• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಜೆಪಿ ಪಕ್ಷದ ಚುನಾವಣಾ ಚಿನ್ಹೆ ತೆಂಗಿನಕಾಯಿ

By Srinath
|

ಬೆಂಗಳೂರು, ಫೆ.22: ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಆ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಎಬ್ಬಿಸಿದ್ದ ಗದ್ದಲ/ ಗೊಂದಲಗಳಿಗೆ ಅಧಿಕೃತವಾಗಿ ಮಂಗಳ ಹಾಡಲಾಗಿದೆ.

ಈ ಸಂಬಧ ಕೇಂದ್ರ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದ್ದು, KJP ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇಮಕಕ್ಕೆ ಮಾನ್ಯತೆ ನೀಡಿದೆ. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ ಎಂದು ಪದ್ಮನಾಭ ಪ್ರಸನ್ನ ಕುಮಾರ್ ಮತ್ತೆ ವರಾತ ತೆಗೆದಿದ್ದಾರೆ. ಜತೆಗೆ, ತಾವೇ ಕೆಜೆಪಿ ಅಧ್ಯಕ್ಷರೆಂದೂ ಮತ್ತು ಈ ಬಾರಿ ಚುನಾವಣೆಗೆ ತಮ್ಮ ಪಕ್ಷದಿಂದ ಯಾರನ್ನೂ ಕಣಕ್ಕಿಳಿಸುತ್ತಿಲ್ಲ ಎಂದೂ ಹೇಳಿದ್ದಾರೆ.

ಗುರುವಾರ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಮೋದ್‌ ಕುಮಾರ್‌ ಶರ್ಮಾ, ಅದರ ಪ್ರತಿಯೊಂದನ್ನು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೂ ಕಳುಹಿಸಿಕೊಟ್ಟಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ತದನಂತರ ವಿಧಾನಸಭೆ ಚುನಾವಣೆ ವೇಳೆ ಭಾರಿ ಮುಜುಗರಕ್ಕೀಡಾಗುವುದು ತಪ್ಪಿದಂತಾಗಿದೆ.

ಇದೇ ವೇಳೆ 'ಒಂದು ಸಂಪೂರ್ಣ ತೆಂಗಿನಕಾಯಿ ಮತ್ತು ಅದಕ್ಕೆ ಅಂಟಿಕೊಂಡಂತೆ ತೆಂಗಿನಕಾಯಿಯ ಅರ್ಧ ಹೋಳು (ಅಂದರೆ ಒಂದೂವರೆ ತೆಂಗಿನಕಾಯಿ) ' ಚಿತ್ರವು ತಮ್ಮ ಪಕ್ಷಕ್ಕೆ ಚುನಾವಣೆ ಚಿಹ್ನೆಯಾಗಿ ಲಭಿಸಿದೆ ಎಂದು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.

English summary
The Chief Election Commission has officiallly sent a letter admitting Former Karnataka chief minister BS Yeddyurappa as the Karnataka Janata Party (KJP) President. Also, BSY informed that his party has got the symbol of one full coconut and a atteched half coconut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more