ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2013-14 ಮುಖ್ಯಾಂಶಗಳು

By Mahesh
|
Google Oneindia Kannada News

Jagadish shettar
ಬೆಂಗಳೂರು, ಫೆ.8: ರಾಜ್ಯದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅವರು ಪ್ರಪ್ರಥಮ ಬಾರಿಗೆ ಕರ್ನಾಟಕ ಬಜೆಟ್ ಅನ್ನು ಶುಕ್ರವಾರ (ಫೆ.8) ಮಂಡಿಸಿದ್ದಾರೆ.

ಬಿಜೆಪಿ ಸರ್ಕಾರದ 5ನೇ ಹಾಗೂ ಲಕ್ಷ ಕೋಟಿ ಮೀರಿದ ಎರಡನೇ ಬಜೆಟ್ ಇದಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಹಾದಿಯಲ್ಲೇ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಹೈನುಗಾರಿಕೆಗೆ ಆದ್ಯತೆ ನೀಡಲಾಗಿದೆ.

6 ಬಾರಿ ಬಜೆಟ್ ಮಂಡಿಸಿದ ಸಾಧನೆ ಹೊಂದಿರುವ ಯಡಿಯೂರಪ್ಪ ಅವರು ಜಾರಿಗೆ ಬಂದ ಕೃಷಿ ಬಜೆಟ್ ಅನ್ನು ಜಗದೀಶ್ ಶೆಟ್ಟರ್ ಅವರು ಮುಂದುವರೆಸಿಕೊಂಡು ಬಂದಿದ್ದಾರೆ.ಬಿಜೆಪಿ ಸರ್ಕಾರದ ಮೂರನೇ ಕೃಷಿ ಬಜೆಟ್ ಇದಾಗಿದೆ.

ಡಿವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ ಸಾಲುಗಳನ್ನು ವಾಚಿಸುವ ಮೂಲಕ ಜನ ಸಾಮಾನ್ಯರ ಬಜೆಟ್ ಮಂಡಿಸಿದ ಶೆಟ್ಟರ್ ಅವರು ಬಜೆಟ್ ಮಂಡನೆ ಸಮಯದಲ್ಲಿ ಕುವೆಂಪು ಅವರ ಗೀತೆಯ ಸಾಲುಗಳನ್ನು ಸ್ಮರಿಸಿದ್ದು ವಿಶೇಷ. ಅಂದ ಹಾಗೆ, ಸುಮಾರು 3.45 ತಾಸಿನ ಸುದೀರ್ಘ ಅವಧಿಯ ಜಗದೀಶ್ ಶೆಟ್ಟರ್ ಬಜೆಟ್ ಮಂಡನೆಗೆ ಅವರ ಧರ್ಮಪತ್ನಿ ಶಿಲ್ಪಾ ಶೆಟ್ಟರ್ ಅವರು ಸಾಕ್ಷಿಯಾದರು. ಬಜೆಟ್ ಮುಖ್ಯಾಂಶಗಳು ಇಂತಿದೆ:

* 1 ಲಕ್ಷ 17 ಸಾವಿರ ಕೋಟಿ ಬಜೆಟ್ ಯೋಜನಾ ಗಾತ್ರ
* 22,310 ಕೋಟಿ ಗಾತ್ರದ ಕೃಷಿ ಬಜೆಟ್.....
* ಹಾಲಿನ ಪ್ರೋತ್ಸಾಹ ದರ ರೂ. 2 ಮುಂದುವರೆಯುವಿಕೆ.
* ರೈತರ ಹೊಲಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ.
* ಸಾಂಬಾರ ಪದಾರ್ಥ ಅಭಿವೃದ್ಧಿ ಮಂಡಳಿ ಸ್ಥಾಪನೆ
* ಬರದ ನಡುವೆ ಆಹಾರ ಪದಾರ್ಥ ಉತ್ಪಾದನೆಯಲ್ಲಿ ಏರಿಕೆ
* ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ
* 2 ವರ್ಷದಿಂದ ಪ್ರಕೃತಿ ವಿಕೋಪದಿಂದ ಭಾರಿ ಹಾನಿ
* ದಾವಣಗೆರೆಯಲ್ಲಿ ಲಾಲ್ ಬಾಗ್ ಮಾದರಿ ಗಾಜಿನ ಮನೆ ನಿರ್ಮಾಣಕ್ಕೆ 2 ಕೋಟಿ
* ಕೆಆರ್ ಎಸ್ ನಲ್ಲಿ ಮೀನು ನಿಲ್ದಾಣ ಕೇಂದ್ರ
* 10 Hp ಮೋಟರ್ ಗಳಿಗೆ ಉಚಿತ ವಿದ್ಯುತ್ ನೀಡಲು 5250 ಕೋಟಿ ರು ಮೀಸಲು..ಕೃಷಿ ಬಜೆಟ್ ಮುಖ್ಯಾಂಶಗಳಿಗೆ ಕ್ಲಿಕ್ ಮಾಡಿ

ಹೊಸ ತಾಲೂಕುಗಳ ಘೋಷಣೆ:
* ಬಾಗಲಕೋಟೆ ಜಿಲ್ಲೆ: ಗುಳೇದಗುಡ್ಡ, ರಬಕವಿ-ಬನಹಟ್ಟಿ ಮತ್ತು ಇಳಕಲ್
* ಬೆಳಗಾವಿ ಜಿಲ್ಲೆ: ನಿಪ್ಪಾಣಿ, ಮೂಡಲಗಿ ಮತ್ತು ಕಾಗವಾಡ
* ಚಾಮರಾಜನಗರ ಜಿಲ್ಲೆ: ಹನೂರ
* ದಾವಣಗೆರೆ ಜಿಲ್ಲೆ : ನ್ಯಾಮತಿ
* ಬೀದರ್ ಜಿಲ್ಲೆ : ಚಿಟಗುಪ್ಪ, ಹುಲಸೂರು ಮತ್ತು ಕಮಲಾನಗರ
* ಬಳ್ಳಾರಿ ಜಿಲ್ಲೆ: ಕುರುಗೋಡು, ಕೊಟ್ಟೂರು ಮತ್ತು ಕಂಪ್ಲಿ
* ಧಾರವಾಡ ಜಿಲ್ಲೆ: ಅಣ್ಣಿಗೇರಿ, ಅಳ್ನಾವರ ಮತ್ತು ಹುಬ್ಬಳ್ಳಿ ನಗರ
* ಗದಗ ಜಿಲ್ಲೆ : ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ
* ಗುಲ್ಬರ್ಗಾ ಮತ್ತು ಯಾದಗಿರ್ ಜಿಲ್ಲೆ: ಕಾಳಗಿ, ಹುಣಸಗಿ, ಕಮಲಾಪುರ, ಯಡ್ರಾವಿ, ಶಹಾಬಾದ್, ವಡಗೆರ ಮತ್ತು ಗುರುಮಿಟ್ಕಲ್
* ಕೊಪ್ಪಳ ಜಿಲ್ಲೆ : ಕುಕನೂರು, ಕನಕಗಿರಿ ಮತ್ತು ಕಾರಟಗಿ
* ರಾಯಚೂರು ಜಿಲ್ಲೆ : ಮಸ್ಕಿ ಮತ್ತು ಸಿರವಾರ
* ಉಡುಪಿ ಜಿಲ್ಲೆ : ಬ್ರಹ್ಮಾವರ ಮತ್ತು ಬೈಂದೂರು
* ದಕ್ಷಿಣ ಕನ್ನಡ ಜಿಲ್ಲೆ : ಮೂಡಬಿದರೆ ಮತ್ತು ಕಡಬ
* ಬೆಂಗಳೂರು ನಗರ ಜಿಲ್ಲೆ: ಯಲಹಂಕ
* ಬಿಜಾಪುರ ಜಿಲ್ಲೆ : ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟಿ, ಚಡಚಣ ಮತ್ತು ಕೋಲ್ಹಾರ
* ಪ್ರತಿ ತಾಲೂಕಿಗೆ 2 ಕೋಟಿ ರು ನೀಡಿಕೆ

ವಿವಿಧ ಇಲಾಖೆಗಳಿಗೆ ಮೀಸಲು ಧನ:
* ಒಳಾಡಳಿತ ಮತ್ತು ಸಾರಿಗೆ : 5183 ಕೋಟಿ ರು
* ಸಮಾಜ ಕಲ್ಯಾಣ: 4698 ಕೋಟಿ ರು
* ಕಂದಾಯ : 3440 ಕೋಟಿ ರು
* ಮಹಿಳಾ ಮತ್ತು ಮಕ್ಕಳ ಕಲ್ಯಾಣ: 1,136 ಕೋಟಿ ರು
* ವಾಣಿಜ್ಯ, ಕೈಗಾರಿಕೆ: 936 ಕೋಟಿ ರು
* ವಸತಿ: 1,130 ಕೋಟಿ ರು
* ಶಿಕ್ಷಣ: 18,666 ಕೋಟಿ ರು
* ಜಲ ಸಂಪನ್ಮೂಲ: 9,084 ಕೋಟಿ ರು
* ಇಂಧನ ಇಲಾಖೆ :10,831 ಕೋಟಿ ರು
*
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ : 7654 ಕೋಟಿ ರು

* ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಘಟಕಗಳಿಗೆ 100 ಕೋಟಿ ರೂ.ಗಳ ಬಂಡವಾಳ ಸಹಾಯಧನ.
* ಬೆಂಗಳೂರು ಮಹಾನಗರದಲ್ಲಿ ಸಣ್ಣ ಉದ್ಯಮಗಳಿಗೆ ನೀಡುವ ಪರವಾನಗಿಯ ಅವಧಿಯನ್ನು 5 ವರ್ಷಗಳಿಗೆ ವಿಸ್ತರಣೆ.
* 8 ವಾಜಪೇಯಿ ಶಾಲೆಗಳ ಸ್ಥಾಪನೆ
* ಕೊರಮ ಕೊರಚ ಜನಾಂಗ ಅಭಿವೃದ್ಧಿಗೆ ಪ್ರತ್ಯೇಕ ಸಂಸ್ಥೆ
* ಯಶಸ್ವಿನಿ ಆರೋಗ್ಯ ಯೋಜನೆಯ ವ್ಯಾಪ್ತಿಗೆ ಪತ್ರಕರ್ತರ ಸೇರ್ಪಡೆ.
* ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ
* ಸರ್ಜಾಪುರ ರಸ್ತೆ ದೊಡ್ದನೆಗುಂದಿ, ಇಬ್ಬಲೂರು, ಸಿಲ್ಕ್ ಬೋರ್ಡ್ ತನಕ ಫ್ಲೈ ಓವರ್
* ಬಿಬಿಎಂಪಿ ಮೂಲ ಸೌಕರ್ಯಕ್ಕೆ 50 ಕೋಟಿ
* ಬಿಬಿಎಂಪಿ ಎಲ್ಲಾ ವಾರ್ಡ್ ಗಳಲ್ಲಿ ಶೌಚಾಲಯ
* ಖಾಸಗಿ, ಸರ್ಕಾರಿ ಸಹಭಾಗಿತ್ವದಲ್ಲಿ ರಿಂಗ್ ರಸ್ತೆ
* ಕೆ.ಆರ್ ಪುರಂ ಬಳಿ ಅಂಡರ್ ಪಾಸ್ ನಿರ್ಮಾಣ
* 863 ಕೋಟಿ ರೂ. ವೆಚ್ಚದಲ್ಲಿ ಚಾಲುಕ್ಯ ವೃತ್ತ, ಶಿವಾನಂದ ವೃತ್ತ, ಸಿದ್ಧಲಿಂಗಯ್ಯ ವೃತ್ತ ಹಾಗೂ ವಿಮಾನ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಮೇಲು ಸೇತುವೆ ನಿರ್ಮಾಣ
* ಕೆಂಪೇಗೌಡ ಲೇಔಟ್ ಅಭಿವೃದ್ಧಿಗೆ 2408 ಕೋಟಿ ರು
* 80 ಕೋಟಿ ವೆಚ್ಚದಲ್ಲಿ ಗ್ರೇಡ್ ಸೆಪರೇಟರ್ಸ್ ನಿರ್ಮಾಣ

* 15 ಖಾಸಗಿ ವಿವಿಗಳಿಗೆ ಮಾನ್ಯತೆ
* ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಡಯಾಲಿಸಿಸ್, ಮಧುಮೇಹ ಚಿಕಿತ್ಸೆ ಕೇಂದ್ರ
* ಭಾರತೀಯ ತಯಾರಿಕೆ ಮದ್ಯದ ಬೆಲೆ ಜಾಸ್ತಿ
* ಕಡಿಮೆ ದರದ ಪಾದರಕ್ಷೆ ಇನ್ನಷ್ಟು ಅಗ್ಗ
* ಏರ್ ಕಂಪ್ರೆಸರ್ ಇಂಜಿನ್ ತೆರಿಗೆ ಇಳಿಕೆ
* ಬಾರ್ ಅಂಡ್ ರೆಸ್ಟೋರೇಂಟ್ ಲೈಸನ್ ಬೆಲೆ ಏರಿಕೆ
* ಪ್ಲಾಸ್ಟಿಕ್ ತ್ಯಾಜ್ಯದ ಕಿಟಕಿ ಬಾಗಿಲು ಬೆಲೆ ಏರಿಕೆ
* ಸರ್ಜಿಕಲ್ ಪಾದರಕ್ಷೆ ಹಾಗೂ ಕಪ್ಪು ಹಲಗೆ ಮೇಲಿನ ವ್ಯಾಟ್ ತೆರಿಗೆ ಶೇ 14 ರಿಂದ 9ಕ್ಕೆ ಇಳಿಕೆ
*
ಕರಾವಳಿ ಜಿಲ್ಲೆಗಳಿಗೆ ಸೌಭಾಗ್ಯ ಸಂಜೀವಿನಿ ಹೆಸರಿನಲ್ಲಿ ಕುಡಿಯುವ ನೀರಿನ ಯೋಜನೆ

* ವಿಧವಾ ವೇತನ, ವಿಕಲಚೇತನರ ಪಿಂಚಣಿ ಮೊತ್ತ 500 ರು.ಗೆ ಹೆಚ್ಚಳ
* ಶಾನುಭೋಗರು, ಪಟೇಲರ ಪಿಂಚಣಿ 200 ರು. ಹೆಚ್ಚಳ
* ಐದು ವರ್ಷಗಳಲ್ಲಿ ಗುಡಿಸಲು ಮುಕ್ತ ರಾಜ್ಯ
* 5627 ಪಂಚಾಯತ್ ವ್ಯಾಪ್ತಿಯಲ್ಲಿ ಸೈಬರ್ ಕೆಫೆ ಸ್ಥಾಪನೆ
* ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಪುನರ್ ರಚನೆ

ಮಠ ಮಾನ್ಯಗಳಿಗೆ: ಅಂದಾಜು ಒಟ್ಟು 135 ಕೋಟಿ
* ದಾವಣಗೆರೆ ವಿರಕ್ತ ಮಠ ಜೀರ್ಣೋದ್ಧಾರಕ್ಕೆ 5 ಕೋಟಿ
* ಮುಳಗುಂದದ ಶಿವಯೋಗಿ ಮಠಕ್ಕೆ 2 ಕೋಟಿ
* ಹಿರೇಕೆರೂರಿನ ಸರ್ವಜ್ಞ ಪೀಠಕ್ಕೆ 1 ಕೋಟಿ
* ಸುತ್ತೂರಿನ ವಿಜ್ಞಾನ ಕೇಂದ್ರಕ್ಕೆ 5 ಕೋಟಿ

* 10220 ಹೊಸ ಬಸ್ ಖರೀದಿ
* 123 ಬಸ್ ನಿಲ್ದಾಣ ಉನ್ನತ ದರ್ಜೆಗೆ ಏರಿಕೆ
* ಶಿವಮೊಗ್ಗ ಅಯನೂರಿನಲ್ಲಿ 3 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ
* ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ 2 ಕೊಟಿ
* 4 ಆಯುಷ್ ಸಂಚಾರಿ ಘಟಕಕ್ಕೆ 1 ಕೋಟಿ
* ಯಶಸ್ವಿನಿ ಯೋಜನೆಗೆ 45 ಕೋಟಿ
* ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರಕ್ಕೆ ಅನುಕೂಲ.
*
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ರೂ. 200 ಕೋಟಿ ಮೀಸಲು.

* ನಮ್ಮ ಮೆಟ್ರೋ ಯೋಜನೆಗೆ 8969 ಕೋಟಿ ರು
* ಕೆಂಗೇರಿ -ರಾಮನಗರ, ಯಶವಂತಪುರ-ತುಮಕೂರು, ಯಲಹಂಕ ದೊಡ್ಡಬಳ್ಳಾಪುರ ಕಮ್ಯೂಟರ್ ರೈಲು
* ಬೆಂಗಳೂರು- ಮೈಸೂರು ಜೋಡಿ ರೈಲು ಮಾರ್ಗ ಪೂರ್ಣ,
* ಕಡೂರು ಚಿಕ್ಕಮಗಳೂರು ರೈಲು ಮಾರ್ಗ ಪೂರ್ಣ
* ತುಮಕೂರು -ಅರಸೀಕೆರೆ ಹೊರ ಮಾರ್ಗಕ್ಕೆ ಅರ್ಜಿ
* 863 ಕೋಟಿ ರೂ. ವೆಚ್ಚಬೆಂಗಳೂರಿನ ಬನಶಂಕರಿ, ಚಾಮರಾಜಪೇಟೆ, ಆರ್.ಟಿ.ನಗರ, ಮಾರತ್‍ಹಳ್ಳಿ ಮತ್ತು ಹುಬ್ಬಳ್ಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್‍ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಛೇರಿಗಳ ಪ್ರಾರಂಭ.

* ಎಸ್ ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಆಕಾಶ್ ಟ್ಯಾಬ್ಲೆಟ್
* ಶೇ 75 ರಷ್ಟು ಅಧಿಕ ಅಂಕ ಗಳಿಸಿದವರಿಗೆ 15 ಸಾವಿರ ಪ್ರೋತ್ಸಾಹ ಧನ
* ಯೂನಿಕೋಡ್ ಅನುಷ್ಠಾನ ಕಾರ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೆಕ್ಕೆಗೆ
* ಬೆಂಗಳೂರು ವಿಶ್ವವಿದ್ಯಾಲಯ ಇಬ್ಭಾಗ ಘೋಷಣೆ
* ಬಿಜಾಪುರ ಮಹಿಳಾ ವಿವಿಗೆ 10 ಕೋಟಿ ರು

[* ಬೀಡಿಗಳ ಮೇಲೆ ಶೇ 5 ರಷ್ಟು ಮೌಲ್ಯ ವರ್ಧಿತ ತೆರಿಗೆ.
* ರೆಡಿಮೇಡ್ ಉಡುಪು ಶೇ 14 ರಿಂದ ಶೇ. 5 ಕ್ಕೆ ಇಳಿಕೆ.
* ಬಂಗಾರ, ಆಭರಣ, ಲೋಹಗಳ ಮೇಲಿನ ಶೇ 2 ರಿಂದ 1 ಕ್ಕೆ ಇಳಿಕೆ.
* ತಾತ್ಕಾಲಿಕ ಕಲ್ಯಾಣ ಮಂಟಪಗಳ ಮೇಲೆ ಶೇ 8 ರಷ್ಟು ತೆರಿಗೆ.
* ಸಿಗರೇಟ್, ಶೇ 15 ರಿಂದ 17ಕ್ಕೇ ಏರಿಕೆ
* ವಿಚಾರ ಸಂಕಿರಣ, ಸಮಾರಂಭಕ್ಕೆ ಶೇ.10 ತೆರಿಗೆ

* ಡೀಸೆಲ್ ತೆರಿಗೆ ಇಳಿಕೆ ಶೇ.18 ರಿಂದ ಶೇ 16.75ಕ್ಕೆ ಇಳಿಕೆ
* ಬೀರ್ ಮೇಲಿನ ತೆರಿಗೆ ಶೇ 7.5 ಸುಂಕ
* ಫ್ರೂಟ್ ವೈನ್ ಶೇ .50 ರಷ್ಟು ತೆರಿಗೆ ಕಡಿತ
* ಕಚ್ಚಾಹತ್ತಿ ಶೇ 5 ರಿಂದ ಶೇ 2 ಕ್ಕೆ ಇಳಿಕೆ] 2013-14ನೇ ಸಾಲಿನಲ್ಲಿ ಹಾಲಿಯಿರುವ ಯಾವುದೇ ತೆರಿಗೆ ದರವನ್ನು ಏರಿಸಿಲ್ಲ. ಯಾವುದೇ ನೂತನ ತೆರಿಗೆ ವಿಧಿಸಿಲ್ಲ. ಶೇ.5 ರಿಂದ 5.5ಕ್ಕೆ ಹಾಗೂ ಶೇ.14 ರಿಂದ 14.5ಕ್ಕೆ ಏರಿರುವ ವ್ಯಾಟ್ ತೆರಿಗೆಯು ಜುಲೈ 2013ರಲ್ಲಿ ಅಂತ್ಯಗೊಳ್ಳಲಿದೆ.

* 125 ತ್ವರಿತ ಗತಿ ನ್ಯಾಯಾಲಯ ಸ್ಥಾಪನೆ
* ವಿದೇಶಿ ವಿವಿಗಳಲ್ಲಿ ಕನ್ನಡ ಅಧ್ಯಯನ ಪೀಠ 2 ಕೋಟಿ ರು
* ರಾಣಿ ಚೆನ್ನಮ್ಮ ವಿವಿಗೆ 10 ಕೋಟಿ ರು
* ಮೈಸೂರು ವಿವಿಯಲ್ಲಿ ಸರ್ ಎಂವಿ ಅಧ್ಯಯನ ಪೀಠ
* 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳುಗೆ ಸೈಕಲ್
* 6.45ಲಕ್ಷ ಸರ್ಕಾರಿ ನೌಕರರಿಗೆ 2012ರ ಏ.1 ರಿಂದ ಜಾರಿಯಾಗುವಂತೆ ಬಾಡಿಗೆ ಭತ್ಯೆ ಶೇ 30 ರಷ್ಟು ಹೆಚ್ಚಳ

* ಇಳಿಕೆ: ಪಾದರಕ್ಷೆ, ರೆಡಿಮೇಡ್ ಉಡುಪು, ಡೀಸೆಲ್, ಹಣ್ಣಿನಿಂದ ತಯಾರಿಸಿದ ವೈನ್, ಕಚ್ಚಾ ಹತ್ತಿ
* ಏರಿಕೆ : ದೇಸೀಯ ಮದ್ಯ ಮತ್ತು ಬಾರ್ ಲೈಸೆನ್ಸ್ ವರ್ಗಾವಣೆ ಶುಲ್ಕ

* ಕರ್ನಾಟಕದ ಎಲ್ಲಾ ಪ್ರೌಢಶಾಲೆಗಳಿಗೆ ಇಂಟರ್ನೆಟ್ ಸಂಪರ್ಕ
* ವರ್ಕಿಂಗ್ ವುಮೆನ್ ಹಾಸ್ಟೆಲ್ ನಿರ್ಮಾಣಕ್ಕೆ 4 ಕೋಟಿ ರು
* ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ 100 ಕೋಟಿ ರು
* ಪೊಲೀಸ್ ಇಲಾಖೆಗೆ 1000 ಹೊಸ ವಾಹನಗಳು
* ರಾಜ್ಯದಲ್ಲಿ ಇಂಟೆಲಿಜೆನ್ಸ್ ಅಕಾಡೆಮಿ ಸ್ಥಾಪನೆ

* ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ 7000 ಕೋಟಿ ರು
* ಹೈದರಾಬಾದ್ ಕರ್ನಾಟಕ ವಿಶೇಷ ಘಟಕಕ್ಕೆ 3,114 ಕೋಟಿ ರು

English summary
Karnataka Budget 2013-14 LIVE coverage : Budget presented by Chief Minister of Karnataka Jagadish shettar. A please all, love all Budget Plan size is set at more than one lakh plus crore rupees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X