ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿನಿ ಹಾಲಿನ ದರ 1 ರೂ. ಇಳಿಕೆ ?

|
Google Oneindia Kannada News

Nandini Milk
ಬೆಂಗಳೂರು, ಫೆ.11: ಹಾಲಿನ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಂತಸ ತರುವ ಸುದ್ದಿಯೊಂದು ಹೊರಬಿದ್ದಿದೆ. ಕೆಎಂಎಎಫ್ ನಂದಿನಿ ಹಾಲಿನ ದರವನ್ನು 1 ರೂ ಇಳಿಕೆ ಮಾಡಿದೆ. ಫೆ.13 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ.

ಹಾಲಿನ ದರವನ್ನು 4 ರೂ. ಏರಿಕೆ ಮಾಡಿರುವುದರಿಂದ ಗ್ರಾಹಕರು ಕೆಎಂಎಫ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸೋಮವಾರ ನಡೆದ ಕೆಎಂಎಫ್ ಆಡಳಿತ ಮಂಡಳಿಯ ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ವಿಸೃತವಾದ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.

ಗ್ರಾಹಕರ ಹಿತವನ್ನು ಪರಿಗಣಿಸಿ ಹಾಲಿನ ದರವನ್ನು 1 ರೂ. ಇಳಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಪರಿಷ್ಕೃತ ದರ ಫೆ.13ರಿಂದ ಜಾರಿಗೆ ಬರಲಿದ್ದು, ಇದರಿಂದಾಗಿ ಪ್ರತಿ ಲೀಟರ್ ಹಾಲಿನ ದರ 1 ರೂ.ಇಳಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಸಭೆಯ ಬಳಿಕ ತಿಳಿಸಿದ್ದಾರೆ.

ಚುನಾವಣಾ ತಂತ್ರವೇ : ಹಾಲಿನ ದರವನ್ನು ಏಕಾಏಕಿ 4 ರೂ. ಏರಿಸಿ ನಂತರ 1 ರೂ. ಇಳಿಕೆ ಮಾಡುವ ಮೂಲಕ ಗ್ರಾಹಕರ ಅನುಕಂಪ ಗಿಟ್ಟಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆಯೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಫೆ.8 ರಂದು ರಾತ್ರಿ ಹಾಲಿನ ದರ ಏರಿಕೆಗೆ ಸಮ್ಮತಿ ಸೂಚಿಸಿದ್ದರು.

ಸೋಮವಾರ ಗ್ರಾಹಕರ ವಿರೋಧ ಎಂದು ಹಾಲಿನ ದರವನ್ನು ಒಂದು ರೂ. ಇಳಿಕೆ ಮಾಡಲಾಗಿದೆ. ಇಂತಹ ತಂತ್ರದ ಮೂಲಕ ಕೆಎಂಎಫ್ ಮತ್ತು ಸರ್ಕಾರ ಹಾಲಿನ ದರವು ಹೆಚ್ಚಾಗಬೇಕು. ಜನರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಬಾರದು ಎಂಬ ನೀತಿ ಅನುಸರಿಸಲು ಹೊರಟಿದೆಯೇ ಎಂಬ ಅನುಮಾನ ಕಾಡದೆ ಇರದು.

English summary
KMF president Somashekar Reddy announced that Nandini milk rate in all over the Karnataka is reduced Rs 1. The revised rate will come into effect from Feb 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X