ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಸಾರ್ಟಿಸಿ ;ಪ್ರಯಾಣೋತ್ಸವ' ಭಾರಿ ರಿಯಾಯಿತಿ

By Mahesh
|
Google Oneindia Kannada News

KSRTC offers 30 pc discount,
ಬೆಂಗಳೂರು, ಫೆ. 12: ಕೆಎಸ್ಸಾರ್ಟಿಸಿ ಪ್ರಯಾಣಿಕರನ್ನು ಆಕರ್ಷಿಸುವ ದೃಷ್ಟಿಯಿಂದ 'ಪ್ರಯಾಣೋತ್ಸವ' ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದೆ. ಫೆ.12ರಿಂದ ಮಾರ್ಚ್ 31ರ ವರೆಗೆ ಕನಿಷ್ಠ ನಾಲ್ಕು ಬಾರಿ ಟಿಕೆಟ್ ಬುಕ್ ಮಾಡಿದರೆ ನಾಲ್ಕನೆ ಟಿಕೆಟ್‌ಗೆ ಶೇ.30ರಷ್ಟು ರಿಯಾಯಿತಿ ಘೋಷಿಸಿದೆ.

ಒಂದೇ ಗುರುತಿನಿಂದ ಬುಕ್ಕಿಂಗ್ ಮಾಡಿರಬೇಕು. ಪ್ರಯಾಣಿಕರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಎಲ್ಲ ಕಡ್ಡಾಯವಾಗಿ ಒಂದೇ ಆಗಿರಬೇಕು. ಎಲ್ಲ ಟಿಕೆಟ್‌ಗಳನ್ನು ಇ-ಬುಕ್ಕಿಂಗ್(ಆನ್ ಲೈನ್) ಅಥವಾ ಎಂ-ಬುಕ್ಕಿಂಗ್ ಮುಖಾಂತರ ಪಡೆದಿರಬೇಕು. ಈ ಸೇವೆಯು ಎಲ್ಲ ಸೇವೆಗಳಿಗೆ ಎಲ್ಲ ಮಾರ್ಗಗಳಿಗೆ ಅನ್ವಯಿಸುತ್ತದೆ.

ಪ್ರಸ್ತುತ ಚಾಲ್ತಿಯಲ್ಲಿರುವ ನಿಬಂಧನೆ ಪ್ರಕಾರ ಒಂದು ಬಾರಿ ಮಾತ್ರ ರಿಯಾಯಿತಿಯನ್ನು ಪರಿಗಣಿಸಲಾಗುವುದು. ಅಲ್ಲದೆ. ಮಂಗಳವಾರದಿಂದ ಗುರುವಾರದವರೆಗೆ ಕೆಎಸ್ಸಾರ್ಟಿಸಿ ಸೇವೆಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇ.10ರಷ್ಟು ರಿಯಾಯಿತಿ ಪಡೆಯಬಹುದು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಇದೇ ರೀತಿ ರಿಯಾಯಿತಿ ದರದಲ್ಲಿ ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿತ್ತು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಆನ್ ಲೈನ್ ಸೇವೆಗಳು: ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ದಿನ ಪೂರ್ತಿ ಆನ್‌ಲೈನ್ ಲೈವ್ ಸಹಾಯ ಸೇವೆಯನ್ನು ಅಂತರ್ಜಾಲ ಮುಖಾಂತರ ಸಾರ್ವಜನಿಕರಿಗೆ ನೀಡುತ್ತಿದೆ.ಆನ್ ಲೈನ್ ಟಿಕೆಟ್ ಬುಕ್ಕಿಂಗ್, ಪೇಪರ್ ಲೆಸ್ ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತೇವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಪ್ರಸಾದ್ ಹೇಳಿದರು.

ಪ್ರಯಾಣಿಕರು ತಮಗೆ ಬೇಕಾದ ಟಿಕೆಟ್ ಬುಕಿಂಗ್ /ರದ್ದತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಈಗ ಆನ್‌ಲೈನ್ ಮೂಲಕ ಕೇಳಿ ರಿಯಲ್ ಟೈಮ್ ಉತ್ತರ ಪಡೆಯಬಹುದಾಗಿದೆ. ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಕೆಎಸ್ಸಾರ್ಟಿಸಿ ವೆಬ್ ತಾಣ (www.ksrtc.in ) ಆನ್ ಲೈನ್ ಚಾಟ್ ಸೇವೆ ನಿಗಮದ ಅಂತರ್ಜಾಲದಲ್ಲಿ 24X 7 ಕಾಲದಲ್ಲಿ ಜನರಿಗೆ ಸ್ಪಂದಿಸಲು ಅವಕಾಶವಿದೆ.

ಪ್ರಯಾಣಿಕರಿಗೆ ಯಾವುದಾದರೂ ಮಾಹಿತಿ ಬೇಕಿದ್ದಲ್ಲಿ 'ಲೈವ್‌ ಚಾಟ್' ಬಟನ್ ಅಂತರ್ಜಾಲದಲ್ಲಿ ಒತ್ತಿದರೆ, ಕೂಡಲೆ ಗ್ರಾಹಕರ ಬೆಂಬಲಕ್ಕಾಗಿ ಏಜೆಂಟ್‌ರವರು ಬೇಕಾದ ಮಾಹಿತಿಯನ್ನು ಒದಗಿಸುತ್ತಾರೆ ಎಂದು ಕೆಎಸ್ಸಾರ್ಟಿಸಿ ಎಂಡಿ ಮಂಜುನಾಥ್ ಪ್ರಸಾದ್ ವಿವರಿಸಿದರು.

ಈ ಸೇವೆಯಿಂದ ಪ್ರಯಾಣಿಕರು/ಸಾರ್ವಜನಿಕರು ಗ್ರಾಹಕರ ಬೆಂಬಲಕ್ಕಾಗಿ ಏಜೆಂಟ್‌ರೊಂದಿಗೆ ಬಸ್ ಮಾರ್ಗ, ಆನ್ ಲೈನ್ ಬುಕಿಂಗ್, ಬಸ್ ಪ್ರಯಾಣದ ವೇಳಾಪಟ್ಟಿಯನ್ನು, ಅಲ್ಲದೆ ಪ್ರಯಾಣದಲ್ಲಿ ಉಂಟಾದ ಸಮಸ್ಯೆಗಳನ್ನು ಚರ್ಚಿಸಬಹುದು.

English summary
The Karnataka State Road Transport Corporation (KSRTC) has announced ‘Prayanothsava’, a scheme which offers 30 per cent discount for its customers on their fourth trip in KSRTC bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X