ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕ ಇಲ್ಲಿ ಲಭ್ಯ

By Mahesh
|
Google Oneindia Kannada News

Bangalore book fair 2013
ಬೆಂಗಳೂರು, ಫೆ.17: ಕನ್ನಡ ಪುಸ್ತಕ ಪ್ರಾಧಿಕಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ವಾರ್ಷಿಕ 'ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2013'ನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನಗಳ ಕಾಲದವವರೆಗೆ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಹೇಳಿದ್ದಾರೆ.

ಫೆ.18 ರಿಂದ ಫೆ.21ರವರೆಗೆ ಈ ವಿಶೇಷ ರಿಯಾಯಿತಿ ಮಾರಾಟ ಜಾರಿಯಲ್ಲಿರುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಡೆಯುವ ಈ ಮೇಳದಲ್ಲಿ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ. ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪುಸ್ತಕಗಳಿಗೆ ಶೇ 50ರವರೆಗೆ ರಿಯಾಯಿತಿ ದೊರೆಯಲಿದೆ.

ಇತರೆ ಖಾಸಗಿ ಪ್ರಕಾಶಕರ ಪುಸ್ತಕಗಳಿಗೆ ಕಡ್ಡಾಯವಾಗಿ ಶೇ 25 ರಷ್ಟು ರಿಯಾಯಿತಿ ನೀಡುವಂತೆ ಸೂಚಿಸಲಾಗಿದೆ. ಕೆಲವು ವಿ.ವಿ.ಗಳ ಪ್ರಸರಾಂಗಗಳು ಮತ್ತು ಸಂಸ್ಥೆಗಳು ಶೇ.50ರಷ್ಟು ರಿಯಾಯಿತಿಯನ್ನು ನೀಡಲು ಮುಂದೆ ಬಂದಿವೆ. ಎಂದು ಸಿದ್ದಲಿಂಗಯ್ಯ ಹೇಳಿದ್ದಾರೆ.

ಮೇಳ ನಡೆಯುವ ಪ್ರತಿದಿನ ಬೆಳಗ್ಗೆ 10:30ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ರಾಜ್ಯದ 70 ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ಮೇಳದಲ್ಲಿ ಸುಮಾರು 100ಕ್ಕೂ ಅಧಿಕ ಮಳಿಗೆ ಇದೆ. ಮೇಳದಲ್ಲಿ ಭಾಗವಹಿಸುವ ಪ್ರಕಾಶಕರಿಗೆ ಬಾಡಿಗೆ ರಹಿತ ಮಳಿಗೆ ನೀಡಲಾಗುತ್ತದೆ.ಮಳಿಗೆ ಸಿಬ್ಬಂದಿಗೆ ಪ್ರತಿದಿನ ಉಚಿತ ಊಟವನ್ನು ಪ್ರಾಧಿಕಾರ ನೀಡಲಿದೆ.

ಕಳೆದ ವರ್ಷ ನಡೆದ ವಿಶೇಷ ರಿಯಾಯಿತಿ ಪುಸ್ತಕ ಮೇಳದಲ್ಲಿ ಒಂದು ಕೋಟಿ ರೂ.ಗಳಿಗೂ ಹೆಚ್ಚಿನ ವ್ಯವಹಾರವಾಗಿದೆ. ಒಟ್ಟು 7 ಪುಸ್ತಕ ಮೇಳಗಳನ್ನು ನಡೆಸಲಾಗಿದೆ. ಮೇಳಗಳಲ್ಲಿ ಭಾಗವಹಿಸುವಂತೆ ಸುಮಾರು 280 ಪದವಿ ಹಾಗೂ 180 ಪಿಯು ಕಾಲೇಜುಗಗೆ ಸುತ್ತೋಲೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಸಾರ್ವಜನಿಕರು ಈ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಿದ್ದಲಿಂಗಯ್ಯ ಅವರು ಕೋರಿದ್ದಾರೆ.

English summary
The Kannada Book Authority has organised Kannada book Fair at Ravindra Kalashetra, Bangalore. The four-day long book mela starts from Feb.18. Book lovers can purchase variety of books from 70 different publishers at discount rates varying from 25-50 % between 10.30 am and 8 pm said president Dr Siddalingaiah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X