ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಎಂಟಿ ಡೀಲ್: ಕೃಷ್ಣ, ಡಿಕೆಶಿಗೆ ಲೋಕಾಯುಕ್ತ ಭೀತಿ

By Mahesh
|
Google Oneindia Kannada News

S M Krishna
ಬೆಂಗಳೂರು, ಫೆ.13: ಎಚ್ ಎಂಟಿ ಗಡಿಯಾರ ನಿಲ್ಲಿಸಿದ ಕಾಂಗ್ರೆಸ್ ನಾಯಕರಿಗೆ ಲೋಕಾಯುಕ್ತ ಪೊಲೀಸರ ಭೀತಿ ಕಾಡಲು ಆರಂಭಿಸಿದೆ. ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸುತ್ತಿಕೊಂಡಿರುವ ಎಚ್‌ಎಂಟಿ ಕಾರ್ಖಾನೆಯ ಭೂ ಹಗರಣ ಲೋಕಾಯುಕ್ತ ವಿಶೇಷ ಕೋರ್ಟ್ ಮೆಟ್ಟಿಲೇರಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವೆ ಮೋಟಮ್ಮ, ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್‌ರಾವ್ ದೇಶ್‌ಮುಖ್ ಕುಟುಂಬ ಸದಸ್ಯರು ಸೇರಿದಂತೆ 36 ಜನರ ವಿರುದ್ಧ
ದೂರು ದಾಖಲಾಗಿದೆ.

ಈ ಸಂಬಂಧ ದೂರು ಪಡೆದ ನ್ಯಾಯಾಧೀಶ ಎನ್. ಕೆ.ಸುಧೀಂದ್ರರಾವ್ ಅವರು, ಎಚ್‌ಎಂಟಿಯಿಂದ ಮಾರಾಟವಾದ ಭೂಮಿಯ ದಾಖಲೆ ಪತ್ರಗಳನ್ನು ದೃಢೀಕರಿಸಿ ಸಲ್ಲಿಸುವಂತೆ ಸೂಚನೆ ನೀಡಿ ಮಾರ್ಚ್ 4ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

ಎಸ್ಸೆಂ ಕೃಷ್ಣ ಪ್ರತಿಕ್ರಿಯೆ: 'ನಾನು ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಕಂಪನಿಗೆ ಹಲವು ಬಾರಿ ಹೋಗಿರುವುದು ನಿಜ. ವಿದೇಶಿ ಗಣ್ಯರು ಬಂದಾಗ ಅವರ ಜೊತೆ ಭೇಟಿ ನೀಡಿದ್ದೇನೆ. ಯಾರೋ ಕಾರ್ಪೊರೇಟರ್ ರಮೇಶ್ ಅಂತೆ ಭೂ ಹಗರಣದ ಆರೋಪ ಹೊರೆಸಿ ದೂರು ನೀಡಿದ್ದಾರೆ. ಈ ಬಗ್ಗೆ ನನ್ನ ಲಾಯರ್ ಗೆ ಹೇಳಿದ್ದೇನೆ. ದೆಹಲಿ ಕೋರ್ಟ್ ನಲ್ಲಿ ಈ ಬಗ್ಗೆ ಪ್ರಶ್ನಿಸುತ್ತೇವೆ ಎಂದು ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರಿಗೆ ಕಳೆದ ರಾತ್ರಿ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ಭೂ ಹಗರಣ ಕುರಿತು ಬಿಬಿಎಂಪಿ ಸದಸ್ಯ ಎನ್. ಆರ್.ರಮೇಶ್ ಮಂಗಳವಾರ(ಫೆ.12) ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲಿಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಧಿಕಾರವಧಿಯಲ್ಲಿ ತಮ್ಮ ಅಳಿಯ ಸಿದ್ದಾರ್ಥ, ಮಾಜಿ ಸಚಿವರಾದ ಡಿ,ಕೆ. ಶಿವಕುಮಾರ್, ಮೋಟಮ್ಮ ಅವರಿಗೆ ಕಾನೂನು ಬಾಹಿರವಾಗಿ ಹೆಚ್‌ಎಂಟಿ ಕಾರ್ಖಾನೆಗೆ ಸೇರಿದ 202 ಎಕರೆ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ರೈತರಿಂದ ಉಚಿತವಾಗಿ 631 ಎಕರೆ ಪಡೆಯಲಾಗಿತ್ತು. ಬಳಿಕ ರಾಜ್ಯ ಭೂಸ್ವಾಧೀನ ಕಾಯ್ದೆ ಅನ್ವಯ ಕೇಂದ್ರ ಮತ್ತು ರಾಜ್ಯಸರ್ಕಾರದ ಅನುಮತಿ ಪಡೆಯದೆ 3 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 202 ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳಿಗೆ ತುಂಡು ತುಂಡಾಗಿ ಮಾರಾಟ ಮಾಡಲಾಗಿದೆ. ಈ ಹಗರಣದಲ್ಲಿ ಕೇಂದ್ರ ಸಚಿವರಾದ ಜಯಪಾಲರೆಡ್ಡಿ ಹಾಗೂ ಮಹಾರಾಷ್ಟ್ರ ವಿಲಾಸ್‌ರಾವ್ ದೇಶ್‌ಮುಖ್ ಅವರು ಕೈಜೋಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಣಕಾಸಿನ ವ್ಯವಹಾರ ತನಿಖೆಯಾಗಲಿ ಎಚ್‌ಎಂಟಿಯ ಆಸ್ತಿಯ ಕಾನೂನು ಬಾಹಿರವಾಗಿ ಮಾರಾಟವಾದ ಭೂಮಿ ಲಾಭವನ್ನು ಶೋಭಾ ಡೆವಲಪರ್‍ಸ್, ಧವನಮ್ ಜ್ಯುವೆಲರ್‍ಸ್, ಭಾವನ ಜ್ಯುವೆಲರ್‍ಸ್‌ನ ಪಡೆದುಕೊಂಡಿದ್ದಾರೆ. ಅಲ್ಲದೆ, ಸ್ಕಂಧ ಡೆವಲಪರ್‍ಸ್, ಟಾಟಾ ಬಿಲ್ಡರ್‍ಸ್‌ಗೂ ಪಾಲು ಹೋಗಿದೆ. ಹಾಗಾಗಿ ಇದರ ಸಂಪೂರ್ಣ ಹಣಕಾಸಿನ ವ್ಯವಹಾರವನ್ನು ತನಿಖೆ ಮಾಡುವಂತೆ ದೂರುದಾರ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ಸಾಲಕ್ಕೆ ಲೆಕ್ಕವಿಲ್ಲ:ಎಚ್‌ಎಂಟಿ ಕಾರ್ಖಾನೆಯ ಅಧ್ಯಕ್ಷ ಜಾವೇದ್ ಅಧಿಕಾರದಲ್ಲಿದ್ದ ವೇಳೆ ಯುಕೋ ಬ್ಯಾಂಕ್‌ನಿಂದ 350 ಕೋಟಿ ರೂಪಾಯಿಯನ್ನು ಕಾರ್ಖಾನೆಯ ಹೆಸರಿನಲ್ಲಿ ಸಾಲ ಪಡೆದುಕೊಂಡಿದ್ದಾರೆ. ಬಳಿಕ ಸಾಲದ ಹಣವನ್ನು ಖರ್ಚು ಮಾಡಿದ್ದಕ್ಕೆ ದಾಖಲೆ ಪತ್ರಗಳು ಮಾತ್ರ ಇಲ್ಲದಂತಾಗಿದೆ.

ಈ ಸಂಬಂಧ ದೂರು ಪಡೆದ ಕೇಂದ್ರ ಸರ್ಕಾರ ಜಾವೇದ್‌ಗೆ ಕೇವಲ 1ಲಕ್ಷ ರೂ. ದಂಡ ವಿಧಿಸಿ ಕೈತೊಳೆದುಕೊಂಡಿದೆ. ಹಾಗಾಗಿ 350 ಕೋಟಿ ರೂ. ಸಾಲದ ಮೊತ್ತ ಏನಾಯಿತು ಎಂಬ ಮಾಹಿತಿಯ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಹೇಳಲಾಗಿದೆ. [ಎಚ್ಎಂಟಿ ಸಮಾಧಿ ಮೇಲೆ ಕಾಂಗ್ರೆಸ್ಸಿಗರ ದುಡ್ಡಿನ ಸೌಧ]

English summary
Lokayukta court accepted the complaint given by Yediyur corporator NR Ramesh of the BJP who alleged few influential Congress leaders from the State and Centre illegally sold at least 202 acres of the total 631 acres of land belonging to the Hindustan Machine Tools (HMT) in 2005. Ramesh and Nagaraj demanded CBI probe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X