ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಉಲ್ಕಾಘಾತ, ಕ್ಷುದ್ರ ಗ್ರಹ ಭೇಟಿಗೆ ಕಾತುರ

By Mahesh
|
Google Oneindia Kannada News

ಮಾಸ್ಕೋ, ಫೆ.15: ರಷ್ಯಾದ ಮಧ್ಯ ಭಾಗದಲ್ಲಿರುವ ಉರುಲ್ ಪರ್ವತ ಶ್ರೇಣಿಗೆ ಭಾರಿ ಉಲ್ಕೆಯೊಂದು ಶುಕ್ರವಾರ ಅಪ್ಪಳಿಸಿದೆ. ಉಲ್ಕಾ ಪಾತದಿಂದ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದೆ.

ಭಾರಿ ಸ್ಫೋಟದಿಂದ ಸುಮಾರು 500ಕ್ಕೂ ಅಧಿಕ ಮಂದಿಗೆ ಗಾಯವಾಗಿರುವ ವರದಿ ಬಂದಿದೆ. ಆಕಾಶಕಾಯಗಳು ಅಪ್ಪಳಿಸುವುದನ್ನು ತಡೆಗಟ್ಟಲು ರಷ್ಯನ್ ಸರ್ಕಾರ ವಿವಿಧ ದೇಶಗಳಿಗೆ ನೆರವು ಕೋರಿದೆ. ಭಾರಿ ಗಾತ್ರದ ಬಂಡೆಗಳು ಬೆಂಕಿಯುಗುಳುತ್ತಾ ಮುನ್ನುಗ್ಗಿ ಬರುವಂತೆ ಇತ್ತು. ಸೆಕೆಂಡುಗಳ ಲೆಕ್ಕದಲ್ಲಿ ಬೆಂಕಿ ಬಂಡೆಗಳು ಭೂಮಿಗೆ ಅಪ್ಪಳಿಸುತ್ತಿತ್ತು ಎಂದುಪ್ರತ್ಯಕ್ಷ ದರ್ಶಿ ಸ್ಕೈ ವಾಚರ್ ರೊಬ್ಬರು ಹೇಳಿಕೆ ನೀಡಿದ್ದಾರೆ.

ಗಮನಿಸಿ: Asteroid 2012 DA14(12.55 AM IST) ಭೂಮಿ ಸಮೀಪ ಹಾದು ಹೋಗುವುದನ್ನು ನೇರ ಪ್ರಸಾರ ಮಾಡಲು ನಾಸಾ ಸಿದ್ಧತೆ ನಡೆಸಿದೆ. ಹೆಚ್ಚಿನ ಮಾಹಿತಿಗೆ ನಾಸಾ ವೆಬ್ ಸೈಟ್ ಗೆ ಭೇಟಿ ಕೊಡಿ

Meteor shower hits Central Russia, 400 injured

ಉಲ್ಕಾಪಾತದ ಸುದ್ದಿ ಸಿಕ್ಕ ಮೇಲೆ ಉರುಲ್ ಪ್ರದೇಶದ ವಿಮಾನನಿಲ್ದಾಣಕ್ಕೆ ತಕ್ಷಣವೇ ಮುನ್ನೆಚ್ಚರಿಕೆ ಸಂದೇಶ ರವಾನೆಯಾಗಿದೆ. ಹೀಗಾಗಿ ಎಲ್ಲಾ ವಿಮಾನಗಳು ಸುರಕ್ಷಿತವಾಗಿದ್ದು, ವಿಮಾನ ಹಾರಾಟ ಸದ್ಯಕ್ಕೆ ಬಂದ್ ಆಗಿದೆ.

ಚೆಲ್ಯಾಬಿನ್ಸ್ಕ್, ಉರುಲ್ ಪ್ರದೇಶದಲ್ಲಿ ವಿಕಿರಣ (radiation) ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತಿದ್ದು, ಯಾವುದೇ ಏರುಪೇರು ಕಂಡುಬಂದಿಲ್ಲ. ಹೀಗಾಗಿ ಜನರು ವಿಕಿರಣದಿಂದ ಉಂಟಾಗುವ ತೊಂದರೆಯ ಭೀತಿ ಎದುರಿಸುವುದು ಬೇಡ ಎಂದು ರಷ್ಯಾದ epidemiologist ಗೆನ್ನಡಿ ಒನಿಶ್ಚೆಂಕೊ ಹೇಳಿದ್ದಾರೆ.

ಉರುಲ್ ಪ್ರದೇಶದ ಚೆಲ್ಯಾಬಿನ್ಸ್ಕ್ ಪ್ರದೇಶದಲ್ಲಿ ಉಲ್ಕೆಗಳ ರಭಸ ಹೊಡೆತಕ್ಕೆ ಮನೆಗಳು, ಕಿಟಕಿ ಗಾಜುಗಳು ಚೂರು ಚೂರಾಗಿದೆ. ಎಲ್ಲೆಡೆ ಅಪಾಯದ ಮುನ್ಸೂಚನೆ ನೀಡಲಾಗಿದೆ. ವಾತಾವರಣದಲ್ಲಿ ಇದ್ದಕ್ಕಿದ್ದಂತೆ ಬಿಸಿಯುಂಟಾಗುತ್ತಿದೆ ಎಂಬ ವರದಿ ಬಂದಿದೆ.

ಚೆಲ್ಯಾಬಿನ್ಸ್ಕ್(Chelyabinks) ಪ್ರದೇಶದಲ್ಲಿ ಉಲ್ಕೆ ಪಾತ ವರದಿ ಹೊರ ಬೀಳುತ್ತಿದ್ದಂತೆ ಭೂಮಿಗೆ ಅತಿ ಸಮೀಪದಲ್ಲಿ ಕ್ಷುದ್ರಗ್ರಹ(asteroid) ಹಾದು ಹೋಗುವ ಕ್ಷಣಕ್ಕಾಗಿ ಖಗೋಳ ವಿಜ್ಞಾನಿಗಳು ಕಾತುರರಾಗಿದ್ದಾರೆ. ಸುಮಾರು 45 ಮೀಟರ್ ವಿಸ್ತೀರ್ಣದ ಸುಮಾರು ಒಂದು ಅರ್ಧ ಫುಟ್ಬಾಲ್ ಮೈದಾನದಷ್ಟು ಗಾತ್ರದ ಕ್ಷುದ್ರಗ್ರಹಕ್ಕೆ 2012 DA14 ಎಂದು ಹೆಸರಿಸಲಾಗಿದೆ.

ಭೂಮಿಯ ಮೇಲ್ಮೈನಿಂದ 17,100 ಮೈಲಿಗಳ ಅಂತರದಲ್ಲಿ ಕ್ಷುದ್ರಗ್ರಹ ಸಂಚರಿಸಲಿದೆ. ಇದರಿಂದ ಭೂಮಿಗೆ ಯಾವುದೇ ಹಾನಿ ಸಂಭಿಸುವುದಿಲ್ಲ ಎಂದು ನಾಸಾ ವಿಜ್ಞಾನಿ ಡಾನ್ ಯೊಮನಸ್ ಹೇಳಿದ್ದಾರೆ. ಈಶಾನ್ಯ ಯುರೋಪ್, ಏಷ್ಯಾ ಅಥವಾ ಆಸ್ಟ್ರೇಲಿಯಾದಲ್ಲಿರುವ ಆಸಕ್ತರು ಉತ್ತಮ ಟೆಲಿ ಸ್ಕೋಪ್ ಮೂಲಕ ಈ ಕ್ಷುದ್ರಗ್ರಹವನ್ನು ವೀಕ್ಷಿಸಬಹುದಾಗಿದೆ. ಬರೀಗಣ್ಣಿಗೆ ಕಾಣಿಸುವುದಿಲ್ಲ ಎಂದು ನಾಸಾ ಪ್ರಕಟಿಸಿದೆ.

English summary
The Ural region of Central Russia was on Friday hit by a meteor shower, causing sharp explosions and reportedly injuring more than 400 people. Those located in Eastern Europe, Asia or Australia will get the best telescope-aided view, scientists said. It won't be visible to the naked eye.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X