ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕುಂಭಮೇಳಕ್ಕೆ ಯಡಿಯೂರಪ್ಪ ಬಂದಿದ್ರು

By Mahesh
|
Google Oneindia Kannada News

ದಕ್ಷಿಣ ಕಾಶಿ ತಿರಮಕೂಡಲು ನರಸೀಪುರದಲ್ಲಿ ಫೆ.23ರಿಂದ 25ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಮಹಾಕುಂಭಮೇಳಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕಾವೇರಿ, ಕಪಿಲಾ, ಸ್ಪಟಿಕ ಈ ಮೂರು ನದಿಗಳ ತ್ರಿವೇಣಿ ಸಂಗಮ ಸ್ಥಳದಲ್ಲಿ ನಡೆಯುವ ಕುಂಭಮೇಳಕ್ಕೆ ಜಿಲ್ಲಾಡಳಿತ ಅಂತಿಮ ಸಿದ್ಧತೆಯಲ್ಲಿದೆ.

2009ರ ನಂತರ ಈ ಸಂಗಮ ಕ್ಷೇತ್ರ ಭಕ್ತಾದಿಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಸುತ್ತೂರು ಮಠ. ಯಡಿಯೂರಪ್ಪ ಅವರು ಕುಂಭಮೇಳಕ್ಕೆ ಆಗಮಿಸಿ ಪುಣ್ಯಸ್ನಾನ ಕೈಗೊಂಡಿದ್ದಲ್ಲದೆ, ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ನಂತರ ರವಿಶಂಕರ್ ಗುರೂಜಿ ಸೇರಿದಂತೆ ಅನೇಕ ಧಾರ್ಮಿಕ ಮುಖಂಡ ಈ ಕುಂಭಮೇಳಕ್ಕೆ ಆಗಮಿಸಿ ಭಕ್ತಾದಿಗಳಿಗೆ ಹುರುಪು ತುಂಬಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಕುಂಭಮೇಳಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮಫ್ತಿಯಲ್ಲಿರುವ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಳ್ಳತನ ಮತ್ತು ಇನ್ನಿತರ ಅಕ್ರಮ ಚಟುವಟಿಕೆ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ತಿಳಿಸಿದ್ದಾರೆ.

ಫೆ.22 ರಾತ್ರಿಯಿಂದ ಫೆ.25ರ ರಾತ್ರಿ ತನಕ ಮರಳು ಲಾರಿಗಳು ಓಡಾಡದಂತೆ ಬಂದ್ ಮಾಡಲಾಗುವುದು. 3 ಭಾಗದಲ್ಲಿಯೂ ಸಹ ತಾತ್ಕಾಲಿಕವಾಗಿ ಬಸ್ ನಿಲ್ದಾಣದ ವ್ಯವಸ್ಥೆ ಮಾಡಿ ಸಂಚಾರ ದಟ್ಟಣೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಕುಂಭಮೇಳಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಆಸ್ಪತ್ರೆಗಳು ಹಾಗೂ ದೇವಸ್ಥಾನ ಹಾಗೂ ಇನ್ನಿತರ ಸ್ವಚ್ಛತೆಯನ್ನು ಕಾಪಾಡಲು ವ್ಯವಸ್ಥೆ ಮಾಡಲಾಗಿದೆ. ಕೆಲವು ಸಂಘ-ಸಂಸ್ಥೆಗಳು ಹಾಗೂ ಮಠಗಳು ಅನ್ನಸಂತರ್ಪಣೆ ವ್ಯವಸ್ಥೆ ಮಾಡಿರುವುದರಿಂದ ಅಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಟಿ ನರಸೀಪುರ ಕುಂಭಮೇಳ

ಟಿ ನರಸೀಪುರ ಕುಂಭಮೇಳ

ನದಿಯ ಸುತ್ತಲೂ ನುರಿತ ಈಜುಗಾರರನ್ನು ನೇಮಿಸಲಾಗಿದ್ದು, ಅವರಿಗೆ ಸ್ವಿಮ್ಮಿಂಗ್ ಜಕೇಟ್ ನೀಡಲಾಗಿದೆ. ಕೆಲವೆಡೆ 5 ರಿಂದ 10 ಅಡಿ ಆಳವಿದ್ದು, ಅಂತಹ ಸ್ಥಳಕ್ಕೆ ಭಕ್ತಾಧಿಗಳು ಹೋಗದಂತೆ ಎಚ್ಚರವಹಿಸಬೇಕು. ನಿಗದಿತ ಸ್ಥಳದಲ್ಲೇ ಪುಣ್ಯ ಸ್ನಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಅಪಾಯವಿರುವ ಭಾಗಗಳಲ್ಲಿ ಬ್ಯಾರಿಕೇಡ್ ಹಾಕುವ ಮುಖಾಂತರ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮೇಗೌಡ ಹೇಳಿದರು.

ಟಿ ನರಸೀಪುರ ಕುಂಭಮೇಳ

ಟಿ ನರಸೀಪುರ ಕುಂಭಮೇಳ

ಭಕ್ತಾಧಿಗಳಿಗೆ ಯಾವುದೇ ಕ್ಷಣದಲ್ಲಿ ಅಪಾಯವಾದರೂ ಮಾಹಿತಿ ನೀಡಲು ಹಾಗೂ ಮಾಹಿತಿ ಕೊಡಲು ಪ್ರತಿ ಸಿಬ್ಬಂದಿಗಳಿಗೆ ವಾಕಿ ಟಾಕಿಗಳನ್ನು ನೀಡಲಾಗಿದ್ದು, ತಕ್ಷಣಕ್ಕೆ ಮಾಹಿತಿ ಕಲೆಹಾಕಬಹುದು. ಅಗಸ್ತ್ಯೇಶ್ವರ ದೇವಸ್ಥಾನದಿಂದ ಧಾರ್ಮಿಕ ಸಭೆ ನಡೆಯುವ ನಡುಹೊಳೆ ಬಸಪ್ಪ ದೇವರ ಹತ್ತಿರ ಹೋಗಲು ಮರಳು ಕಟ್ಟಿದ ಮೂಟೆಗಳನ್ನು ಇಟ್ಟು ತಾತ್ಕಾಲಿಕವಾಗಿ ಸೇತುವೆ ನಿರ್ಮಾಣದ ವ್ಯವಸ್ಥೆ ಮಾಡಲಾಗಿದೆ.

ಟಿ ನರಸೀಪುರ ಕುಂಭಮೇಳ

ಟಿ ನರಸೀಪುರ ಕುಂಭಮೇಳ

ಗುಂಜ ನರಸಿಂಹಸ್ವಾಮಿ ದೇವಸ್ಥಾನದ ಕಡೆಯಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಡೀಸೆಲ್ ಬೋಟ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆಯಿಂದ ರಾತ್ರಿ ತನಕ ಈ ವ್ಯವಸ್ಥೆ ಇರುತ್ತದೆ. ಅಲ್ಲದೇ ಸಹಾಯಕ್ಕಾಗಿ ಎನ್‌ಸಿಸಿ ಹಾಗೂ ಸ್ಕೌಟ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು

ಟಿ ನರಸೀಪುರ ಕುಂಭಮೇಳ

ಟಿ ನರಸೀಪುರ ಕುಂಭಮೇಳ

ಕುಂಭಮೇಳದಲ್ಲಿ ಅನಗತ್ಯ ದೃಶ್ಯಗಳನ್ನು ಸೆರೆಹಿಡಿಯುವ ಕಿಡಿ ಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸುವ ಬಗ್ಗೆ ಚಿಂತಿಸಲಾಗಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಈ ಬ್ಗಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು
ಎಂದು ದಿಲೀಪ್ ತಿಳಿಸಿದರು.

ಟಿ ನರಸೀಪುರ ಕುಂಭಮೇಳ

ಟಿ ನರಸೀಪುರ ಕುಂಭಮೇಳ

ಇಲ್ಲಿಯ ಶಿವನಿಗೆ ಅಗಸ್ತ್ಯೇಶ್ವರನೆಂದೇ ಹೆಸರು. ರುದ್ರಪಾದ, ಗುಂಜಾ ನರಸಿಂಹ, ಕೆಂಡದ ಕೊಪ್ಪಲು, ಆನಂದೇಶವರ, ಭಿಕ್ಷೇಶ್ವರ, ಅಶ್ವತ್ಥಾಮ ವೃಕ್ಷದ ಜತೆಗೆ ಇಲ್ಲಿ ಕಾವೇರಿ, ಕಪಿಲಾ ಹಾಗೂ ಸ್ಫಟಿಕ ಸರೋವರಗಳ ಸಂಗಮವಿದೆ. ಈ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ, ಸಪ್ತ ಜನ್ಮ ಕೃತ ಪಾಪಗಳೂ ಪರಿಹಾರವಾಗುತ್ತವೆ

English summary
The three-day ninth Kumbh Mela will be held at Triveni Sangama in T Narsipura from February 23 to 25. One call recall in 2009 then CM BS Yeddyurappa visited and took bath at Cauvery river Sangam and many reform works taken with the help of Suttur Mutt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X