ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜೆಪಿ ಈಗ ಪ್ರಾದೇಶಿಕ ಪಕ್ಷ, ಗುರ್ತಿಗೆ ತೆಂಗಿನಕಾಯಿ

By Srinath
|
Google Oneindia Kannada News

karnataka-janata-party-regional-party-eci-gazette
ಮಂಗಳೂರು, ಫೆ.18: ಇದು ಅಧಿಕೃತ. ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷರಾಗಿರುವ ಕರ್ನಾಟಕ ಜನತಾ ಪಕ್ಷಕ್ಕೆ ಈಗ ಅಧಿಕೃತವಾಗಿ ಪ್ರಾದೇಶಿಕ ಪಕ್ಷ ಎಂಬ ಮನ್ನಣೆ ದೊರೆತಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ, ಪ್ರಚಾರ ಸಮಿತಿ ಅಧ್ಯಕ್ಷ ವೇಣೂರು ಧನಂಜಯ ಕುಮಾರ್ ಹೇಳುವಂತೆ ಕೇಂದ್ರ ಚುನಾವಣೆ ಆಯೋಗ ಫೆಬ್ರವರಿ 15ರಂದು ಹೊರಡಿಸಿರುವ ರಾಜ್ಯಪತ್ರದಲ್ಲಿ ಕೆಜೆಪಿಗೆ ಈ ಮಾನ್ಯತೆ ಪ್ರಾಪ್ತಿಯಾಗಿದ್ದು, 47ನೆಯ ನೋಂದಣಿ ಸಂಖ್ಯೆ ಲಭಿಸಿದೆ.

ಈ ತಕ್ಷಣಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಕೆಜೆಪಿ ಪಕ್ಷಕ್ಕೆ ತೆಂಗಿನಕಾಯಿ ಗುರುತು ಸಹ ಲಭ್ಯವಾಗಿದೆ ಎನ್ನಲಾಗಿದೆ. ಆದರೆ ಯಡಿಯೂರಪ್ಪ ಅವರು 'ಸೈಕಲ್' ಅಥವಾ 'ಉಳುಮೆ ಮಾಡುತ್ತಿರುವ ರೈತ' ಚಿಹ್ನೆಯನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

English summary
Karnataka Janata Party a regional party Election Commission of India declared in a special gazette published on February 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X