ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಿತಾ ಸಾವಿಗೆ ವೈದ್ಯರೆ ಹೊಣೆ : ತನಿಖಾ ವರದಿ

|
Google Oneindia Kannada News

Savita Halappanavar
ಡಬ್ಲಿನ್, ಫೆ.16 : ಐರ್ಲೆಂಡ್ ನಲ್ಲಿ ಮೃತಪಟ್ಟ ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವಿನ ಕುರಿತಾದ ಸತ್ಯಾಂಶಗಳು ಹೊರಬಿದ್ದಿವೆ. ಗರ್ಭಪಾತ ಮಾಡಲು ನಿರಾಕರಿಸಿದ್ದರಿಂದ ಸವಿತಾ ಅವರು ಮೃತಪಟ್ಟಿಲ್ಲ. ವೈದ್ಯರ ನಿರ್ಲಕ್ಷದಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿ ಹೇಳಿದೆ.

ಸವಿತಾ ಸಾವಿನ ಕುರಿತು ತನಿಖೆ ನಡೆಸಲು ಐರ್ಲೆಂಡ್ ಸರ್ಕಾರ ಸ್ವತಂತ್ರ ತನಿಖಾ ಆಯೋಗ ರಚಿಸಿತ್ತು. ತನಿಖಾ ಸಂಸ್ಥೆಯ ವರದಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಐರ್ಲೆಂಡ್ ಆಸ್ಪತ್ರೆಯ ವೈದ್ಯರು ಸವಿತಾಗೆ ಉಂಟಾಗಿದ್ದ ಸೋಂಕು ಪತ್ತಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ವಿಫಲವಾಗಿದ್ದರಿಂದ, ಆಕೆ ಸಾವನ್ನಪ್ಪಿದಳು ಎಂದು ವರದಿ ಬಹಿರಂಗಪಡಿಸಿದೆ.

ವರದಿಯಲ್ಲೇನಿದೆ : ಅಕ್ಟೋಬರ್ ನಲ್ಲಿ 17 ವಾರದ ಗರ್ಭಿಣಿಯಾಗಿದ್ದ ಸವಿತಾ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಬೆನ್ನುನೋವುನಿಂದ ಬಳಲುತ್ತಿದ್ದ ಅವರು, ವೈದ್ಯರ ಬಳಿ ಗರ್ಭಪಾತ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಸವಿತಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ ವೈದ್ಯರು ಸರಿಯಾದ ಚಿಕಿತ್ಸೆ ನೀಡಲಿಲ್ಲ.

ಸವಿತಾ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಅವರು ಗಂಭೀರ ಸ್ಥಿತಿಗೆ ತಲುಪಿದಾಗಲೂ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದರು. ಆಸ್ಪತ್ರೆಗೆ ದಾಖಲಾದ ನಂತರ ರಕ್ತ ಪರೀಕ್ಷೆ, ರಕ್ತ ದೊತ್ತಡ, ದೇಹದ ಉಷ್ಣಾಂಶ ಮುಂತಾದ ಪರೀಕ್ಷೆಗಳನ್ನು ವೈದ್ಯರು ನಡೆಸಿದ್ದಾರೆ ಎಂಬುದಕ್ಕೆ ಆಸ್ಪತ್ರೆಯಲ್ಲಿ ಯಾವುದೇ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿಲ್ಲ. ಇದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

English summary
Belgaum based dentist Savita Halappanavar died in Ireland due to negligence of doctors who also refused to abort her. The independent investigative commission report of Ireland has leaked that doctors failed to give proper treatment to Savita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X