ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ದಿನದಂದೇ ಗೆಳತಿ ಕೊಂದ 'ಬ್ಲೇಡ್ ರನ್ನರ್'

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್, ಫೆ.14: ಪ್ರೇಮಿಗಳ ದಿನದಂದು ಕಹಿ ಸುದ್ದಿ ದೂರದ ದಕ್ಷಿಣ ಆಫ್ರಿಕಾದಿಂದ ಬಂದಿದೆ. ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕನಾಗಿರುವ 'ಬ್ಲೇಡ್ ರನ್ನರ್' ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಸ್ ಕೊಲೆ ಕೇಸ್ ನಲ್ಲಿ ಬಂಧಿಸಲಾಗಿದೆ. ಆಸ್ಕರ್ ತನ್ನ ಪ್ರೇಮಿಯನ್ನು ವ್ಯಾಲೆಂಟೈನ್ಸ್ ಡೇ ದಿನದಂದೇ ಕೊಲೆಗೈದ ಆರೋಪ ಹೊತ್ತಿದ್ದಾರೆ.

ಜೋಹಾನ್ಸ್ ಬರ್ಗ್ ನ ಸ್ಥಳೀಯ ರೇಡಿಯೋ ಹಾಗೂ ಬೀಲ್ಡ್ ಪತ್ರಿಕೆ ವರದಿ ಪ್ರಕಾರ ಗುರುವಾರ ಮುಂಜಾನೆ ಈ ಶೂಟ್ ಔಟ್ ನಡೆದಿದೆ. 30 ವರ್ಷ ವಯಸ್ಸಿನ ಮಹಿಳೆಯೊಬ್ಬರ ಕೊಲೆಯಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 26 ವರ್ಷ ವಯಸ್ಸಿನ ಆರೋಪಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ.ಕೊಲೆಯಾದ ಮಹಿಳೆ ದೇಹದಲ್ಲಿ 9 mm ಗುಂಡು ಹೊಕ್ಕಿದೆ. ಎರಡು ಸುತ್ತಿನ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಕಾಟ್ಲೆಗೊ ಮೊಗಲೆ ಹೇಳಿದ್ದಾರೆ.

Oscar Pistorius arrested

ಸುಮಾರು ಒಂದೂವರೆ ವರ್ಷದಿಂದ ಮಾಡೆಲ್ ರೀವಾ ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್ ನಲ್ಲಿದ್ದರು. ಕಳೆದ ವಾರವಷ್ಟೇ ಆಸ್ಕರ್ ನೀಡಿದ್ದ ಉಡುಗೊರೆಗಳ ಬಗ್ಗೆ ಮೆಚ್ಚುಗೆ ಸೂಸುತ್ತಾ ರೀವಾ ಟ್ವೀಟ್ ಮಾಡಿದ್ದರು. ರೀವಾ ಹಾಗೂ ಆಸ್ಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ ಎನ್ನಲಾಗಿದೆ. ರೀವಾ ಕೊಲೆ ಅಕಸ್ಮಾತ್ ಆಗಿ ನಡೆದ ಕೃತ್ಯ ಎಂದು ರೇಡಿಯೋ ವರದಿ ಹೇಳಿದೆ.

ಪ್ರೇಮದ ಕಾಣಿಕೆಗೆ ರಕ್ತಲೇಪನ: ಆಸ್ಕರ್ ಗೆ ವ್ಯಾಲೆಂಟೈನ್ಸ್ ಡೇ ಸರ್ಫ್ರೈಜ್ ಗಿಫ್ಟ್ ತರಲು ಶಾಪಿಂಗ್ ಹೋಗಿದ್ದ ರೀವಾ, ಕಳ್ಳ ಹೆಜ್ಜೆ ಇಡುತ್ತಾ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಶಬ್ದವಾಗಿದ್ದನ್ನು ಕೇಳಿಸಿಕೊಂಡ ಆಸ್ಕರ್ ಹಿಂದು ಮುಂದು ನೋಡದೆ, ಕಳ್ಳರು ಮನೆಗೆ ನುಗ್ಗಿರಬಹುದು ಎಂಬ ಶಂಕೆಯಿಂದ ಆಕೆಯನ್ನು ನೋಡದೆ ಗುಂಡು ಹಾರಿಸಿದ್ದಾರೆ ಎಂದು ವರದಿ ಬಂದಿದೆ. ಆದರೆ, ಪೊಲೀಸ್ ವಕ್ತಾರರು ಯಾವುದೇ ಮಾಹಿತಿ ಹೊರ ಹಾಕಿಲ್ಲ. ಆಸ್ಕರ್ ಬಂಧನವನ್ನು ಮಾತ್ರ ಖಾತ್ರಿಪಡಿಸಿದ್ದಾರೆ.

ಯಾರಿತ ಆಸ್ಕರ್?: ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್ ಒಬ್ಬ ಮಾದರಿ ಕ್ರೀಡಾಪಟುವಾಗಿದ್ದಾರೆ. ಆಸ್ಕರ್ ಅವರು ಕೃತಕ ಬಲಗಾಲು ಹೊಂದಿದ್ದು, ಬ್ಲೇಡ್(double below-knee amputations) ಹಾಕಿಕೊಂಡೇ ಲಂಡನ್ ಒಲಿಂಪಿಕ್ಸ್ ನ ಭಾಗವಹಿಸಿದ್ದರು.

ಅಂಗವೈಕಲ್ಯವಿದ್ದವರು ಪ್ಯಾರಾಂಲಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಮಾಮೂಲಿ. ಆದರೆ, ಆಸ್ಕರ್ ಅವರು ಎಲ್ಲರಂತೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ ವಿಶ್ವದ ಮೊಟ್ಟ ಮೊದಲ ಅಂಗವಿಕಲ ಕ್ರೀಡಾಪಟು ಎನಿಸಿದರು.

4X 400 ರಿಲೇ ತಂಡದಲ್ಲಿ ಭಾಗವಹಿಸಿ ಸೆಮಿಫೈನಲ್, ಫೈನಲ್ ತನಕ ತಲುಪಿದ್ದರು. ಆದರೆ, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ನಂತರ ತಮ್ಮ ಪದಕ ದಾಹವನ್ನು ಪ್ಯಾರಾಲಿಂಪಿಕ್ಸ್ ನಲ್ಲಿ ತೀರಿಸಿಕೊಂಡರು. 400 ಮೀ ದೂರವನ್ನು 46.88 ಸೆಂಕಡುಗಳಲ್ಲಿ ಮುಟ್ಟಿ ಚಿನ್ನದ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದರು

English summary
South African Olympic and Paralympic track star Oscar Pistorius, known as the "Blade Runner" for his racing prosthetics, was arrested on Thursday after his girlfriend was shot dead at his home in Pretoria. Pistorius may have mistaken her for a burglar, the Johannesburg's Talk Radio report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X