ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿಹಳ್ಳಿಗೂ ಐಡಿಯಾ ಲಗ್ಗೆ, ಏನ್ ಐಡಿಯಾ ಸರ್ ಜಿ!

|
Google Oneindia Kannada News

ಬೆಂಗಳೂರು, ಫೆ.14: ಏನ್ ಐಡಿಯಾ ಸರ್ ಜಿ' ಎಂಬ ಜಾಹೀರಾತಿನ ಮೂಲಕ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಐಡಿಯಾ ಮೊಬೈಲ್ ಕಂಪನಿ ಭಾರತದ ಮತ್ತು ಪ್ರಮುಖವಾಗಿ ಕರ್ನಾಟಕ ಗ್ರಾಮೀಣ ಭಾಗಗಳನ್ನು ತಲುಪಲು ಪ್ರಚಾರ ಕಾರ್ಯ ಆರಂಭಿಸಿದೆ. ವಿನೂತನ ಯೋಜನೆ ಮೂಲಕ ಹಳ್ಳಿಗಳನ್ನು ತಲುಪಿ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ಗ್ರಾಮೀಣ ಪ್ರದೇಶಗಳನ್ನು ಸುಲಭವಾಗಿ ತಲುಪಲು ಸರ್ಕಾರಿ ಬಸ್ ಮತ್ತು ಕುಡಿಯುವ ನೀರಿನ ಟ್ಯಾಂಕರ್ ಮೇಲೆ ಜಾಹೀರಾತು ಪ್ರದರ್ಶಿಸಿರುವ ಕಂಪನಿ, ಇದಕ್ಕಾಗಿ ಈಗಾಗಲೇ 200 ಸರ್ಕಾರಿ ಬಸ್ ಮತ್ತು ಸುಮಾರು 8 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 60 ಟ್ಯಾಂಕರ್ ಗಳ ಮೇಲೆ ತನ್ನ ಜಾಹೀರಾತನ್ನು ಮುದ್ರಿಸಿದೆ.

ಕಂಪನಿಯ ಲೋಗೋ ಹೊತ್ತ ಬಸ್ ಗಳು ಮತ್ತು ಟ್ಯಾಂಕರ್ ಗಳು "ನಾವು 21,000 ಪಟ್ಟಣಗಳನ್ನು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತೇವೆ" ಎಂದು ಸಂದೇಶ ಸಾರುತ್ತಾ,ಹಳ್ಳಿ-ಹಳ್ಳಿ ತಲುಪುತ್ತಿವೆ. ದಕ್ಷಿಣ ಭಾರತದ 80 ನಗರಗಳಲ್ಲಿ ಇಂತಹ ಪ್ರಚಾರವನ್ನು ಐಡಿಯಾ ಮಾರ್ಚ್ ತಿಂಗಳ ಕೊನೆಯವರೆಗೆ ಕೈಗೊಂಡಿದೆ.

ಭಾರತದ ಮೂರನೇ ದೊಡ್ಡ ಮೊಬೈಲ್ ಜಾಲ ಹೊಂದಿರುವ ಕಂಪನಿ ಸುಮಾರು 117 ಮಿಲಿಯನ್ ಗ್ರಾಹಕರನ್ನು ಹೊಂದಿದೆ. 2ಜಿ ಮತ್ತು 3ಜಿ ಸೇವೆಗಳ ಮೂಲಕ 3,000 ಪಟ್ಟಣ ಮತ್ತು 10,000 ಹಳ್ಳಿಗಳನ್ನು ತಲುಪಿದೆ. ಕರ್ನಾಟಕದ ಹಳ್ಳಿಗಳಲ್ಲೂ ಕಂಪನಿಯ ಪ್ರಚಾರ ಕಾರ್ಯ ಆರಂಭವಾಗಿದ್ದು, ಹಳ್ಳಿ ಹಳ್ಳಿಗಳಲ್ಲೂ ಐಡಿಯಾ ಹಳ್ಳಿಗರನ್ನು ಬೆನ್ನತ್ತುತ್ತಿದೆ.

"ಸ್ಥಳೀಯ ಮಾಧ್ಯಮಗಳನ್ನು ಬಳಸಿಕೊಂಡರೆ ಜನರನ್ನು ತಲುಪುವುದು ಬಹಳ ಸುಲಭವಾಗುತ್ತದೆ" ಎಂದಿರುವ ಕಂಪನಿ ಸಿಇಓ ಗೌರ್ ಗುಪ್ತಾ, ಬಸ್ ಗಳು ಹಳ್ಳಿಹಳ್ಳಿಗೂ ಸಂಚರಿಸುವುದರಿಂದ ಜನರನ್ನು ತಲುಪಲು ಸುಲಭವಾಗುತ್ತದೆ. ನೀರಿನ ಟ್ಯಾಂಕರ್ ಗಳ ಮೇಲಿನ ಜಾಹೀರಾತುಗಳತ್ತ ಜನರು ಆಕರ್ಷಿತರಾಗುತ್ತಾರೆ. ಜನರನ್ನು ತಲುಪಲು ಇದಕ್ಕಿಂತ ಸುಲಭವಾದ ಮಾರ್ಗ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.

English summary
Indias 3rd largest mobile services operator Idea launched three-month campaign in the rural areas of Karnataka to increase visibility. It uses transit media such as government buses and water tankers to spread the brand message.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X