ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಹಾಲಿನ ದರ ಏರಿಸಿಯೇ ಬಿಟ್ಟರು

By Srinath
|
Google Oneindia Kannada News

cm-shettar-agrees-to-rise-kmf-milk-rate-by-r-4
ಬೆಂಗಳೂರು, ಫೆ.9: ರಾಜಕೀಯ ತೊಳಲಾಟದಲ್ಲಿ ಸಿಕ್ಕಿದ್ದ ಕೆಎಂಎಫ್ ಕೊನೆಗೂ ಹಾಲಿನ ದರವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಇದರಲ್ಲಿ ಹೈರಾಣಗೊಂಡಿರುವುದು ಮಾತ್ರ ಗ್ರಾಹಕ.

ಡೈರಿ ಬಳಿ ಹಾಲು ಖರೀದಿಸಲು ಹೋದ ಗ್ರಾಹಕನಿಗೆ ಬೆಳ್ಳಂಬೆಳಗ್ಗೆಯೇ ದರಯೇರಿಕೆ ಬಿಸಿ ತಾಕಿದೆ. ಒಂದು ವರ್ಷದ ಹಿಂದೆ (ಕಳೆದ ವರ್ಷ ಜ.8) ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಳವಾಗಿತ್ತು.

ಸರಕಾರಿ ಹಾಲಿನ ದರ ಕೇರಳದಲ್ಲಿ 33 ರೂ, ಗೋವಾದಲ್ಲಿ 31, ಮಹಾರಾಷ್ಟ್ರದಲ್ಲಿ 29, ಮುಂಬೈನಲ್ಲಿ 29, ಗುಜರಾತಿನಲ್ಲಿ 30, ತಮಿಳುನಾಡು ಮತ್ತು ಆಂಧ್ರದಲ್ಲಿ 27 ರೂ. ಇದೆ.

ಚುನಾವಣೆ ಸಂದರ್ಭದಲ್ಲಿ ಹಾಲು ಉತ್ಪಾದಕನಿಗೆ ಆರ್ಥಿಕವಾಗಿ ನೆರವಾಗುವ ದೂರದೃಷ್ಟಿಯಲ್ಲಿ ರಾಜಕೀಯ ನಡೆ ಹಾಕಿದ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಹಾಲು ದರ ಹೆಚ್ಚಳಕ್ಕೆ ಅನುಮೋದನೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತ್ತ ರೈತನ ಮುಖದಲ್ಲಿ ಸ್ವಲ್ಪ ನಗೆ ಚಿಮ್ಮಿದ್ದರೆ ಇತ್ತ ಗ್ರಾಹಕ ಹತಾಶೆಯ ನೋಟ ಚೆಲ್ಲಿದ್ದಾನೆ. ಈಗಾಗಲೇ ಬೆಲೆಯೇರಿಕೆಯಿಂದ ಅಡಕತ್ತರಿಯಲ್ಲಿ ಸಿಕ್ಕಿರುವ ರಾಜ್ಯದ ಜನತೆಗೆ ಇದೀಗ ಹಾಲಿನ ದರವೂ ಹಾಲಾಹಲವಾಗಿದೆ. ಶನಿವಾರ ಮುಂಜಾನೆಯಿಂದಲೇ ಅನ್ವಯವಾಗುವಂತೆ 'ನಂದಿನಿ' ಹಾಲಿನ ದರವನ್ನು ಲೀಟರ್‌ಗೆ 4 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಕೆಎಂಎಫ್ ಆಡಳಿತ ಮಂಡಳಿ ಅಧ್ಯಕ್ಷ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಿನ್ನೆ ಬೆಳಗ್ಗೆ ನಡೆದ ನಿರ್ಣಾಯಕ ಸಭೆಯಲ್ಲಿ ನಂದಿನಿ ಹಾಲಿನ ದರ ಪರಿಷ್ಕರಿಸುವ ಬಗ್ಗೆ ಬಿಗಿ ನಿರ್ಧಾರ ತೆಗೆದುಕೊಂಡಾಗಿತ್ತು. ಪ್ರತಿ ಲೀಟರ್‌ ಹಾಲಿಗೆ 4 ರೂ. ಹಾಗೂ ಮೊಸರು (ಕೆಜಿ ಗೆ) ಬೆಲೆಯನ್ನು 4 ರೂ. ಹೆಚ್ಚಿಸುವ ಪೂರ್ವ ನಿರ್ಧಾರಕ್ಕೆ ಸಭೆ ಗಟ್ಟಿಯಾಗಿ ಅಂಟಿಕೊಂಡಿತ್ತು. ಮತ್ತು ಕೆಎಂಎಫ್ ಆಡಳಿತ ಮಂಡಳಿಯು ಸಂಜೆ ವೇಳೆಗೆ ತನ್ನ ಈ ತೀರ್ಮಾನಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯೂ ಆಯಿತು.

ಸರ್ಕಾರವು ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಶನಿವಾರದಿಂದ ಜಾರಿಗೆ ಬರುವಂತೆ ನಂದಿನಿ ಹಾಲಿನ ದರದ ಮೇಲೆ ತಲಾ 4 ರೂ. ಏರಿಕೆಯಾಗಿಬಿಟ್ಟಿದೆ.

English summary
Karnataka CM Jagadish Shettar agrees to rise KMF Milk rate by Rs 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X