• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲೇಡ್ ರನ್ನರ್ ಗೆಳತಿ ತಲೆ ಬ್ಯಾಟಿನಿಂದ ಚೆಂಡಾಡಿದ್ನ

By Mahesh
|

ಜೋಹಾನ್ಸ್‌ಬರ್ಗ್, ಫೆ.17: ಪ್ರೇಮಿಗಳ ದಿನದಂದೇ ತನ್ನ ಗೆಳತಿಯನ್ನು ಕೊಂದ ಆರೋಪ ಹೊತ್ತಿರುವ 'ಬ್ಲೇಡ್ ರನ್ನರ್' ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಸ್ ಕೊಲೆ ಮಾಡಿದ ರೀತಿ ಬಹಿರಂಗವಾಗಿದೆ. ಆಸ್ಕರ್ ತನ್ನ ಪ್ರೇಮಿ ರೀವಾಳನ್ನು ಗನ್ ನಿಂದ ಶೂಟ್ ಮಾಡಿಲ್ಲ. ಬ್ಯಾಟಿನಿಂದ ಆಕೆ ತಲೆ ಹೊಡೆದಿದ್ದಾನೆ ಎಂಬ ವಿಷಯ ಬಹಿರಂಗವಾಗಿದೆ.

ಆಕಸ್ಮಿಕವೋ, ಉದ್ದೇಶಪೂರ್ವಕವೋ ತನ್ನ ಗೆಳತಿಯನ್ನು ಕೊಂದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಟ್ರಾಕ್ ಸ್ಟಾರ್ ಬ್ಲೇಡ್ ರನ್ನರ್ ಖ್ಯಾತಿ ವಿಕಲಚೇತನ ಆಸ್ಕರ್ ಪಿಸ್ಟೋರಿಯಸ್ ಜೈಲು ಸೇರಿದ್ದಾನೆ. ಆಸ್ಕರ್ ಮನೆಯಲ್ಲಿ ರಕ್ತಸಿಕ್ತ ಕ್ರಿಕೆಟ್ ಬ್ಯಾಟ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎರಡು ಕಾಲುಗಳಿಲ್ಲದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಪ್ರಿಟೋರಿಯಾದಲ್ಲಿರುವ ತನ್ನ ಮನೆಯಲ್ಲಿ ಗೆಳೆತಿ ಟಿವಿ ಸ್ಟಾರ್ ಹಾಗೂ ಎಫ್‌ಎಚ್‌ಎಂನ ಮಾಜಿ ರೂಪದರ್ಶಿ ರೀವಾ ಸ್ಟೀನ್‌ಕ್ಯಾಂಪ್ (30)ರನ್ನು ಫೆ.14ರಂದು ಗುಂಡಿಕ್ಕಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದರು.

ಪಿಸ್ಟೋರಿಯಸ್ ಕೊಲೆಗೈಯುವ ಮೊದಲು ರೀವಾಗೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಪಿಸ್ಟೋರಿಯಸ್ ಸಿಟ್ಟಿನಿಂದ ತನ್ನ ಕೋಣೆಯಲ್ಲಿ ರೀವಾಗೆ ಥಳಿಸಿದ್ದಾನೆ. ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಆಕೆ ತಪ್ಪಿಸಿಕೊಂಡು ಓಡುತ್ತಿದ್ದಾಗ ಪಿಸ್ಟೋರಿಯಸ್ ತನ್ನ ರಿವಾಲ್ವರ್ ತೆಗೆದು ಮನ ಬಂದಂತೆ ಗುಂಡು ಹಾರಿಸಿದ್ದಾನೆ. ಗಂಭೀರ ಗಾಯಗೊಂಡ ಆಕೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪಿಸ್ಟೋರಿಯಸ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಆತನ ಅರ್ಜಿಯ ವಿಚಾರಣೆ ಯನ್ನು ಮಂಗಳವಾರ(ಫೆ.19) ಕೈಗೆತ್ತಿಕೊಳ್ಳಲಿದೆ.

ಸ್ಪ್ರಿಂಗ್ ಬ್ಯಾಕ್ ಖ್ಯಾತಿ ತಂಡದ ರಗ್ಬಿ ಆಟಗಾರ ಫ್ರಾನ್ ಕೊಯಿಸ್ ಹೌಗಾರ್ಡ್ ಜೊತೆ ರೀವಾ ಸ್ಟ್ರೀನ್ ಕ್ಯಾಂಪ್ ಡೇಟಿಂಗ್ ಮಾಡಲು ಶುರು ಮಾಡಿದ್ದಳು ಇದು ಆಸ್ಕರ್ ನನ್ನು ಕೆರಳಿಸಿತ್ತು ಎಂಬ ಸುದ್ದಿಯೂ ಹಬ್ಬಿದೆ.

ಆದರೆ, ರಗ್ಬಿ ಆಟಗಾರನ ವಕ್ತಾರರು ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ರೀವಾ ತಂದೆ ಬ್ಯಾರಿ, ಆಸ್ಕರ್ ಬಗ್ಗೆ ಯಾವುದೇ ಸಿಟ್ಟಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಕರಣದ ನಿಗೂಢತೆ ಬಗ್ಗೆ ಅರಿತ ಪೊಲೀಸರು ತನಿಖಾ ವರದಿಯ ಯಾವ ವಿಷಯವನ್ನು ಹೊರ ಹಾಕಿಲ್ಲ. ದಕ್ಷಿಣ ಆಫ್ರಿಕಾದ ಮಾಧ್ಯಮಗಳಲ್ಲಿ ಮಾತ್ರ ಅಂತೆ ಕಂತೆ ಸುದ್ದಿ ಹಬ್ಬುತ್ತಲೇ ಇದೆ.

ಸುಮಾರು ಒಂದೂವರೆ ವರ್ಷದಿಂದ ಮಾಡೆಲ್ ರೀವಾ ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್ ನಲ್ಲಿದ್ದರು. ಕಳೆದ ವಾರವಷ್ಟೇ ಆಸ್ಕರ್ ನೀಡಿದ್ದ ಉಡುಗೊರೆಗಳ ಬಗ್ಗೆ ಮೆಚ್ಚುಗೆ ಸೂಸುತ್ತಾ ರೀವಾ ಟ್ವೀಟ್ ಮಾಡಿದ್ದರು. ರೀವಾ ಹಾಗೂ ಆಸ್ಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ ಎನ್ನಲಾಗಿದೆ. ರೀವಾ ಕೊಲೆ ಅಕಸ್ಮಾತ್ ಆಗಿ ನಡೆದ ಕೃತ್ಯ ಎಂದು ರೇಡಿಯೋ ವರದಿ ಹೇಳಿತ್ತು.

ಪ್ರೇಮದ ಕಾಣಿಕೆಗೆ ರಕ್ತಲೇಪನ: ಆಸ್ಕರ್ ಗೆ ವ್ಯಾಲೆಂಟೈನ್ಸ್ ಡೇ ಸರ್ಫ್ರೈಜ್ ಗಿಫ್ಟ್ ತರಲು ಶಾಪಿಂಗ್ ಹೋಗಿದ್ದ ರೀವಾ, ಕಳ್ಳ ಹೆಜ್ಜೆ ಇಡುತ್ತಾ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಶಬ್ದವಾಗಿದ್ದನ್ನು ಕೇಳಿಸಿಕೊಂಡ ಆಸ್ಕರ್ ಹಿಂದು ಮುಂದು ನೋಡದೆ, ಕಳ್ಳರು ಮನೆಗೆ ನುಗ್ಗಿರಬಹುದು ಎಂಬ ಶಂಕೆಯಿಂದ ಆಕೆಯನ್ನು ನೋಡದೆ ಗುಂಡು ಹಾರಿಸಿದ್ದಾರೆ ಎನ್ನಲಾಗಿತ್ತು.

ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್ ಒಬ್ಬ ಮಾದರಿ ಕ್ರೀಡಾಪಟುವಾಗಿದ್ದಾರೆ. ಆಸ್ಕರ್ ಅವರು ಕೃತಕ ಬಲಗಾಲು ಹೊಂದಿದ್ದು, ಬ್ಲೇಡ್(double below-knee amputations) ಹಾಕಿಕೊಂಡೇ ಲಂಡನ್ ಒಲಿಂಪಿಕ್ಸ್ ನ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Was Reeva's skull crushed with bloodied cricket bat 'found' at Blade Runner's House?. South African police reportedly found a bloodied cricket bat at his home. She was shot dead on Valentine’s Day at his gated mansion in South Africa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more