ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಾಯ್ರೆ! ಬ್ರಿಟನ್ ಸಂಸತ್ತಿನಲ್ಲೂ ಅಶ್ಲೀಲಚಿತ್ರ ವೀಕ್ಷಣೆ

By Srinath
|
Google Oneindia Kannada News

adultery-website-gets-more-clicks-fm-british-parliament
ಲಂಡನ್, ಫೆ.11‌: ಹೌದು ಬ್ರಿಟನ್ ಸಂಸತ್ತಿನಲ್ಲೂ ಅಶ್ಲೀಲ ಚಿತ್ರಗಳನ್ನು ಯಾವುದೇ ಎಗ್ಗುಸಿಗ್ಗು ಇಲ್ಲದೆ ಧಾರಾಳವಾಗಿ ವೀಕ್ಷಿಸುತ್ತಾರೆ. ಅದೂ ಬ್ರಿಟನ್ನಿನ ಸಂಸದರು ಮತ್ತು ಅವರ ಸಿಬ್ಬಂದಿ ತಾವು ಬಳಸುವ ಕಂಪ್ಯೂಟರಿನಲ್ಲಿ ಈ ಸಾಧನೆ ಮಾಡಿದ್ದಾರೆ.

'ನಾವು ವಿಧಾನಸೌಧದಲ್ಲಿ ಮಸುಕುಮಸುಕು ಮೊಬೈಲಿನಲ್ಲಿ ನೀಲಿ ಚಿತ್ರ ನೋಡಿದ್ದಕ್ಕೆ ಆವತ್ತು ಅಷ್ಟೆಲ್ಲಾ ಗುಲ್ಲೆಬ್ಬಿಸಿದಿರಿ. ಈ ಹಿಂದೆ ನಮ್ಮನ್ನಾಳಿದ ಬ್ರಿಟನ್ನಿನ ನಮ್ಮ ಸೋದರರು ರಾಜಾರೋಶವಾಗಿ ಇಂಟರ್ನೆಟ್ಟಿನಲ್ಲೇ ನೋಡ್ತಾರಂತೆ. ಅದಕ್ಕೇನು ಹೇಳುತ್ತೀರಿ?' ಎಂದು ನಮ್ಮ ನೀಲಿ ಶಾಸಕರು (ಬ್ಲೂ ಬಾಯ್ಸ್ ಅನ್ನುವ ಹಾಗೆ) ಈಗ ಕೇಳಲೂಬಹುದು.

ಯಸ್, ಅಶ್ಲೀಲ ಸರಕಿನ ವೆಬ್ ಸೈಟ್ ಒಂದನ್ನು ಬ್ರಿಟನ್ ಸಂಸದರು ಮತ್ತು ಅವರ ಸಿಬ್ಬಂದಿ 52,375 ಬಾರಿ ವೀಕ್ಷಿಸಿ, ಧನ್ಯರಾಗಿದ್ದಾರೆ. Out Of Town Affairs ಎಂಬುದೇ ಈ ಸಂಸದರನ್ನು ಆಕರ್ಷಿಸಿ, ಫಜೀತಿಗೀಡುಮಾಡಿರುವ ವೆಬ್ ಸೈಟ್.

ಸಾಮಾನ್ಯವಾಗಿ ಅಂರ್ಜಾಲದಲ್ಲಿ ಇಂತಹ ಅಶ್ಲೀಲ ಸರಕನ್ನು ಬಿತ್ತರಿಸುವ ತಾಣಗಳನ್ನು ಸೆನ್ಸಾರ್ ಮಾಡಲಾಗಿರುತ್ತದೆ. ಆದರೂ ಇದು ಅದುಹೇಗೆ ನುಸುಳಿಕೊಂಡು ಸಂಸತ್ತನ್ನೇ ಪ್ರವೇಶಿಸೊತೋ ಎಂಬುದು ತಿಳಿಯದಾಗಿದೆ.

ಸಂಸದರು ಮತ್ತು ಅವರ ಸಿಬ್ಬಂದಿ ಒಟ್ಟು 7 ತಿಂಗಳಲ್ಲಿ 52,375 ಬಾರಿ ಈ ವೆಬ್ ಸೈಟನ್ನು ಕ್ಕಿಕ್ಕಿಸಿದ್ದಾರೆ. ಒಂದು ನಿರ್ದಿಷ್ಟ ದಿನದಂದು (ಡಿಸೆಂಬರಿನಲ್ಲಿ) 289 ಬಾರಿ ಕ್ಕಿಕ್ಕಿಸಲಾಗಿದೆ. ಬೇರೆ ಇಲಾಖೆಗಳ ಅಧಿಕೃತ ವೆಬ್ ಸೈಟನ್ನು ನೋಡುವುದಕ್ಕಿಂತ ಹೆಚ್ಚಾಗಿ ಈ ವೆಬ್ ಸೈಟನ್ನು ವೀಕ್ಷಿಸಿದ್ದಾರೆ.

'ಲೈಂಗಿಕ ಸಂಬಂಧಗಳನ್ನು ಹೊಂದಲು ಇಚ್ಛಿಸುವವರು ಮತ್ತು ಬೆಡ್ ರೂಮ್ ವಿಷಯಗಳನ್ನು ಹೆಚ್ಚಿಗೆ ತಿಳಿದುಕೊಳ್ಳಳು ಹಾತೊರೆಯುವವರಿಗಾಗಿ ನಮ್ಮ ವೆಬ್ ಸೈಟ್ ಸದವಕಾಶ ಕಲ್ಪಿಸಲಾಗುತ್ತದೆ' ಎಂಬುದು Out Of Town Affairs ಧ್ಯೇಯವಾಕ್ಯ.

ಅಂದಹಾಗೆ Daily Mail ಪತ್ರಿಕೆಯು ನಮ್ಮಲ್ಲಿರುವ RTI ಕಾಯಿದೆಯಂತೆ Freedom of Information ಮೂಲಕ ಈ ಅಶ್ಲೀಲ ಮಾಹಿತಿಯನ್ನು ಹೆಕ್ಕಿದೆ. ತಮ್ಮ ವೆಬ್ ಸೈಟನ್ನು ಸಂಸದರು ಮತ್ತು ಅವರ ಸಿಬ್ಬಂದಿ ನೋಡುತ್ತಿದ್ದಾರೆ ಎಂಬುದನ್ನು ತಿಳಿದು Out Of Town Affairs ಮಾಲೀಕರು 'ಧನ್ಯರಾದೆವು' ಎಂದು ಉದ್ಘರಿಸಿದ್ದಾರೆ.

English summary
Adultery website gets 52,000 clicks from British parliament
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X