ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯ ತಡವಾಗಿಯಾದರೂ ಗಲ್ಲಿಗೇರಿಸಿದರು: ಮೋದಿ

By Srinath
|
Google Oneindia Kannada News

afzal-guru-hanged-better-late-than-never-tweets-modi
ನವದೆಹಲಿ, ಫೆ.9: ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುನನ್ನು ಸಹ ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಿರುವುದರ ಬಗ್ಗೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕಸಬ್ ನನ್ನು ಗಲ್ಲಿಗೇರಿಸಿದಾಗ ಸಂತಸಪಟ್ಟಷ್ಟೇ ಜನ ಈಗಲೂ ಸಮಾಧಾನದ ನಿಟ್ಟುಸಿರುಬಿಡುತ್ತಾ, ಸಂಭ್ರಮಿಸುತ್ತಿದ್ದಾರೆ.

ಇನ್ನು ಸಂಸತ್ ಮೇಲೆ ದಾಳಿ ನಡೆಸಿದ್ದು ಇದೇ ಅಫ್ಜಲ್ ಗುರು ಎಂದು ಕೋರ್ಟಿನಲ್ಲಿ ಸಾಬೀತಾಗುತ್ತಿದ್ದಂತೆ ಯಾವಾಗ ಅವನಿಗೆ ಗಲ್ಲು ಎಂದು ಕೇಳುತ್ತಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದು ಅಫ್ಜಜಲಿಗೆ ಮರಣದಂಡನೆ ವಿಧಿಸಿರುವುದನ್ನು ಸ್ವಾಗತಿಸಿದ್ದಾರೆ.

'ವಿಳಂಬವೇ ಆದರೂ ಕೊನೆಗೂ ಗಲ್ಲಿಗೇರಿಸಿದರಲ್ಲಾ ಎಂಬ ಸಮಾಧಾನವಿದೆ' ಎಂದು - Der aaye durast aaye (Better late than never) - ಈಗ್ಗೆ ಕೆಲವೇ ಕ್ಷಣಗಳ ಹಿಂದೆ ಮೋದಿ ಟ್ವೀಟ್ ಮಾಡಿದ್ದಾರೆ. ಬಹುತೇಕ ಮಂದಿಯ ಮನದಾಳದ ಮಾತೂ ಇದೇ ಆಗಿದೆ.

ತಿಹಾರ್ ಜೈಲಿನಲ್ಲೇ ಅಂತ್ಯಸಂಸ್ಕಾರ: ಗಲ್ಲಿಗೆ ಕೊರಳೊಡ್ಡಿದ ಅಫ್ಜಲ್ ಗುರುನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. ತಿಹಾರಿ ಜೈಲಿನ ಆವರಣದಲ್ಲೇ ಧಪನ್ ಮಾಡಲು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ, ಅಫ್ಜಲ್ ಗುರುನ ಸೋದರಿಯರು ಅಂತ್ಯ ಸಂಸ್ಕಾರ ನಾವೇ ಮಾಡುತ್ತೇವೆ. ಶವವನ್ನು ನಮಗೆ ಒಪ್ಪಿಸಿ ಎಂದಿದ್ದಾರೆ.

ಆದರೆ ಭದ್ರತೆಯ ಕಾರಣ ಗಲ್ಲಿಗೇರಿಸಿದ ವ್ಯಕ್ತಿಯ ಶವ ಸಂಸ್ಕಾರವನ್ನು ಜೈಲಿನಲ್ಲೇ ಮಾಡುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

2001ರಲ್ಲಿ ದಾಳಿ ನಡೆಸಿದ್ದ ಎಲ್ಲ 5 ಉಗ್ರರನ್ನು ಪ್ರತಿದಾಳಿಯಲ್ಲಿ ಸಾಯಿಸಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಅಫ್ಜಲ್ ಗುರುನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

English summary
Indian Parliament attacker Afzal Guru hanged at 8 am on Feb 9 at Tihar jail. Better late than never, tweets Gujarat Chief Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X