ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ಜಲಿಗೆ ಗಲ್ಲು: ಉಮರ್ ಅಬ್ದುಲಾ ಖಂಡಿಸಿದ್ದು ನ್ಯಾಯವೇ?

|
Google Oneindia Kannada News

 Government and judiciary must explain Afzal Guru's hanging, Omar Abdullah
ಶ್ರೀನಗರ, ಫೆ 11 : ಉಂಡ ಮನೆಗೆ ಎರಡು ಬಗೆದಿದ್ದ ಪಾತಕಿ ಅಫ್ಜಲಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ದೇಶದೆಲ್ಲಡೆ ಸಂತಸ ವ್ಯಕ್ತವಾಗುತ್ತಿದ್ದರೆ, ಸಂಸತ್ತಿನ ಮೇಲಿನ ದಾಳಿಯ ರೂವಾರಿ ಆಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ನೀಡಿದ್ದಕ್ಕೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್ತ ಪಡಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಆಫ್ಜಲ್ ಗುರುವನ್ನು ನೇಣಿಗೇರಿಸಿರುವುದರಿಂದ ನನಗೆ ವೈಯಕ್ತಿಕವಾಗಿ ತೀವ್ರ ನೋವಾಗಿದೆ. ಆಫ್ಜಲ್ ಗುರುವನ್ನು ನೇಣಿಗೇರಿಸುವ ಮೊದಲು ಅವನ ಮನೆಯವರನ್ನು ಭೇಟಿ ಮಾಡಲು ಅವಕಾಶ ನೀಡಿ ಅಂತ್ಯಸಂಸ್ಕಾರ ನಡೆಸ ಬೇಕಾಗಿತ್ತು. ಕೇಂದ್ರ ಸರಕಾರದ ಈ ನಿರ್ಧಾರ ಬಹಳಷ್ಟು ಪ್ರಶ್ನೆಗೆ ಎಡೆ ಮಾಡಿಕೊಡುತ್ತದೆ ಎಂದು ಉಮರ್ ಅಬ್ದುಲ್ಲಾ ಬೇಸರ ವ್ಯಕ್ತ ಪಡಿಸಿದ್ದಾರೆ.

ಅಫ್ಜಲ್ ಗುರು ಹೊಸ ತಲೆಮಾರಿಗೆ ಸೇರಿದವ, ಈತನನ್ನು ನೇಣಿಗೇರಿಸಿದ ಘಟನೆ ದೀರ್ಘಾವಧಿಯಲ್ಲಿ ತುಂಬಾ ಪರಿಣಾಮ ಬೀರಲಿದೆ. ಜಮ್ಮು ಕಾಶ್ಮೀರದಲ್ಲಿ ಹೊಸ ತಲೆಮಾರಿನ ಯುವಕರಿಗೆ ಭಾರತದಲ್ಲಿ ನಾವು ಬಲಿಪಶುವಾಗುತ್ತಿದ್ದೇವೆ. ಇಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ ಎನ್ನುವ ಹತಾಶೆ ಭಾವನೆಯಲ್ಲಿದ್ದಾರೆ.

ಭಾನುವಾರ (ಫೆ 10) ಖಾಸಾಗಿ ಆಂಗ್ಲ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಉಮರ್, ಮೊದಲೇ ಈ ದೇಶದಲ್ಲಿ ನಮಗೆ ಅನ್ಯಾಯವಾಗುತ್ತಿದೆ ಎಂದು ಜಮ್ಮು ಕಾಶ್ಮೀರದ ಜನತೆ ಭಾವಿಸಿದ್ದಾರೆ. ಅಫ್ಜಲ್ ನೇಣಿಗೆ ಹಾಕಿದ ಘಟನೆಯ ನಂತರ ರಾಜ್ಯದ ಭದ್ರತೆಯ ಬಗ್ಗೆ ನನಗೆ ತೀವ್ರ ಕಳವಳ ಉಂಟಾಗಿದೆ ಎಂದಿದ್ದಾರೆ.

ಅಫ್ಜಲ್ ಗುರುವಿಗೆ ನ್ಯಾಯಸಮ್ಮತ ವಿಚಾರಣೆ ನಡೆಯಲಿಲ್ಲ ಎನ್ನುವುದು ಇಲ್ಲಿನ ಜನತೆಯ ಒಟ್ಟಾರೆ ಅಭಿಪ್ರಾಯ. ಇಲ್ಲಿನ ಜನತೆಯ ಗೊಂದಲವನ್ನು ನಿವಾರಿಸುವುದು ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಮತ್ತು ಕೇಂದ್ರ ಸರಕಾರದ್ದೂ ಕೂಡಾ.

ಅಫ್ಜಲ್ ಗುರು ನೇಣಿಗೇರಿಸುವ ವಿಷಯವನ್ನು ಕೇವಲ 12 ತಾಸುಗಳ ಮುಂಚೆ ನನಗೆ ಗೃಹ ಸಚಿವಾಲಯ ತಿಳಿಸಿತು. ಆತನ ಮನೆಯವರಿಗೂ ಸರಿಯಾದ ಸಮಯಕ್ಕೆ ತಿಳಿಸದಿರುವುದು ಖಂಡಿತಾ ದುರದೃಷ್ಟಕರ ಎಂದು ಉಮರ್ ಅಬ್ದುಲ್ಲಾ ವಿಷಾದಿಸಿದ್ದಾರೆ.

ತಾನು ಮರಣ ದಂಡನೆಯ ವಿರೋಧಿ, ನನಗೆ ರಕ್ತದಾಹವಿಲ್ಲ. ಆದರೆ ಸಂವಿಧಾನದಲ್ಲಿ ಮರಣ ದಂಡನೆಗೆ ಅವಕಾಶವಿರುವ ತನಕ ಅದನ್ನು ಆಯ್ದ ವ್ಯಕ್ತಿಗಳ ಮೇಲೆ ಪ್ರಯೋಗಿಸುವುದಕ್ಕೆ ನನ್ನ ತೀವ್ರ ಪ್ರತಿಭಟನೆ ಇದೆ ಎಂದು ಉಮರ್ ಅಬ್ದುಲ್ಲಾ ಸಂದರ್ಶನದಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕಿ ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೂಡಾ ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದನ್ನು ಖಂಡಿಸಿದ್ದಾರೆ.

English summary
The political leadership and judiciary should make clear that Afzal Guru's hanging was not done for political reasons, Jammu and Kashmir Chief Minister Omar Abdullah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X