ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿವಿಆರ್ ನಿಂದ ಸದ್ಯದಲ್ಲೇ 75 ಹೊಸ ಸ್ಕ್ರೀನ್

By Mahesh
|
Google Oneindia Kannada News

PVR to invest Rs 150 cr to open 75 new screens
ಬೆಂಗಳೂರು, ಫೆ.11: ಮಲ್ಟಿಪ್ಲೆಕ್ಸ್ ಜಾಲ ಸಂಸ್ಥೆ ಪಿವಿಆರ್ ಮುಂಬರುವ ವರ್ಷದಲ್ಲಿ ಸುಮಾರು 150 ಕೋಟಿ ರು.ಗೂ ಅಧಿಕ ಬಂಡವಾಳ ಹೂಡಿಕೆ ಮಾಡಲಿದ್ದು, 75 ಹೊಸ ಸ್ಕ್ರೀನ್ ಗಳು ಸೇರ್ಪಡೆಗೊಳ್ಳಲಿದೆ.

ಮುಂಬರುವ 9 ರಿಂದ 12 ತಿಂಗಳುಗಳಲ್ಲಿ ನಾವು 75ಕ್ಕೂ ಅಧಿಕ ಸ್ಕ್ರೀನ್ ಗಳನ್ನು ಸೇರಿಸಲಿದ್ದೇವೆ. 150 ಕೋಟಿ ರು ಬಂಡವಾಳ ಹೂಡಿಕೆ ಮಾಡುವುದರ ಜೊತೆಗೆ ದಕ್ಷಿಣ ಭಾರತದಲ್ಲಿ ಇನ್ನಷ್ಟು ಸಕ್ರಿಯವಾಗಿ ವ್ಯವಹಾರದಲ್ಲಿ ತೊಡಗಿಕೊಳ್ಳಲಿದ್ದೇವೆ ಎಂದು ಪಿವಿಆರ್ ಸಂಸ್ಥೆ ಮುಖ್ಯ ಆರ್ಥಿಕ ವ್ಯವಹಾರ ಅಧಿಕಾರಿ ನಿತಿನ್ ಸೂದ್ ಅವರು ಹೇಳಿದ್ದಾರೆ.

ಸೋಮವಾರ(ಫೆ.11) ಪಿವಿಆರ್ ಷೇರುಗಳು ಉತ್ತಮ ನಿರ್ವಹಣೆ ತೋರಿದೆ.ಬಿಎಸ್ ಇನಲ್ಲಿ ಮಧ್ಯಾಹ್ನ 13.15ರ ಸುಮಾರಿಗೆ 258.55 ರು ನಂತೆ ಶೇ 1.67 ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 257.35 ರು ನಂತೆ ಶೇ 0.80 ರಷ್ಟು ಏರಿದೆ.

ದೆಹಲಿ ಮೂಲದ ಪಿವಿಆರ್ ಸಂಸ್ಥೆಗೆ ಇತ್ತೀಚೆಗೆ ಎದುರಾಳಿ ಸಂಸ್ಥೆ ಸಿನಿಮ್ಯಾಕ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ದೇಶದಲ್ಲಿ ಪಿವಿಆರ್ ಸುಮಾರು 213 ಸ್ಕ್ರೀನ್ ಗಳನ್ನು ಹೊಂದಿತ್ತು. ಈಗ ಸಿನಿಮ್ಯಾಕ್ಸ್ ಗೆ ಸೇರಿದ 138 ಸ್ಕ್ರೀನ್ ಗಳು ಪಿವಿಆರ್ ಗೆ ಸೇರ್ಪಡೆಯಾಗಲಿದೆ. ಒಟ್ಟಾರೆ 351ಕ್ಕೂ ಅಧಿಕ ಸ್ಕ್ರೀನ್ ಗಳನ್ನು ಹೊಂದಿದ್ದು ಇನ್ನೂ 75 ಸ್ಕ್ರೀನ್ ಗಳು ಸೇರಲಿದೆ ಎಂದು ನಿತಿನ್ ಹೇಳಿದರು.

ನಾವು ಇನ್ನೂ ಮೂರನೇ ವರ್ಗದ ನಗರಗಳನ್ನು ಮುಟ್ಟಬೇಕಿದೆ. ಭಾರತದಲ್ಲಿ Tier 1 ಹಾಗೂ Tier II ನಗರಗಳನ್ನು ಮುಟ್ಟಿದ್ದೇವೆ. ಕೊಚ್ಚಿ ಹಾಗೂ ಚಂದೀಗಢ ಮುಂತಾದ ನಗರಗಳನ್ನು ಈಗ ನಮ್ಮ ಪಟ್ಟಿಯಲ್ಲಿದೆ ಎಂದು ನಿತಿನ್ ತಿಳಿಸಿದರು.

ಕಳೆದ ವರ್ಷ ಜನವರಿಯಲ್ಲಿ ಸಿನಿಮ್ಯಾಕ್ಸ್ ಇಂಡಿಯಾದ ಶೇ 69.27ರಷ್ಟು ಪಾಲನ್ನು ಪಡೆಯುವ ಮೂಲಕ ದೊಡ್ಡ ಒಪ್ಪಂದಕ್ಕೆ ಪಿವಿಆರ್ ಸಹಿಹಾಕಿತ್ತು.ಜೊತೆಗೆ ಸಿನಿಮ್ಯಾಕ್ಸ್ ಇಂಡಿಯಾದ ಷೇರುದಾರರಿಗೆ ಶೇ 26 ರಷ್ಟು ಷೇರುಗಳ ಓಪನ್ ಆಫರ್ ನೀಡುವ ಮೂಲಕ ಸಿನಿಮ್ಯಾಕ್ಸ್ ಷೇರುಗಳು ಸೆಬಿ ಪಾಲಾಗುವುದನ್ನು ಪಿವಿಆರ್ ತಪ್ಪಿಸಿತ್ತು. ಸಿನಿಮ್ಯಾಕ್ಸ್ ಈಗ ಪಿವಿಆರ್ ನ ಸಬ್ಸಿಡಿ ಸಂಸ್ಥೆಯಾಗಿದೆ.

English summary
Multiplex chain operator PVR plans to invest Rs 150 crore to open another 75 screens over the next one year in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X