ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿಯರಿಗೆ ಜೀನ್ಸ್, ಟಿ-ಶರ್ಟ್, ಮೊಬೈಲ್ ಬ್ಯಾನ್

By Srinath
|
Google Oneindia Kannada News

Bihar village bans jeans T-shirt provocative clothes mobiles for girls
ಪಟ್ನಾ, ಫೆ.11: ಹುಡುಗಿಯರೇ ಜೋಕೆ! ಇನ್ಮುಂದೆ ನೀವು ಜೀನ್ಸ್, ಟಿ-ಶರ್ಟ್, ಪ್ರಚೋದನಕಾರಿ ಬಟ್ಟೆ ಧರಿಸುವುದು, ಮೊಬೈಲ್ ಫೋನನ್ನು ಬಳಸುವಂತಿಲ್ಲ. ಇದನ್ನು ಮೀರಿ ನಡೆದರೆ ಭಾರಿ ದಂಡ ತೆರುತ್ತೀರಿ ಹುಷಾರು ಎಂದು ಸ್ವಘೋಷಿತ ಸಮಾಜ ಸುಧಾರಕರು ಘೋಷಿಸಿದ್ದಾರೆ.

ಯಾಕಪ್ಪಾ ಇಂತಹ ಅತಿರೇಕದ ಕ್ರಮ ಅಂದರೆ ಸಿವಾನ್ ಜಿಲ್ಲೆಯ ಮಾಖನ್ ಪುರ ಗ್ರಾಮದಲ್ಲಿ ಮೂವರು ಬಾಲಕಿಯರು ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. ಹಾಗಾಗಿ ಫರ್ಮಾನು ಹೊರಡಿಸಿದ್ದಾರೆ. ನಿನ್ನೆಯಿಂದಲೇ ಈ ಆಜ್ಞೆಯನ್ನು ಪಾಲಿಸಬೇಕು ಎಂದು ಆದೇಶಿಸಲಾಗಿದೆ. ಒಂದು ವಾರದಿಂದ ಊರು ಬಿಟ್ಟ ಮೂವರು ಬಾಲಕಿಯರು (ಅದರಲ್ಲಿ ಇಬ್ಬರು ಸೋದರ ಸಂಬಂಧಿಗಳು) ಇನ್ನೂ ಪತ್ತೆಯಾಗಿಲ್ಲ.

ಆಕಸ್ಮಾತ್ ಯಾವುದೇ ಹುಡುಗಿ ಈ ಆದೇಶವನ್ನು ಧಿಕ್ಕರಿಸಿರುವುದು ಕಣ್ಣಿಗೆ ಬಿದ್ದಿದ್ದೇ ಆದರೆ 10,000 ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ಸಮಾಜ ಸುಧಾರಕರು ಕಟ್ಟಾಜ್ಞೆ ಹೊರಡಿಸಿದ್ದಾರೆ. ಈ ಆಜ್ಷೆಯನ್ನು ಪರಿಪಾಲಿಸಲು 11 ಸದಸ್ಯರ ತಂಡವೂ ರಚನೆಯಾಗಿದೆ.

'ಈ ಮೊಬೈಲ್ ಫೋನುಗಳು, ಜೀನ್ಸು, ಪ್ರಚೋದನಕಾರಿ ಬಟ್ಟೆ ಧರಿಸುವುದು, ಟಿ ಶರ್ಟ್ ಇವೆಯಲ್ಲ... ಇವೆಲ್ಲ ನಮ್ಮ ಸಮಾಜಕ್ಕೆ ದೊಡ್ಡ ಪಿಡುಗಾಗಿ ಕಾಡಲಾರಂಭಿಸಿವೆ. ಪ್ರೀತಿ-ಪ್ರೇಮ-ಕಾಮದ ಪ್ರಕರಣಗಳು ಹೆಚ್ಚಾಗಿ, ಹುಡುಗಿಯರು ಓಡಿಹೋಗುವುದಕ್ಕೆ ಇವೇ ಕಾರಣವಾಗಿವೆ' ಎಂದು ಗ್ರಾಮಸ್ಥ ಸತ್ಯೇಂದ್ರ ಶರ್ಮಾ ಇಡೀ ಪ್ರಕರಣಕ್ಕೆ ಒಗ್ಗರಣೆ ಹಾಕಿದ್ದಾರೆ.

ಬಿಹಾರದಲ್ಲಿ ಕಳೆದ 3 ತಿಂಗಳಲ್ಲಿ 6 ಗ್ರಾಮ ಪಂಚಾಯಿತಿಗಳು ಇಂತಹ ಆಜ್ಞೆಗಳನ್ನು ಜಾರಿಗೊಳಿಸಿವೆ.

English summary
Bihar village bans jeans, T-shirt, provocative clothes mobiles for girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X