ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು: ಇನ್ಮುಂದೆ ರಾತ್ರಿ ವೇಳೆ ಕುದುರೆ ರೇಸ್!

By Srinath
|
Google Oneindia Kannada News

ಬೆಂಗಳೂರು, ಫೆ. 16: ಇತ್ತಿತ್ಲಾಗೆ ಬಿಡಿ ಬಹಳಷ್ಟು ಕ್ರೀಡೆಗಳು ರಾತ್ರಿ ಕ್ರೀಡೆಗಳಾಗಿ ಮಾರ್ಪಟ್ಟಿವೆ. ಅದಕ್ಕೆ ತಾಜಾ ಸೇರ್ಪಡೆಯೆಂದರೆ ಕುದುರೆ ರೇಸ್. ಬೇರೆ ದೇಶಗಳಲ್ಲಿ ಕುದುರೆ ರೇಸ್ ರಾತ್ರಿ ವೇಳೆ ನಡೆಯುತ್ತಿದೆಯಾದರೂ ಭಾರತಕ್ಕಿನ್ನೂ ಅದು ಹೊಸದು. ಹಾಗೆಂದೇ, ಬೆಂಗಳೂರಿನಲ್ಲಿ (BTC) ಇನ್ನು ಮುಂದೆ ರಾತ್ರಿ ವೇಳೆಯೂ ಕುದುರೆ ಜೂಜು ನಡೆಸಲು ಸಿದ್ಧತೆಗಳು ನಡೆಯುತ್ತಿವೆ.

ಬೆಂಗಳೂರಿನಲ್ಲಿ ಕುದುರೆ ರೇಸ್ ಹೆಚ್ಚು ಜನಪ್ರಿಯವೋ ಅಥವಾ ರೇಸ್ ಕೋರ್ಸ್ ರಸ್ತೆ ಹೆಚ್ಚು ಜನಪ್ರಿಯವೋ ಅಂದರೆ ಜನ ರೇಸ್ ಕೋರ್ಸ್ ರಸ್ತೆಗೆ ಮಣೆ ಹಾಕುತ್ತಾರೆ. ಇನ್ನು ಕುದುರೆ ರೇಸ್ ಜನಸಾಮಾನ್ಯರಿಗೆ ಹುಳಿ ದ್ರಾಕ್ಷಿಯೇ ಸರಿ. ಕೆಲವರಿದ್ದಾರೆ ಬಿಡಿ ರೇಸಿನ ಚಟಕ್ಕೆ ಬಿದ್ದು ದುಡ್ಡು ಕಳೆದುಕೊಂಡು ಅದೇ ರಸ್ತೆಯಲ್ಲಿ ಅಮ್ಮಾ-ತಾಯಿ ಆಗಿರುವ ನಿದರ್ಶನಗಳೂ ಇವೆ.

Night Racing to Come Up at Bangalore Turf Club- Dayanand Pai
ಆದರೆ ಇಲ್ಲಿ ವಿಷಯ ಅದಲ್ಲ. ಸುಮ್ಮನೆ ಕುದುರೆ ರೇಸನ್ನು ಸುಮ್ಮನೆ ಒಂದು ಕ್ರೀಡೆ/ಮನರಂಜನೆಯಾಗಿ ಪರಿಗಣಿಸುವವರ ಮಾಹಿತಿಗಾಗಿ ಹೇಳುವುದಾದರೆ ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ರಾತ್ರಿ ಹೊತ್ತು ಕುದುರೆ ಜೂಜು ನಡೆಯುತ್ತದಂತೆ ಸೆಂಚುರಿ ಬಿಲ್ಡರ್ಸ್ ಚೇರ್ಮನ್ ಡಾ. ಪಿ ದಯಾನಂದ ಪೈ ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ.

ಮುಂದಿನ ಚಳಿಗಾಲದ ಡರ್ಬಿ ವೇಳೆಗೆ flood-lit ರೇಸಿಂಗ್ ನಡೆಸುತ್ತೇವೆ. ವಿಶ್ವದಾದ್ಯಂತ ರಾತ್ರಿ ವೇಳೆ ನಡೆಯುವ ಕುದುರೆ ರೇಸ್ ಭಾರಿ ಜನಪ್ರಿಯವಾಗುತ್ತಿದೆ. ಬಿಟಿಸಿಯಲ್ಲೂ ಮೊದಲ ಬಾರಿಗೆ ಇದಕ್ಕೆ ಅವಕಾಶ ಕಲ್ಪಿಸುವುದಾಗಿ 20ಕ್ಕೂ ಹೆಚ್ಚು ಕುದುರೆಗಳ ಒಡೆಯ ದಯಾನಂದ ಪೈ ಹೇಳಿದ್ದಾರೆ.

'ಕುದುರೆ ರೇಸಿಂಗ್ ಭೂಪಟದಲ್ಲಿ BTCಗೆ ಅಗ್ರಮಾನ್ಯ ಸ್ಥಾನ ಕಲ್ಪಿಸುವುದು ನನ್ನ ಆಶಯವಾಗಿದೆ. ಅದರಲ್ಲಿ ಈ ರಾತ್ರಿ ರೇಸ್ ಸಹ ಒಂದು. ಇದು ಇಂದಿನ ಬೆಂಗಳೂರಿಗೆ ಹೇಳಿ ಮಾಡಿಸಿದಂತಿರುತ್ತದೆ, ಜನ ಖಂಡಿತಾ ಇದನ್ನು ಇಷ್ಟಪಡುತ್ತಾರೆ. ಇನ್ನು, BTC ಈಗಿರುವ ಸ್ಥಳದಿಂದ ಸ್ಥಳಾಂತರವಾದ ಮೇಲೆ ಅದನ್ನು ಮತ್ತಷ್ಟು ಆಧುನಿಕವಾಗಿ ಅಭಿವೃದ್ಧಿಗೊಳಿಸಲು ಹೆಚ್ಚು ಅವಕಾಶವಿರುತ್ತದೆ' ಎನ್ನುತ್ತಾರೆ ದಯಾನಂದ ಪೈ.

English summary
Night Racing to Come Up at Bangalore Turf Club- Dayanand Pai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X