ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ದಿ ಗ್ರೇಟ್ ರಾಬರಿ

By Prasad
|
Google Oneindia Kannada News

Biggest diamond robbery in Brussels
ಬ್ರಸೆಲ್ಸ್, ಫೆ. 19 : ಐದೇ ನಿಮಿಷದಲ್ಲಿ ಐವತ್ತು ಮಿಲಿಯನ್ ಡಾಲರ್ ಬೆಲೆಬಾಳುವ ವಜ್ರಗಳನ್ನು ಪಕ್ಕಾ ಸಿನಿಮೀಯ ರೀತಿಯಲ್ಲಿ ದೋಚಿರುವ ಘಟನೆ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿದೆ.

ಮಿಂಚಿನಂತೆ ದಾಳಿ ನಡೆಸಿದ ಪೊಲೀಸ್ ವೇಷದಲ್ಲಿದ್ದ ಶಸ್ತ್ರಧಾರಿ ದರೋರೆಕೋರರು ಕೋಟಿ ಕೋಟಿ ಬೆಲೆಬಾಳುವ ವಜ್ರಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ದಿ ಗ್ರೇಟ್ ರಾಬರಿಯಿಂದ ಅಧಿಕಾರಿಗಳು ತತ್ತರಿಸಿ ಹೋಗಿದ್ದಾರೆ.

ಒಟ್ಟು 50 ಮಿಲಿಯನ್ ಡಾಲರ್ ಬಾಳುವಷ್ಟು ವಜ್ರಗಳನ್ನು ದೋಚಲಾಗಿದೆ ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ಈ ಮೊದಲು, 467 ಮಿಲಿಯನ್ ಡಾಲರ್ ಬೆಲೆಬಾಳುವ ವಜ್ರಗಳನ್ನು ದೋಚಲಾಗಿದೆ ಎಂದು ಅಂದಾಜಿಸಲಾಗಿತ್ತು. ದೋಚಿರುವುದು 50 ಮಿಲಿಯನ್ ಡಾಲರ್ ಬೆಲೆಬಾಳುವ ವಜ್ರಗಳು ಮಾತ್ರ ಎಂದು ಆಂಟ್‌ವೆರ್ಪ್ ವರ್ಲ್ಡ್ ಡೈಮಂಡ್ ಸೆಂಟರ್ ವಕ್ತಾರ ಕಾರೋಲಿನ್ ಡಿ ವೊಲ್ಫ್ ಅವರು ದೃಢಪಡಿಸಿದ್ದಾರೆ.

ಸ್ವಿಸ್ ವಿಮಾನದಿಂದ ಕಾರ್ಗೋವನ್ನು ಇಳಿಸಿ, ಜ್ಯೂರಿಚ್‌ಗೆ ಹೊರಡಬೇಕಿದ್ದ ವಿಮಾನಕ್ಕೆ ತುಂಬುವ ಸಂದರ್ಭದಲ್ಲಿ ಎರಡು ಕಾರುಗಳಲ್ಲಿ ಬೇಲಿ ಮುರಿದು ಒಳನುಗ್ಗಿದ 8 ಮುಸುಕುಧಾರಿ ಕಳ್ಳರು, ಮಷೀನ್ ಗನ್ ತೋರಿಸಿ 120 ಪಾರ್ಸೆಲ್‌ಗಳಲ್ಲಿದ್ದ ವಜ್ರಗಳನ್ನು ಕಬಳಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಮತ್ತು ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಕ್ಷಣಾರ್ಧದಲ್ಲಿ ದರೋಡೆಕೋರರು ವಜ್ರಗಳನ್ನು ಕದ್ದು ಪರಾರಿಯಾಗಿದ್ದಾರೆ. ಬಂದಿದ್ದ ಕಾರಿನಲ್ಲಿಯೇ ಮುರಿದ ಬೇಲಿಯ ಮುಖಾಂತರ ಕಳ್ಳರು ತಪ್ಪಿಸಿಕೊಂಡಿದ್ದಾರೆ. ಕೆಲಸ ಸಮಯದ ನಂತರ ಬ್ರುಸೆಲ್ಸ್‌ನ ಹೊರವಲಯದಲ್ಲಿ ಸುಟ್ಟುಕರಕಲಾದ ವಾಹನ ದೊರೆತಿದೆ. ತಕ್ಷಣ ಕಾರ್ಯಾಚರಣೆಗಿಳಿದಿರುವ ಪೊಲೀಸರು ದರೋಡೆಕೋರರ ಹುಡುಕಾಟದಲ್ಲಿ ತೊಡಗಿದ್ದಾರೆ.

English summary
Robbers dressed as police and armed with machine guns have stolen 120 parcels of diamonds worth millions of dollars from the runway of Brussels Airport in one of the biggest heists the industry has seen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X