• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಚೇರಿ ಪ್ರಣಯಕ್ಕೆ ಸೂತ್ರ-ಸೂತ್ರಧಾರಿ-ಪಾತ್ರಧಾರಿ

By Srinath
|

ಬೆಂಗಳೂರು: ನಿನ್ನೆಯಷ್ಟೇ ವ್ಯಾಲೆಂಟೇನ್ಸ್ ಡೆ ಮುಗಿದಿದೆ. ಈ ಸಂದರ್ಭದಲ್ಲಿ ಪ್ರಣಯ ಪಕ್ಷಿಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲುವ ಪ್ರಯತ್ನ ನಡೆದಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವಿನ ಪ್ರೇಮ ಪ್ರಸಂಗಳಲ್ಲಿ ಶೇ 30ರಷ್ಟು ವಿವಾಹ ಬಂಧನದಲ್ಲಿ ಕೊನೆಗೊಳ್ಳುತ್ತವೆ ಎಂದು ಅಮೆರಿಕದಲ್ಲಿ ನಡೆದ ಸಮೀಕ್ಷೆಯೊಂದು ತಿಳಿಸಿದೆ.

ಶೇ. 40 ರಷ್ಟು ಉದ್ಯೋಗಿಗಳು ತಮ್ಮ ವೃತ್ತಿ ಬದುಕಿನಲ್ಲಿ ಸಹೋದ್ಯೋಗಿ ಜತೆ ಒಂದು ಬಾರಿ ಮತ್ತು ಶೇ. 17 ರಷ್ಟು ವೃತ್ತಿನಿರತರು ಎರಡು ಸಲ 'ಪ್ರಣಯ ವಿಹಾರ' (dating) ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಇಂಟರ್ನೆಟ್ ಶೋಧ ತಾಣ CareerBuilder ಸಮೀಕ್ಷೆ ಹೇಳುತ್ತದೆ.

ಶೇ. 30ರಷ್ಟು ಮಂದಿ ಕಚೇರಿಯಲ್ಲಿ ತಮಗಿಂತ ಮೇಲಿನ ಹುದ್ದೆಯಲ್ಲಿ ಇರುವ ಸಹೋದ್ಯೋಗಿಗಳ ಜತೆಗೆ ಸರಸ ಸಂಬಂಧ ಹೊಂದಿರುತ್ತಾರೆ. ಇವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ. ಶೇ. 16 ರಷ್ಟು ಮಂದಿ ವಿಭಾಗದ ಮುಖ್ಯಸ್ಥರ ಜತೆಗೇ ಪ್ರಣಯ ಚೇಷ್ಟೆ ನಡೆಸುತ್ತಾರೆ ಎನ್ನುತ್ತದೆ ಅಧ್ಯಯನ ವರದಿ.

ಹೋಟೆಲ್, ಐಟಿ, ಹಣಕಾಸು, ಆರೋಗ್ಯ ರಕ್ಷಣೆ ಮತ್ತು ಉದ್ದಿಮೆ ವಹಿವಾಟು ಸೇವೆಗೆ ಸಂಬಂಧಿಸಿದ ಉದ್ದಿಮೆಗಳಲ್ಲಿ 'ಕಚೇರಿ ಪ್ರಣಯ' ಪ್ರಸಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವಂತೆ! ಅದೆಲ್ಲ ಹಾಗಿರಲಿ. ಇಲ್ಲೊಂದಷ್ಟು ಸೂತ್ರಗಳಿವೆ. ತಿಳಿದುಕೊಳ್ಳಿ.

'ಕಚೇರಿ ಪ್ರಣಯ'ಕ್ಕೆ ಪಂಚ ಸೂತ್ರಗಳು

'ಕಚೇರಿ ಪ್ರಣಯ'ಕ್ಕೆ ಪಂಚ ಸೂತ್ರಗಳು

'ಕಚೇರಿ ಪ್ರಣಯ' ಪ್ರಸಂಗಕ್ಕೂ ನಿಮ್ಮ ಮಾನವ ಸಂಪನ್ಮೂಲ ಅಧಿಕಾರಿಗೂ ಅಪ್ರತ್ಯಕ್ಷ ಸಂಬಂಧವಿರುತ್ತದೆ ಎಂಬುದನ್ನು ಮರೆಯಬೇಡಿ. ಈ HR ಅನ್ನು ನೀವು ಎಷ್ಟೇ ವಿಶ್ವಾಸಕ್ಕೆ ತೆಗೆದುಕೊಂಡರೂ ಪ್ರೀತಿ-ಪ್ರೇಮ ವಿಷಯದಲ್ಲಿ ನಿಮ್ಮ ಜಾಗ್ರತೆಯಲ್ಲಿ ನೀವುರುವುದು ಒಳಿತು. ಕಚೇರಿ ಪ್ರಣಯ- HR ನಡುವೆ ಜಾರಿಯಲ್ಲಿರಬಹುದಾದ ಪಂಚ ಸೂತ್ರಗಳು ಹೀಗಿವೆ:

ಅದು ವೃತ್ತಿ ಧರ್ಮವೂ ಅಲ್ಲ

ಅದು ವೃತ್ತಿ ಧರ್ಮವೂ ಅಲ್ಲ

ತೀರಾ ಖಾಸಗಿಯಾದ/ವೈಯಕ್ತಿಕವಾದ 'ಕಚೇರಿ ಪ್ರಣಯ'ವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಬೇಡಿ. ಕಚೇರಿಯ ಸುತ್ತಮುತ್ತಲೆಲ್ಲೂ ನಿಮ್ಮ ಪ್ರೇಮದ ವಾಸನೆಯನ್ನು ಹರಿಯಬಿಡಬೇಡಿ. ಕಚೇರಿ ವತಿಯಿಂದ ಯಾವುದಾದರೂ ಸಭೆ-ಸಮಾರಂಭಗಳಲ್ಲಿ ಹೊರಗಡೆ ಭಾಗವಹಿಸುವಾಗಲೂ ಅಷ್ಟೇ. ಬೇರೆಯವರಿಗೆ ಅದು ಕಿರಿಕಿಯಾದೀತು ಎಂಬ ನೈತಿಕ ಪ್ರಜ್ಞೆ ನಿಮಗಿರಲಿ. ಅದು ವೃತ್ತಿ ಧರ್ಮವೂ ಅಲ್ಲ. ಕಂಪನಿಯ ಉತ್ಪಾದಕತೆಗೆ ಆದ್ಯತೆ ನೀಡಿ.

ನಿಜವೇ ಆದಲ್ಲಿ HR ಕಿವಿಗೆ ಹಾಕಿಬಿಡಿ

ನಿಜವೇ ಆದಲ್ಲಿ HR ಕಿವಿಗೆ ಹಾಕಿಬಿಡಿ

ಅದು ನೈಜ ಪ್ರೇಮವೋ ಅಥವಾ ಪಡ್ಡೆ-ಪ್ರೇಮವೋ ಎಂಬುದನ್ನು ಮೊದಲು ನೀವು ಮನದಟ್ಟುಪಡಿಸಿಕೊಳ್ಳಿ. ಅದು ಸುದೀರ್ಘ ಸಂಬಂಧಕ್ಕೆ ಮುನ್ನುಡಿ ಬರೆಯುವಂತಿದೆ ಅನಿಸಿದರೆ ಅದರ ಬಗ್ಗೆ ಪರಸ್ಪರ ಚರ್ಚಿಸಿ. ಅದಾದ ನಂತರ ಸೀದಾ HR ಬೀಲಗೆ ಹೋಗಿ ಹೀಗ್ಹೀಗೆ ಎಂದು cool ಆಗಿ ಹೇಳಿಬಿಡಿ. ನಿಮ್ಮಿಬ್ಬರಲ್ಲಿ ಯಾರು ಹಿರಿಯರೋ (ಅಂದರೆ ಕಂಪನಿ ಸೇವಾವಧಿಯ ಆಧಾರದ ಮೇಲೆ) ಅವರು HR ಮುಂದೆ ನೇರವಾಗಿ ಪ್ರಸ್ತಾಪಿಸುತ್ತಾ ಕಂಪನಿಯ ಸೇವೆಗಳಿಗೆ 'ಅದು' ತೊಡಕಾಗುವುದಿಲ್ಲ ಎಂಬುದನ್ನು ತಿಳಿಯಹೇಳಿ.

ಕಂಪನಿ ರೂಲ್ಸು ಬಗ್ಗೆಯೂ ಎಚ್ಚರವಿರಲಿ

ಕಂಪನಿ ರೂಲ್ಸು ಬಗ್ಗೆಯೂ ಎಚ್ಚರವಿರಲಿ

ಕಂಪನಿಯಲ್ಲಿ ಸಾಮಾನ್ಯವಾಗಿ ಎಲ್ಲ ಉದ್ಯೋಗಿಗಳಿಗೆ ಅನ್ವಯವಾಗುವಂತಹ ರೂಲ್ಸುಗಳ ಕೈಪಿಡಿಯನ್ನು ಮೊದಲು ಅಧ್ಯಯನ ಮಾಡಿ. ಆ ಬಳಿಕ, 'ಕಚೇರಿ ಪ್ರೇಮಿಗಳು' ತೀರಾ ಖಾಸಗಿಯಾಗಿ/ವೈಯಕ್ತಿಕವಾಗಿ ಕಂಪನಿ ಕೈಪಿಡಿಯಲ್ಲಿ ಏನಾದರೂ ಹೇಳಲಾಗಿದೆಯಾ? ಎಂಬುದನ್ನು ಅರಿತುಕೊಳ್ಳಿ. ಅಸಲಿಗೆ 'ಕಚೇರಿ ಪ್ರಣಯ'ಕ್ಕೆ ಅವಕಾಶವಿದೆಯಾ? ಎಂಬುದನ್ನು ದೃಢಪಡಿಸಿಕೊಳ್ಳೀ. ಅಸಲಿಗೆ 'ಅದಕ್ಕೇ' ಅವಕಾಶ ಇಲ್ಲ ಎನ್ನುವುದಾದರೆ ಸೀದಾ ಕಂಪನಿ ನಿಮ್ಮ ಹೊರಹಾಕಬಹುದು ಎಚ್ಚರವಿರಲಿ!

ಕೆಟ್ಟ ಘಳಿಗೆಗೆ ಸಿದ್ಧರಾಗಿರಿ

ಕೆಟ್ಟ ಘಳಿಗೆಗೆ ಸಿದ್ಧರಾಗಿರಿ

ಈ ಪ್ರೀತಿ-ಪ್ರೇಮ-ಪ್ರಣಯ ಯಾರಿಗೂ ಹೇಳಿ-ಕೇಳಿಕೊಂಡು ಬರುವುದಿಲ್ಲ. ಅದುವೇ ಪ್ರೇಮದ ಪರಿ. ಶೇ 30ರಷ್ಟು ವಿವಾಹ ಬಂಧನದಲ್ಲಿ ಕೊನೆಗೊಳ್ಳುತ್ತವೆ ಎನ್ನುವುದಾದರೆ ಉಳಿದ ಶೇ. 70ರಷ್ಟು ಸಖತ್ ಡೇಂಜರ್ ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ಬರಕತ್ತು ಆಗಲಿಲ್ಲ ಅಂತಾದರೆ ಏನು ಮಾಡುವುದು ಎಂಬುದರ ಬಗ್ಗೆಯೂ ಅವಕಾಶ ಸಿಕ್ಕಿದಾಗ ಮಾತನಾಡಿಕೊಂಡಿರಿ. ಅದರಲ್ಲೂ ಒಬ್ಬರು ಈಗಿರುವ ಕಂಪನಿ ಬಿಟ್ಟು ಬೇರೆಡೆಗೆ ಹೋದಾಗ ಏನು ಬೇಕಾದರೂ ಆಗಬಹುದು. ಏಕೆಂದರೆ ನಿಮ್ಮ ಮೇಲೆ ನಿಗಾಯಿಡುವ HR, ಕಚೇರಿಗೆ ನಿಮ್ಮಿಂದ ಕೆಟ್ಟದಾಗುತ್ತಿದೆ ಎನ್ನುವುದಾದರೆ ಬೇಕೆಂದೇ ಪ್ರಣಯ ಪಕ್ಷಿಗಳನ್ನು ದೂರ ಮಾಡಬಹುದು. ಅದಕ್ಕೇ ಕೆಟ್ಟ ಘಳಿಗೆಗೆ ಸಿದ್ಧರಾಗಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Valentines Day- Office love ends in marriage - Careerbuilder New York - List the five Rules, Public displays of affection out of the office, Tell HR when it's real, Know your company rule, Prepare for the worst
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more