ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಗೌಡ ರಾಜೀನಾಮೆ

|
Google Oneindia Kannada News

BJP Leader G T Deve Gowda resigns and joins JDS
ಬೆಂಗಳೂರು, ಫೆ 19: ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಜಿ ಟಿ ದೇವೇಗೌಡ ರಾಜೀನಾಮೆ ನೀಡಿದ್ದಾರೆ. ಜೊತೆಗೆ ತಾನು ಹೊಂದಿದ್ದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಒಗಾಯಿಸಿದ್ದಾರೆ.

ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪಟ್ಟ ಶಿಷ್ಯರಾಗಿದ್ದ ದೇವೇಗೌಡ ನಿರೀಕ್ಷೆಯಂತೆ ಮತ್ತೆ ಮರಳಿ ಗೂಡಿಗೆ ಸೇರಿದ್ದಾರೆ.

ಕೆಲವು ದಿನಗಳ ಹಿಂದೆ ಎಚ್ ಡಿ ಕುಮಾರಸ್ವಾಮಿ, ಜಿ ಟಿ ದೇವೇಗೌಡ ಜೆಡಿಎಸ್ ಮರಳುವ ಬಗ್ಗೆ ಹೇಳಿಕೆ ನೀಡಿದ್ದರು.

ಜಿ ಟಿ ದೇವೇಗೌಡ ಪಕ್ಷಕ್ಕೆ ಮತ್ತೆ ಮರಳುವುದಕ್ಕೆ ಜೆಡಿಎಸ್ ನಲ್ಲಿನ ಕೆಲ ಗುಂಪುಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದವು. ಜೆಡಿಎಸ್ ದೇವೇಗೌಡ ಅವರಿಗೆ ಚಾಮುಂಡೇಶ್ವರಿ ಅಥವಾ ಎಚ್ ಡಿ ಕೋಟೆ ಕ್ಷೇತ್ರದಿಂದ ಟಿಕೆಟ್ ನೀಡುವ ಸಾಧ್ಯತೆಯಿದೆ.

ಜಿ.ಟಿ.ದೇವೇಗೌಡ ಕಾನೂನು ಬಾಹಿರವಾಗಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪತ್ನಿ ಮತ್ತು ನಾದಿನಿ ಹೆಸರಿನಲ್ಲಿ ಮೂರು ನಿವೇಶನ ಪಡೆದಿರುವ ಭೂ ವಿವಾದಕ್ಕೆ ಸಿಲುಕಿದ್ದರು.

ಬಿಡಿಎ ಮತ್ತು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮೂಡಾ) ದಿಂದ ಮೂರು ನಿವೇಶನಗಳನ್ನು ಪಡೆದಿರುವ ದೇವೇಗೌಡ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕೇಜೆಗೌಡ ಎಂಬುವರು ಕಾನೂನು ಕ್ರಮ ಕೈಗೊಳ್ಳಲು ನ್ಯಾಯಾಲಯದ ಮೆಟ್ಟಿಲೇರಲು ಮುಂದಾಗಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.

English summary
BJP leader G T Deve Gowda resigns, he also resigned from Karnataka Housing Board Chairman post. As expected he joined JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X