ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲುಗೆ ಫ್ಯಾನ್ ಚಿಹ್ನೆ, 108 ಪ್ರಚಾರ ತಂತ್ರ

By Srinath
|
Google Oneindia Kannada News

ಬಳ್ಳಾರಿ‌, ಫೆ.19: ಪಕ್ಷೇತರ ಶಾಸಕ ಬಿ ಶ್ರೀರಾಮುಲು ಸಾರಥ್ಯದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವು ಮುಂದಿನ ಚುನಾವಣೆಗಳಿಗೆ ಇತರೆ ಪಕ್ಷಗಳಿಗಿಂತ ಭಿನ್ನವಾಗಿ ಸಿದ್ಧತೆ ನಡೆಸುತ್ತಿದೆ. 108 ವಿನೂತನ ಪ್ರಚಾರ ತಂತ್ರಗಳನ್ನು ಹೊಂದಿದೆ. ಪ್ರಸ್ತುತ, ಪಕ್ಷಕ್ಕೆ ಫ್ಯಾನ್‌ ಚಿಹ್ನೆ ಸಿಗುವುದು ಬಹುತೇಕ ಖಚಿತವಾಗಿದ್ದು, ರಾಮುಲು ಹವಾ ಜೋರಾಗಿ ಬೀಸುತ್ತಿದೆ.

ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷ ನೋಂದಾಯಿತ ರಾಜಕೀಯ ಪಕ್ಷವಾಗಿದೆ. ಹಾಗಾಗಿ ಪಕ್ಷದ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯಾಗಿ ಆದ್ಯತೆಯ ಮೇರೆಗೆ ಫ್ಯಾನ್‌, ರಾಟೆ, ಕೊಳಾಯಿ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.

bsr-congress-ramulu-may-get-fan-symbol-108-publicity
ಆದರೆ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಚಿಹ್ನೆ ಆಯ್ಕೆ ವೇಳೆ ಮೊದಲ ಪ್ರಾಶಸ್ತ್ಯ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಫ್ಯಾನ್‌ ಚಿಹ್ನೆ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

108 ವಿನೂತನ ಪ್ರಚಾರ ಮಳಿಗೆ: ಅತ್ತ ರಾಜಧಾನಿ ಬೆಂಗಳೂರಿನಲ್ಲಿ ಮುಂಬರುವ ಸಾಲು ಸಾಲು ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷವು ನೂತನ ಪ್ರಚಾರ ತಂತ್ರವನ್ನು ಕಂಡುಕೊಂಡಿದೆ.

ಜನಪ್ರಿಯ ಮಾರಾಟ ವಸ್ತುಗಳಾದ ಮಕ್ಕಳ ಆಟಿಕೆಗಳು, ಕೊಡುಗೆ ವಸ್ತುಗಳ ಮೇಲೆ ಪಕ್ಷದ ಲಾಂಛನಗಳನ್ನು ಒತ್ತಿ, ಮಾರುಕಟ್ಟೆಗೆ ಬಿಟ್ಟಿದೆ. ಇದಕ್ಕಾಗಿ ಬೆಂಗಳೂರಿನ ಕುಮಾರಪಾರ್ಕ್‌ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿರುವ ಪಕ್ಷದ ಕಚೇರಿ ಆವರಣದಲ್ಲೇ ಮಳಿಗೆಯೊಂದನ್ನು ತೆರಯಲಾಗಿದೆ. ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೂ ಮಳಿಗೆ ತೆರೆದಿರುತ್ತದೆ. ಆದರೆ, ಇಲ್ಲಿ ಪಕ್ಷದ ಕಾರ್ಯಕರ್ತರಿಗೆ/ ಮುಖಂಡರಿಗೆ ಯಾವುದೇ ವಸ್ತು ಉಚಿತವಾಗಿ ದೊರೆಯುವುದಿಲ್ಲ.

ಮಳಿಗೆಯಲ್ಲಿ ಶ್ರೀರಾಮುಲು ಭಾವಚಿತ್ರವಿರುವ ಟಿ-ಶರ್ಟ್‌, ಕ್ಯಾಪ್‌, ಬ್ಯಾಟ್‌, ಬಂಟಿಂಗ್‌, ಶಲ್ಯ, ಬಾವುಟ, ಛತ್ರಿ, ಗೋಡೆ ಗಡಿಯಾರ, ಸ್ಕೂಲ್‌ ಬ್ಯಾಗ್‌ ಸೇರಿದಂತೆ 108 ಸಾಮಗ್ರಿಗಳು ಮಾರಾಟಕ್ಕಿವೆ. 108 ಎಂಬ ಸಂಖ್ಯೆ ರಾಮುಲು ಅವರಿಗೆ ಪ್ರಿಯವಾಗಿದ್ದರಿಂದ ಅಷ್ಟೇ ಸಂಖ್ಯೆಯ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ಒಂದೊಂದು ಸಾಮಗ್ರಿಗಳಿಗೆ 10 ರೂ. ಗಳಿಂದ ಗರಿಷ್ಠ 500 ರೂ. ವರೆಗೆ ದರ ನಿಗದಿಪಡಿಸಲಾಗಿದೆ.

English summary
Karnataka Assembly Election- BSR Congress Sreeramulu may get Fan symbol. And the party has adopted 108 publicity materials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X