ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ ನಿಜಕ್ಕೂ ಮುತ್ಸದ್ದಿ: ಸಿಎಂ ಶೆಟ್ಟರ್

By Srinath
|
Google Oneindia Kannada News

cauvery-row-deve-gowda-padayatre-statesman-cm-shettar
ಬೆಂಗಳೂರು, ಫೆ. 12: ಇತ್ತ, ಮಾಜಿ ಪ್ರಧಾನಿ ದೇವೇಗೌಡರು ಕಾವೇರಿ ಐ ತೀರ್ಪು ಅಧಿಸೂಚನೆ ವಿರೋಧಿಸಿ ಸಾಂಕೇತಿಕವಾಗಿ ಪಾದಯಾತ್ರೆ ನಡೆಸುತ್ತಿದ್ದರೆ ಅತ್ತ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಶೆಟ್ಟರ್ ಅವರು ಗೌಡರನ್ನು ರಾಜಕೀಯ ಮುತ್ಸದ್ದಿ (Statesman) ಎಂದು ಗೌಡರನ್ನು ಹಾಡಿಹೊಗಳಿದ್ದಾರೆ.

'ಎಚ್‌ಡಿ ದೇವೇಗೌಡ ಅವರು ಕಾವೇರಿ ನದಿ ವಿಚಾರದಲ್ಲಿ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ತಮ್ಮ ಅಪಾರ ಅನುಭವವನ್ನು ಆಗಾಗ್ಗೆ ರಾಜ್ಯ ಸರಕಾರಕ್ಕೆ ನೀಡುತ್ತಾ ಬಂದಿದ್ದಾರೆ. ಮೊನ್ನೆಯೂ ಅಷ್ಟೇ ಖುದ್ದಾಗಿ ತಾವೇ ಬಂದು ಉಪಯುಕ್ತ ಸಲಹೆ ನೀಡಿದ್ದಾರೆ. ಅವರೊಬ್ಬ Statesman' ಎಂದು ಸಿಎಂ ಶೆಟ್ಟರ್ ಕೆಳಮನೆಯಲ್ಲಿ ಹೇಳಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್ ಅವರು, ದೇವೇಗೌಡ ಅವರು ಒಬ್ಬ ಅನುಭವಿ ನಾಯಕರು. ಅವರು ಪ್ರಧಾನಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಿನ್ನೆ ತಮ್ಮನ್ನು ಭೇಟಿ ಮಾಡಿದ ಗೌಡರು, ಕಾವೇರಿ ವಿಚಾರವಾಗಿ ಕೆಲವು ಪ್ರಮುಖ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಈ ವಿಚಾರದಲ್ಲಿ ಅವರು ರಾಜಕೀಯ ಮಾಡಿಲ್ಲ. ನೀರಾವರಿ ಹಾಗೂ ರಸ್ತೆ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಬಾಯಿಗೆ ಕಪ್ಪು ಬಟ್ಟೆ: ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ದೇವೇಗೌಡರು ಇಂದು ಬೆಳಗ್ಗೆ ಬನ್ನಪ್ಪ ಪಾರ್ಕ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ 11.30ಕ್ಕೆ ಪಾದಯಾತ್ರೆ ಆರಂಭಿಸಿದರು. ಈ ವೇಳೆ, ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಚಲುವರಾಯಸ್ವಾಮಿ ಸೇರಿದಂತೆ ಅನೇಕರು ಗೌಡರ ಜತೆ ಹೆಜ್ಜೆ ಹಾಕಿದರು.

ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದ ದೇವೇಗೌಡರಿಗೆ ಸಾವಿರಾರು ಮಂದಿ ಸಾಥ್ ನೀಡಿದರು. ಪಾದಯಾತ್ರೆಯಲ್ಲಿ ಭಾವಗಿಸಿರುವ ಮಹಿಳೆಯರು ಖಾಲಿ ಬಿಂದಿಗೆಗಳನ್ನು ತಲೆಯೆ ಮೇಲೆ ಹೊತ್ತು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮೌನವಾಗಿ ಪ್ರತಿಭಟಿಸಿದರು.

English summary
Former Prime Minister, JDS leader HD Deve Gowda, as planned began padayatre in Bangalore today (Feb 12) at 11.30 AM on Cauvery row. In the mean while, CM Jagadish Shettar described in the Assembly that HD Deve Gowda indeed a true statesman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X