ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಲೆ-ಜಿ ಬಿಸ್ಕತಿಗೆ ಒಂದು ಥ್ಯಾಂಕ್ಸ್ ಹೇಳೋಣವಾ?

By Srinath
|
Google Oneindia Kannada News

ಮುಂಬೈ: ಪಾರ್ಲೆ ಜಿ ಬಿಸ್ಕತ್ ತಿನ್ನದವರು ಯಾರಿದ್ದಾರೆ ಹೇಳಿ? ಆ ಬಿಸ್ಕತ್ ತಿಂದ ಮೇಲೆ ಅದಕ್ಕೆ ಮಾರುಹೋಗದವರು ಯಾರಿದ್ದಾರೆ ಹೇಳಿ? ಹಾಗೆಂದೇ ನಮ್ಮ-ನಿಮ್ಮೆಲ್ಲರ ಅಚ್ಚು ಮೆಚ್ಚಿನ ಪಾರ್ಲೆ ಜಿ ಬಿಸ್ಕತ್ ಗಡಿಯಾರದಲ್ಲಿ 73 ವರ್ಷ ಪೂರೈಸಿದ್ದು, 5000 ಕೋಟಿ ರೂ. ವ್ಯಾಪಾರದ ಗಡಿಯನ್ನೂ ಸರಾಗವಾಗಿ ದಾಟಿದೆ.

ಹಾಗೆ ನೋಡಿದರೆ ಈಗ ಕಾಸಿಗೊಂದು ಕೊಸರಿಗೆ ನಾಲ್ಕು ಎನ್ನುವಂತೆ ಬಿಸ್ಕತ್ತುಗಳು ಸಿಗುತ್ತಿವೆ. ಇಂದು ಮಾರುಕಟ್ಟೆಯಲ್ಲಿರುವ ಬಿಸ್ಕತ್ ನಾಳೆ ಮಾಯವಾಗಿರುತ್ತದೆ. ಆದರೆ ಸುದೀರ್ಘ ಕಾಲ ಜನರ ಬಾಯಲ್ಲಿ ಉಳಿದಿರುವುದು ನಮ್ಮೀ ಪಾರ್ಲೆಜಿಯೊಂದೇ ಎನ್ನಬಹುದು.

ಮಧ್ಯೆ ರಾತ್ರಿ ಮಗುವೊಂದು ಬಿಸ್ಕತ್ ಬೇಕು ಎಂದು ರಚ್ಚೆ ಹಿಡಿದಿದೆಯೆಂದರೆ ಅದಕ್ಕೆ ಪಾರ್ಲೆ ಜಿ ಬಿಸ್ಕತ್ ಬೇಕಿದೆ ಎಂದೇ ಅರ್ಥ ಅನ್ನುವಷ್ಟರಮಟ್ಟಿಗೆ Parle-G ಭಾರತೀಯರ ಬಾಯಿಗೆ ಸಿಕ್ಕಿದೆ. ಇಂತಿಪ್ಪ Parle-Gಗೆ ನಾವೆಲ್ಲ ಸೇರಿ ಒಂದು ಥ್ಯಾಂಕ್ಸ್ ಹೇಳೋಣವಾ?

 ಮಗುವಿನಿಂದ -ದುಡಿಯುವ ಕಾರ್ಮಿಕನಿಗೂ

ಮಗುವಿನಿಂದ -ದುಡಿಯುವ ಕಾರ್ಮಿಕನಿಗೂ

ಅಗ್ಗದ ದರದಲ್ಲಿ ಆದರೆ ಉತ್ತಮ ಗುಣಮಟ್ಟದಲ್ಲಿ ಹಳ್ಳಿಯಿಂದ-ದಿಲ್ಲಿಯವರೆಗೂ ಸಿಗುವ ಬಿಸ್ಕತ್ ಎಂಬ ಹೆಗ್ಗಳಿಕೆ Parle-Gಯದ್ದಾಗಿದೆ. 1939ರಲ್ಲಿ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದಲ್ಲಿ ಅಂಬೆಗಾಲಿಟ್ಟ Parle-G, ಅಂಬೆಗಾಲಿಡುವ ಮಗುವಿನಿಂದ ಹಿಡಿದು ಬೆವರು ಸುರಿಸಿ ದುಡಿಯುವ ಕಾರ್ಮಿಕನಿಗೆ ಅರ್ಧ ಕಪ್ ಕಾಫಿ ಜತೆಗೆ ಹೊಟ್ಟೆಗೆ ಹಿಟ್ಟಾಗುವ ತನಕ ಎಲ್ಲರ ಜಿಹ್ವಾ ಚಾಪಲ್ಯವನ್ನು ತಣಿಸುತ್ತಾ ಬಂದಿದೆ.
ಅಪ್ಪಟ ಪಾರ್ಲೆ-ಜಿ ಬಿಸ್ಕತ್ (Glucose Biscuit ರೂಪದಲ್ಲಿ) ಪ್ರಸಕ್ತ ಹಣಕಾಸು ವರ್ಷದಲ್ಲಿ 5,000 ಕೋಟಿ ರೂ. ವಹಿವಾಟು ಗಡಿಯನ್ನು ದಾಟಿದೆ! ಇದರಿಂದಲೇ Parle-G ಪ್ರಾಡಕ್ಟ್ ಎಷ್ಟು ಜನಪ್ರಿಯ ಎಂಬುದು ರುಜುವಾಗುತ್ತದೆ.

1939ರಲ್ಲಿ Parle-G ಬಿಸ್ಕತ್ ಮಾರಾಟಕ್ಕೆ

1939ರಲ್ಲಿ Parle-G ಬಿಸ್ಕತ್ ಮಾರಾಟಕ್ಕೆ

2012ನೇ ಸಾಲಿನಲ್ಲಿ ಮೋಹನಲಾಲ್ ದಯಾಳ್ ಚೌಹಾನ್ ಎಂಬುವವರು ಪಾರ್ಲೆ ಕಂಪನಿ 5010 ಕೋಟಿ ರೂ. ಮೌಲ್ಯದ ಬಿಸ್ಕತ್ ಗಳನ್ನು ಮಾರಾಟ ಮಾಡುವ ಮೂಲಕ ಈ ಸಾಧನೆ ಮಾಡಿದೆ. 1929ರಲ್ಲಿ ಮುಂಬೈನ ವಿಲೆ-ಪಾರ್ಲೆಯಲ್ಲಿ ಆರಂಭವಾದ ಕಂಪನಿ 1939ರಲ್ಲಿ ಪಾರ್ಲೆ-ಜಿ ಬಿಸ್ಕತ್ ಮೂಲಕ ಬಿಸ್ಕತ್ ಮಾರಾಟಕ್ಕೆ ಅಂಕಿತವಾಯಿತು.
ಅಂದಿನ ಬ್ರಿಟೀಷರ ಕಾಲದಲ್ಲಿ ಹಸಿದ ಸಹಸ್ರಾರು ಹೊಟ್ಟೆಗಳನ್ನು ತಣಿಸುವುದು ತನ್ನ ಧ್ಯೇಯ ಎಂಬಂತೆ ಸೇವಾ ಮನೋಭಾವಕ್ಕೆ ಒತ್ತುಕೊಟ್ಟಿತು. ಹಾಗಾಗಿಯೇ ಇಂದಿಗೂ ಬೇರೆ ಯಾವುದೇ ಉತ್ಪನ್ನವು ಮಾರಾಟದಲ್ಲಿ ಇದರ ಹತ್ತಿರಕ್ಕೂ ಸುಳಿದಿಲ್ಲ.

Parle-Gಗೆ ನಾಲ್ಕನೆಯ ತಲೆಮಾರು

Parle-Gಗೆ ನಾಲ್ಕನೆಯ ತಲೆಮಾರು

ವಾರ್ಷಿಕ 1 ಶತಕೋಟಿ ಡಾಲರ್ ವಹಿವಾಟಿನೊಂದಿಗೆ ವಿಶ್ವಮಟ್ಟದಲ್ಲಿ ಬೇರೆ ಉತ್ಪನ್ನಗಳಿಗೆ ಹೋಲಿಕೆಯಲ್ಲದಿದ್ದರೂ ದೇಶೀಯವಾಗಿ ಬೇರೆ ಉತ್ಪನ್ನಗಳಿಗಿಂತ Parle-G ಬಿಸ್ಕತ್ ತುಂಬಾ ಮುಂದಿದೆ. ಅಜಯ್ ಚೌಹಾನ್ ಈಗ ಕಂಪನಿಯ ಚುಕ್ಕಾಣಿ ಹಿಡಿದಿದ್ದು, Parle-G ನಾಲ್ಕನೆಯ ತಲೆಮಾರನ್ನು ಕಂಡಿದೆ.

ಏಳು ದಶಕದಲ್ಲಿ ಸಾಕಷ್ಟು ಏಳುಬೀಳು

ಏಳು ದಶಕದಲ್ಲಿ ಸಾಕಷ್ಟು ಏಳುಬೀಳು

ಈ ಏಳು ದಶಕಗಳಲ್ಲಿ ಕಂಪನಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆಯಾದರೂ ಗುಣಮಟ್ಟ ಮತ್ತು ಬೆಲೆಯಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಇಂದಿಗೂ ಅಗ್ಗದ ದರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ತಿನಿಸಾಗಿದೆ. ಬ್ರಿಟಾನಿಯಾದ ಟೈಗರ್ ಬಂದಾಗ ಪುಟ್ಟ ಪಾರ್ಲೆ-ಜಿಗೆ ಕಾಫಿ ಕಪ್ಪಿನಲ್ಲಿ ಬಿರುಗಾಳಿ ಎದ್ದಿದಂತೆ ಭಾಸವಾಗಿತ್ತು. ಆದರೆ ಬೇರುಗಳು ಗಟ್ಟಿಯಾಗಿದ್ದರಿಂದ Parle-G ಶಕ್ತಿಮಾನ್ ಆಗಿ ನಿಲ್ಲುವಂತಾಯಿತು.

ಹತ್ತು ವರ್ಷ ಬೆಲೆಯನ್ನೇ ಏರಿಸಲಿಲ್ಲ!

ಹತ್ತು ವರ್ಷ ಬೆಲೆಯನ್ನೇ ಏರಿಸಲಿಲ್ಲ!

ನಿಜಕ್ಕೂ ಇದು ನಂಬುವಂತಹುದಾ? ಕಂಪನಿಯೊಂದು ಗ್ರಾಹಕನ ಒತ್ತಾಸೆಗೆ ಇಷ್ಟೊಂದು ಬೆಲೆ ಕೊಡುತ್ತದಾ? ಅನ್ನುವಂತಿದೆ Parle-G ಬಿಸ್ಕತ್ತಿನ 1996 ರಿಂದ 2006ರವರೆಗಿನ ಮಾರಾಟ ಬೆಲೆ. OMG! ಆ 10 ವರ್ಷಗಳಲ್ಲಿ Parle-G ಬಿಸ್ಕತ್ತಿನ ಬೆಲೆ unchanged! ಅದೂ ಗೋಧಿ, ಸಕ್ಕರೆ ಹಾಲಿನ ಉತ್ತನ್ನಗಳು ಶೇ. 150ರಷ್ಟು ಏರಿಕೆಯಾಗಿದ್ದಾಗ!?
ಬೇರೆ ಯಾವುದೇ ಬ್ರ್ಯಾಂಡಿನ ಬಿಸ್ಕತ್ Parle-G ಹತ್ತಿರಕ್ಕೂ ಬಾರದಂತೆ ಗ್ರಾಹಕರು Parle-Gಯನ್ನು ಕೈಯಲ್ಲಿ ಹಿಡಿದಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಪಾರ್ಲೆಜಿ ಆರ್ಭಟ ಕಂಡು ಬ್ರಿಟಾನಿಯಾ, ಸನ್ ಫೀಸ್ಟುಗಳು ಮಾರುಕಟ್ಟೆಯಿಂದ ಅಕ್ಷರಶಃ ಓಡಿಹೋಗಿವೆ.

English summary
Parle-G Biscuits cross 5000 crore Rs transaction. When Parle Products launched Parle-G in 1939 during the British rule, the firm considered it a responsibility to sell affordable biscuits to Indians. In 2012, Parle Products sold Rs 5,010 crore worth of its flagship glucose biscuits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X