ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರಂತ: ಗೀತಿಕಾ ಹಾದಿ ಹಿಡಿದ ತಾಯಿ ಅನುರಾಧ

By Mahesh
|
Google Oneindia Kannada News

Geetika Sharma harassment: Now, mother commits suicide
ಹರ್ಯಾಣ, ಫೆ.15: ಮಾಜಿ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣಕ್ಕೆ ಅಂತ್ಯ ಸಿಗುವ ಮುನ್ನವೇ, ದಿವಂಗತ ಗೀತಿಕಾ ಶರ್ಮ ಅವರ ತಾಯಿ ಅನುರಾಧ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. ವಾಯುವ್ಯ ದೆಹಲಿಯ ಭಾರತ್ ನಗರದ ಅಪಾರ್ಟ್ಮೆಂಟ್ ನಲ್ಲಿ ಗೀತಿಕಾ ಅವರ ತಾಯಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ಗೀತಿಕಾ ಆತ್ಮಹತ್ಯಾ ಪ್ರಕರಣದ ಪ್ರಮುಖ ಆರೋಪಿ ಹರ್ಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ಅವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂಪಡೆಯುವಂತೆ ಗೀತಿಕಾ ಅವರ ಕುಟುಂಬದ ಮೇಲೆ ಭಾರಿ ಒತ್ತಡ ಹೇರಲಾಗಿತ್ತು. ಕಾಂಡ ಅವರ ಕಡೆಯವರ ಒತ್ತಡ ತಾಳಲಾರದೆ ಗೀತಿಕಾ ಅವರ ತಾಯಿ ಸಾವಿಗೆ ಶರಣಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಾಜಿ ಸಚಿವ ಗೋಪಾಲ್ ಕಾಂಡಾ ವಿರುದ್ದ ಹೆಚ್ಚುವರಿ ಚಾರ್ಚ್ ಶೀಟ್ ಸಲ್ಲಿಸಿದ್ದರು. ಗೀತಿಕಾ ಶರ್ಮಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುರುದ್ದೇಶದಿಂದಲೇ ಆಕೆಯನ್ನು ಎಮಿರೈಟ್ಸ್ ಏರ್ ಲೈನ್ಸ್ ಕೆಲಸ ಬಿಡಿಸಿ ತನ್ನ ಕಂಪನಿಗೆ ಸೆಳೆಯಲು ಯತ್ನಿಸಿದ್ದ ಎಂಬುದರ ಬಗ್ಗೆ ಪೊಲೀಸರು ಸಾಕ್ಷಿ ಕಲೆ ಹಾಕಿದ್ದಾರೆ.

ಗೋಪಾಲ್ ಕಾಂಡಾ ಅವರ ಇಂಗಿತದಂತೆ ಅವರ ಬಲಗೈ ಬಂಟ ಚನ್ ಶಿವರೂಪ್ ಸಿಂಗ್ ಅವರು ಆಕೆ ವೃತ್ತಿ ಜೀವನಕ್ಕೆ ಮಾರಕವಾಗಿದ್ದರು. ಎಮಿರೈಟ್ಸ್ ನಿಂದ ಆಕೆಯನ್ನು ಕರೆಸಿಕೊಂಡು ಅನುಭವಿಸಲು ಕಾಂಡಾ ರೂಪಿಸಿದ್ದ ಯೋಜನೆಗೆ ಶಿವರೂಪ್ ಸಿಂಗ್ ಸಹಕರಿಸಿದ್ದರು. ಆದರೆ,ಕಾಂಡಾ ಬುದ್ಧಿ ಬಗ್ಗೆ ಅರಿವಿದ್ದ ಗೀತಿಕಾ ಮತ್ತೊಮ್ಮೆ ಎಂಡಿಎಲ್ ಆರ್ ಏರ್ ಲೈನ್ಸ್ ಸೇರಲು ನಿರಾಕರಿಸಿದ್ದರು ಎಂದು ಪೊಲೀಸರು ತಮ್ಮ ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಿದ್ದು, ಹೆಚ್ಚುವರಿ ಮುಖ್ಯ ಮೆಟ್ರೊ ಪಾಲಿಟನ್ ಮ್ಯಾಜಿಸ್ಟ್ರೇಟ್ ಡಿಕೆ ಜಾಂಗಲ ಅವರಿಗೆ ಸಲ್ಲಿಸಿದ್ದಾರೆ.

23 ವರ್ಷ ವಯಸ್ಸಿನ ಗೀತಿಕಾ ಅವರು ದೆಹಲಿಯ ವಾಯುವ್ಯ ಭಾಗದಲ್ಲಿರುವ ಅಶೋಕ್ ವಿಹಾರ್ ನ ಅಪಾರ್ಟ್ಮೆಂಟ್ ನಲ್ಲಿ ಆಗಸ್ಟ್ 5,2012ರಂದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಗೀತಿಕಾ ಅವರ ಸೂಸೈಡ್ ನೋಟ್ ನಲ್ಲಿ ಗೋಪಾಲ್ ಕಾಂಡಾ, ಕಾಂಡಾ ಬಂಟ ಅರುಣ್ ಚಡ್ಡಾ ಅವರ ಮೇಲೆ ಆರೋಪ ಎಲ್ಲಾ ರೀತಿಯ ಕಿರುಕುಳ ಹೊರೆಸಲಾಗಿತ್ತು.

ಪ್ರಕರಣ ಕುತ್ತಿಗೆಗೆ ಬಂದ ಮೇಲೆ ಹರ್ಯಾಣದ ಸಚಿವ ಸ್ಥಾನಕ್ಕೆ ಗೋಪಾಲ್ ಕಾಂಡಾ ರಾಜೀನಾಮೆ ನೀಡಿದ್ದರು. ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಆರೋಪಿ ಎಚ್ ಆರ್ ವಿಭಾದ ಚನ್ ಶಿವರೂಪ್ ಸಿಂಗ್ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಲ್ಲಿದೆ.

ಇದಕ್ಕೂ ಮುನ್ನ ಗೋಪಾಲ್ ಕಾಂಡ ಮಹಾನ್ ಕಾಮುಕ, ಆಮೀರ್ ಖಾನ್ ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೀನಿ ಎಂದು ಹೇಳಿ ಹಾಲಿ ನಟಿಯೊಬ್ಬಳಿಗೆ ಮೋಸ ಮಾಡಿಬಿಟ್ಟಿದ್ದ ಎಂಬ ವಿಷಯವನ್ನು ಬಾಲಿವುಡ್ ನಟಿ ನೂಪುರ್ ಮೆಹ್ತಾ ಬಿಚ್ಚಿಟ್ಟಿದ್ದರು.

English summary
Tragedy strikes Geetika Sharma family again. Former air hostess Geetika Sharma's mother Anuradha has committed suicide today(Feb.15) in her Ashok Vihar residence. Geetika had committed suicide in 2012 after alleged harassment by Haryana legislator and former minister Gopal Kanda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X