಸಾ ಶಾಲೆಯ ಮುಖ್ಯಸ್ಥನೂ ಹೌದು. ಈ ಮದರಸಾ ಮೂಲಕವೇ ಜಿಹಾದ್ ಗಾಗಿ ಅಬು ಉಸ್ತಾದ್ ಯುವಕರನ್ನು ನೇಮಕಾತಿ ಮಾಡಿಕೊಳ್ಳುವುದು ಎಂಬ ಮಾಹಿತಿಯೂ ಇದೆ. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿರುವ ಬಹುತೇಕ ಆರೋಪಿಗಳು ಇದೇ ಮದರಸಾ ಶಾಲೆಯ ಕೂಸುಗಳು!

ಹೈದರಾಬಾದ್ ಅವಳಿ ಸ್ಫೋಟದ ಆರೋಪಿಗಳಾದ ಸೈನುದ್ದೀನ್ ಮತ್ತು ಅವನ ಪುತ್ರ ಷಫಾರುದ್ದೀನ್ ಅಬು ಉಸ್ತಾದನ ಮಾವನ ಮನೆಯವರು. ಅಬು ಉಸ್ತಾದನ ಮಗಳಾದ ಸಾಫಿಯಾ ಮದ್ವೆಯಾಗಿರುವುದು ನಿಜಾಮುದ್ದೀನನನ್ನು. ಈ ನಿಜಾಮುದ್ದೀನ್ ಷಫಾರುದ್ದೀನನ ಸೋದರ.

ಮೇಲ್ನೋಟಕ್ಕೆ ಗೋಚರಿಸುವಂತೆ ಉಸ್ತಾದ್ ಮತ್ತು ಮದನಿ ಕ್ಲೋಸ್ ಫ್ರೆಂಡ್ಸ್. ಹೇಗೆಂದರೆ, ತನ್ನ ಹೈದರಾಬಾದಿನ ಮದರಸಾಗಳಲ್ಲಿ ಮದನಿಗೆ ಭಾಷಣ ಮಾಡಲು ಅನುವು ಮಾಡಿಕೊಡುತ್ತಿದ್ದ.

English summary
Hyderabad Twin Blasts- NIA team may question Abdul Nasser Madani in Bangalore. The Main conspirator in the Bangalore serial blasts of July 2008 Abdul Nassar Madani presently jailed in Bangalore Parappana Agrahara central jail is a colse associate of one of the prime suspects in the Hyderabad blasts, Abu Ustad. As such NIA team may question Abdul Nasser Madani in Bangalore shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X