ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷೆ ತಕ್ಕ ಫಲವಿಲ್ಲ, ಎಸ್ ಬಿಐಗೆ 4% ಅಷ್ಟೇ ಲಾಭ

By Mahesh
|
Google Oneindia Kannada News

SBI Q3 results below expectations; stock tanks
ಬೆಂಗಳೂರು, ಫೆ.14: ದೇಶದ ಅತಿದೊಡ್ಡ ಬ್ಯಾಂಕಿಂಗ್ ಜಾಲ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ತ್ರೈಮಾಸಿಕ ವರದಿ ಗುರುವಾರ ಪ್ರಕಟವಾಗಿದೆ. ನಿರೀಕ್ಷೆಗೆ ತಕ್ಕ ಫಲ ಸಿಗದಿದ್ದರೂ, ಎಸ್ ಬಿಐ ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 3396 ಕೋಟಿ ರು ನಂತೆ ಶೇ 4 ರಷ್ಟು ನಿವ್ವಳ ಲಾಭ ಗಳಿಸಿದೆ.

ಗುರುವಾರ (ಫೆ.14) ಎಸ್ ಬಿಐ ಷೇರುಗಳು ಸ್ವಲ್ಪ ಡಲ್ ಆಗಿದ್ದವು. ಬಿಎಸ್ ಇನಲ್ಲಿ ಮಧ್ಯಾಹ್ನ 3.10ರ ಸುಮಾರಿಗೆ 2221.70 ರು ನಂತೆ ಶೇ 1.48 ರಷ್ಟು ಕುಸಿತ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 2221.00 ರು ನಂತೆ ಶೇ 1.49 ರಷ್ಟು ಇಳಿಮುಖವಾಗಿತ್ತು.

ಸಂಸ್ಥೆಯ ನಿವ್ವಳ ಬಡ್ಡಿ ಆದಾಯ ಶೇ 2.7 ರಷ್ಟು ಕುಸಿತ ಕಂಡಿದ್ದು, 11,154 ಕೋಟಿ ಗಳಿಕೆಯಾಗಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಇಳಿಕೆ ಕಂಡು ಬಂದಿದೆ. ಒಟ್ಟಾರೆ ನಿವ್ವಳ ಅನುತ್ಪಾದಕ ಆಸ್ತಿ(non performing assets) ಮೌಲ್ಯ 12.21 ರಷ್ಟಾಗಿದೆ.

ಎರಡನೇ ತ್ರೈಮಾಸಿಕದಲ್ಲಿ ಶೇ 30.17 ರಷ್ಟು ನಿವ್ವಳ ಲಾಭ ಗಳಿಸಿದ್ದು 3,658 ಕೋಟಿ ರು ನಷ್ಟು ಗಳಿಸಿತ್ತು. ಸಂಸ್ಥೆಯ ನಿವ್ವಳ ಬಡ್ಡಿ ಆದಾಯ ಶೇ 5.3 ರಷ್ಟು ಏರಿಕೆ ಕಂಡು 10,973 ಕೋಟಿ ಗಳಿಕೆ ಬಂದಿದೆ. ಒಟ್ಟಾರೆ ನಿವ್ವಳ ಅನುತ್ಪಾದಕ ಆಸ್ತಿ(non performing assets) ಮೌಲ್ಯ ಶೇ 5.15 ರಷ್ಟಾಗಿದೆ. ಕಳೆದ ಬಾರಿ ಶೇ 4.19 ರಷ್ಟಿತ್ತು.

ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 1,000 ಹೊಸ ಬ್ರ್ಯಾಂಚ್ ಗಳನ್ನು ಆರಂಭಿಸಲಿದ್ದು, 2013 ಮಾರ್ಚ್ ವೇಳೆಗೆ 15,000 ಬ್ರ್ಯಾಂಚ್ ತೆರೆಯುವ ನಿರೀಕ್ಷೆ ಹೊಂದಿದೆ. ಈ ವರ್ಷದಲ್ಲಿ 2,500 ಪ್ರೊಬೆಷನರಿ ಆಫೀಸರ್ ಗಳು, 12,000 ಅಧಿಕಾರಿಗಳು ಹಾಗೂ ಕ್ಲರ್ಕ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಎಸ್ ಬಿಐ ಪ್ರಕಟಿಸಿದೆ. ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ.

English summary
The country's largest lender, State Bank of India reported less than expected third quarter results. The banks net profit rose by only 4% to Rs 3396 crore for the quarter ended December 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X