ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ವಿರುದ್ಧವೇ ಹರಿಯಿತು ಕಾವೇರಿ ಅಧಿಸೂಚನೆ

By Srinath
|
Google Oneindia Kannada News

ನವದೆಹಲಿ, ಫೆ.20: ನಿರೀಕ್ಷೆಯಂತೆ ಕರ್ನಾಟಕದ ಮೇಲೆ ಬರಸಿಡಿಲು ಬಡಿದಿದೆ. ಆದರೆ ಮಾಜಿ ಪ್ರಧಾನಿ ದೇವೇಗೌಡರಿಂದ ಹಿಡಿದು ಬೆಂಗಳೂರಿನ ಪ್ರಜೆ ಸೇರಿದಂತೆ ಕಾವೇರಿ ಕೊಳ್ಳದ ರೈತನವರೆಗೂ ಯಾರೂ ಇದನ್ನು ಆಪೇಕ್ಷಿಸಿರಲಿಲ್ಲ. ಏನಪ್ಪಾ ಅಂದರೆ ಕಾವೇರಿ ನೀರು ಹಂಚಿಕೆ ಕುರಿತು ಐ ತೀರ್ಪಿನ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಆದರೆ ಇದು ಜಾರಿಗೆ ಬರಲು 90 ದಿನಗಳ ಕಾಲಾವಕಾಶವಿದೆ.
ಕಾವೇರಿ ಅಧಿಸೂಚನೆಯಿಂದ ಕರ್ನಾಟಕಕ್ಕೂ ಏನಾದರೂ ಪ್ರಯೋಜನವಾಗಲಿದೆಯಾ ಅಂದರೆ ಒಂದೆರಡು ಹೀಗಿವೆ:
* 1991ರ ಮಧ್ಯಂತರ ಆದೇಶದಿಂದ ಬಚಾವು: ಈ ತೀರ್ಪಿನ ಪ್ರಕಾರ ಮೆಟ್ಟೂರು ಜಲಾಶಯಕ್ಕೆ 205 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈಗ 2007ರ ಐತೀರ್ಪಿನ ಪ್ರಕಾರ 192 ಟಿಎಂಸಿ ನೀರು ಬಿಟ್ಟರೆ ಸಾಕಾದೀತು.

cauvery-tribunal-final-award-finally-notified-on-feb-20
* 1991ರ ಮಧ್ಯಂತರ ಆದೇಶದ ಪ್ರಕಾರ ಕರ್ನಾಟಕದ ಕಾವೇರಿ ಕಣಿವೆಯಲ್ಲಿ 11.22 ಲಕ್ಷ ಎಕರೆ ಪ್ರದೇಶದಲ್ಲಿ ಮಾತ್ರ ಕೃಷಿ ನಡೆಸಬಹುದು. ಆದರೆ 2007ರ ಐತೀರ್ಪಿನ ಪ್ರಕಾರ ಇನ್ನೂ ಹೆಚ್ಚಿಗೆ ಅಂದರೆ 18.8 ಲಕ್ಷ ಎಕರೆ ಪ್ರದೇಶದಲ್ಲಿ ಕೃಷಿ ನಡೆಸಬಹುದು.

ಇನ್ನು, ಕಾವೇರಿ ಅಧಿಸೂಚನೆಯಿಂದ ಕರ್ನಾಟಕಕ್ಕೆ ಅನಾನುಕೂಲವಾಗಲಿದೆಯಾ ಅಂದರೆ ಒಂದಾ, ಎರಡಾ? ಹತ್ತಾರುಎನ್ನಬಹುದು.
* ಮೆಟ್ಟೂರು ಜಲಾಶಯ ನೀರು ಸಂಗ್ರಹ ಸಾಮರ್ಥ್ಯ 42 ಟಿಎಂಸಿ ನೀರು. ಆದರೆ ನ್ಯಾಯಧಿಕರಣದ ತೀರ್ಪಿನ ಪ್ರಕಾರ 55 ಟಿಎಂಸಿ ನೀರನ್ನು ಬಿಡಬೇಕಾದ ಅನಿವಾರ್ಯುತೆ ಕರ್ನಾಟಕಕ್ಕೆ.
* ಕಾವೇರಿ ನದಿ ನೀರು ಪ್ರಾಧಿಕಾರ ಸಂಕಷ್ಟ ಪರಿಹಾರ ಸೂತ್ರ ಅಂತಿಮಗೊಂಡಿಲ್ಲ. ಹಾಗಿರುವಾಗ, ಕಾವೇರಿ ಬಿಕ್ಕಟ್ಟಿಗೆ ಅಂತಿಮ ಪರಿಹಾರ ಸಿಗುವುದು ದೂರದ ಮಾತಾಗಿದೆ.
* ಕರ್ನಾಟಕ ಕೇಳಿದ್ದು 465 ಟಿಎಂಸಿ ನೀರು ಆದರೆ ದಕ್ಕುವುದು 270 ಟಿಎಂಸಿ ನೀರು ಮಾತ್ರ.
* ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ 47 ಟಿಎಂಸಿ ಇದೆ ಎಂದು ಸ್ವತಃ ತಮಿಳುನಾಡೇ ಮಾಹಿತಿ ಒದಗಿಸಿತ್ತು. ಆದರೆ ಮುಂದೆ ನ್ಯಾಯಾಧೀಕರಣ ಸ್ಥಳ ಸಮೀಕ್ಷೆ ನಡೆಸಿ, ತಮಿಳುನಾಡಿನಲ್ಲಿ ಕೇವಲ 20 ಟಿಎಂಸಿ ಅಂತರ್ಜಲ ಇದೆ ಎಂದು ಬರೆಯಿತು. ಹಾಗಾಗಿ ಈಗ 192 ಟಿಎಂಸಿ ನೀರು ಬಿಡುವುದು ಕರ್ನಾಟಕಕ್ಕೆ ಅನಿವಾರ್ಯವಾಗಿದೆ.
* ಕಬಿನಿ ಎರಡನೆಯ ಹಂತದ ಯೋಜನೆಗಳಿಗೆ ನೀರು ಹಂಚಿಕೆಯಾಗಿಲ್ಲ. ಹಾಗೆಯೇ, ಏತ ನೀರಾವರಿಗೂ ನೀರು ಹಂಚಿಕೆಯಾಗಿಲ್ಲ.
* ನ್ಯಾಯಾಧಿಕರಣ ತಮಿಳುನಾಡಿನಲ್ಲಿ ಭತ್ತ ಬೆಳೆಯುವ ಪ್ರದೇಶವನ್ನು ಸರಿಯಾಗಿ ಅಳೆದು ನೋಡಿಲ್ಲ ಎಂಬ ಆರೋಪವಿದೆ. ಹಾಗಾಗಿ, 4 ಟಿಎಂಸಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವ ಹೊರೆ ಕರ್ನಾಟಕದ ಮೇಲೆ ಬಿದ್ದಿದೆ.

English summary
At loss to Karnataka, the Centre has notified the Cauvery Water Disputes Tribunal's final award today (Feb 20). As a result Karnataka state will not be able to exercise the right to decline water during distress if and when Tamil Nadu asks for more water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X