ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರಾಟಕ್ಕೆ ಮುಖ್ಯಮಂತ್ರಿಗಳು ಖರ್ಚು ಮಾಡಿದ್ದೆಷ್ಟು?

|
Google Oneindia Kannada News

CM Jagadish Shettar
ಬೆಂಗಳೂರು, ಫೆ.13 : ದಕ್ಷಿಣ ಭಾರತದಲ್ಲಿ ಮೊಟ್ಟಮೊದಲು ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಸರ್ಕಾರ, ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ. ಮೂವರು ಮುಖ್ಯಮಂತ್ರಿಗಳ ವಿಮಾನ ಪ್ರಯಾಣದ ಖರ್ಚನ್ನು ಜಗದೀಶ್ ಶೆಟ್ಟರ್ ಸದನದಲ್ಲಿ ಘೋಷಿಸಿದ್ದು, ವಿಮಾನ ಪ್ರಯಾಣಕ್ಕಾಗಿ 11.21 ಕೋಟಿ ರು. ಹಣ ವ್ಯಯಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ವಿಧಾನಮಂಡಲ ಕಲಾಪದಲ್ಲಿ ಫೆ.12 ರಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಜಗದೀಶ್ ಶೆಟ್ಟರ್, 2009 ಜನವರಿ 18ರಿಂದ ಡಿ.6 ರವರೆಗೆ ಮೂವರು ಮುಖ್ಯಮಂತ್ರಿಗಳ ವಿಮಾನ ಹಾರಾಟದ ಖರ್ಚು 11.21 ಕೋಟಿ ರೂ. ಆಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಸಿಎಂ ಶೆಟ್ಟರ್ 2.48 ಕೋಟಿ : ಜುಲೈ 12ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಜಗದೀಶ್ ಶೆಟ್ಟರ್ ಗೆ ಕಾವೇರಿ ವಿವಾದ ಇನ್ನಿಲ್ಲದಂತೆ ಕಾಡಿದೆ. ಆದ್ದರಿಂದ, ಅವರು ಪದೇ ಪದೇ ದೆಹಲಿಯ ವಿಮಾನವೇರಿದ್ದಾರೆ. ಡಿ.6ವರೆಗೆ ಸಿಎಂ ಶೆಟ್ಟರ್ ವಿಮಾನ ಪ್ರಯಾಣಕ್ಕಾಗಿಯೇ 2.48 ಕೋಟಿ ರೂ. ಖರ್ಚು ಮಾಡಿದ್ದಾರೆ.

ಶೆಟ್ಟರ್ ಬಹುತೇಕ ಸಂದರ್ಭದಲ್ಲಿ ನವದೆಹಲಿಯ ಚಿಪ್ ಸನ್ ಏವಿಯೇಶನ್ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಜೂನ್.28ರಂದು ಅವರ ಅಧಿಕೃತ ಪ್ರಯಾಣ ರದ್ದಾಗಿದ್ದು, ಅದಕ್ಕಾಗಿ 3.37 ಲಕ್ಷ ರೂ.ವೆಚ್ಚ ಮಾಡಲಾಗಿದೆ. ತವರು ಜಿಲ್ಲೆ ಹುಬ್ಬಳ್ಳಿಗೂ ಶೆಟ್ಟರ್ ಆರು ತಿಂಗಳಿನಲ್ಲಿ 9 ಬಾರಿ ವಿಮಾನದಲ್ಲಿ ತೆರಳಿದ್ದು, ಅದಕ್ಕಾಗಿ 50 ಲಕ್ಷ ರೂ. ಪಾವತಿಸಿದ್ದಾರೆ.

ಯಡಿಯೂರಪ್ಪ ದಾಖಲೆ: ನವದೆಹಲಿಗೆ 2009ರ ಸೆ.14 ರಂದು ಪ್ರಯಾಣ ಬೆಳೆಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒಂದು ದಿನದ ಪ್ರಯಾಣಕ್ಕೆ 1.72 ಕೋಟಿ ರೂ. ಖರ್ಚುಮಾಡಿ ದಾಖಲೆ ಮಾಡಿದ್ದಾರೆ.

English summary
Karnataka CM Jagadish Shettar declared air travel expenses incurred by three chief ministers Yeddyurappa, Sadananda Gowda and himself. He said, totally Rs. 11.21 crore spent for air travel. He was responding to a querry by Ramalinga Reddy, Congress leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X