ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳಿಗೆ ಹಿತಕರವಾದ ಮೋಡದ ವಾತಾವರಣ

By Srinath
|
Google Oneindia Kannada News

Valentines Day effect- Pleasant rainy environment in Karnataka
ಬೆಂಗಳೂರು, ಫೆ. 14: ರಾಜ್ಯದ ಕೆಲವೆಡೆ ಮಹಾ ಪ್ರೇಮಿಗಳಿಗೆ ನಿಜಕ್ಕೂ ಆಹ್ಲಾದಕರವಾದ ವಾತಾವರಣ ಕಂಡುಬಂದಿದೆ. ರಾಜಧಾನಿಯಲ್ಲಿ ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣ. ಪ್ರೇಮಿಗಳಿಗಂತೂ ಕಣ್ ಮಿಟಿಕಿಸುವ ಹಿತಕರವಾದ ಚುಮುಚುಮು ಚಳಿ/ಮಳೆ ವಾತಾವರಣ.

ಉಲ್ಲಾಸದಾಯಕ ಡಿಪ್ರೆಶನ್: ಹಾಗಂತ ಇನ್ನೂ ಎಲ್ಲೂ ಮಳೆಯಾಗಿಲ್ಲವಾದರೂ ವೆದರ್ ಫೋರ್ ಕಾಸ್ಟ್ ಪ್ರಕಾರ ಇನ್ನು ಮೂರು ದಿನ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಅಂದರೆ Valentine's Day ಸಂದರ್ಭದಲ್ಲಿ ಪ್ರೇಮಿಗಳಿಗೆ ಮೂರು ದಿನಗಳ ಹ್ಯಾಂಗೋವರ್! ಅದಾಗಲೇ ಪ್ರೇಮಿಗಳು ಉತ್ತೇಜನಕಾರಿ ವಾತಾವರಣಕ್ಕೆ ಒಂದು ಥ್ಯಾಂಕ್ಸ್ ಹೇಳಿದ್ದಾರೆ.

ಹೌದು ಹವಾಮಾನ ಇಲಾಖೆ ಮೂಲಗಳ ಪ್ರಕಾರ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಫೆ. 14ರಿಂದ 16ರವರೆಗೆ ಸಾಧಾರಣ ಮಳೆ ಮತ್ತು ಉತ್ತರ ಕರ್ನಾಟಕದ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.

English summary
Valentines Day effect? Pleasant rainy environment in Karnataka! Due to depression in Bay of Bangal many parts of the Karnataka state has come under clouds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X