ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಬೊಂಬಾಬ್ ಬಜೆಟ್ : ಶಿಲ್ಪಾ ಶೆಟ್ಟರ್

By Mahesh
|
Google Oneindia Kannada News

ಬೆಂಗಳೂರು, ಫೆ.8: ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಖುಷಿಯಲ್ಲಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ವಿಧಾನಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸಹಜವಾಗಿ ಬಜೆಟ್ ಜನಪರ ಎಂದು ಸಮರ್ಥಿಸಿಕೊಂಡರು.

ಶುಕ್ರವಾರ ಮಧ್ಯಾಹ್ನ12:30 ರಿಂದ ಸತತ 4 ಗಂಟೆಗಳ ಕಾಲ ಸುಮಾರು 160 ಪುಟಗಳ ತಮ್ಮ ಚೊಚ್ಚಲ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, 'ರಾಜ್ಯದ ಎಲ್ಲ ವರ್ಗದ ಜನತೆಗೆ ಆದ್ಯತೆ ನೀಡಲಾಗಿದೆ. ಇದು ಅಭಿವೃದ್ಧಿಪರ ಬಜೆಟ್ ಎಂದು ಮತ್ತೊಮ್ಮೆ ಘೋಷಿಸಿದರು.

ತಜ್ಞರ ಸಲಹೆಯಂತೆ ಸುಗಮ ಆಡಳಿತ ನಡೆಸಲು ಅನುಕೂಲವಾಗುವ ಸಲುವಾಗಿ ನೂತನ ತಾಲೂಕುಗಳ ರಚನೆ ಮಾಡಲಾಗಿದ್ದು ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಜೆಪಿ ಸರ್ಕಾರ ಈವರೆಗೂ ಮಂಡಿಸಿರುವ ಕೃಷಿ ಬಜೆಟ್ ಗೆ ದೇಶದಲ್ಲಿ ಒಳ್ಳೆ ಹೆಸರಿದೆ ಎಂದು ಶೆಟ್ಟರ್ ಹೇಳಿದ್ರು.

ರಾಜ್ಯದ ಬಡ ವರ್ಗಕ್ಕೆ ನೆರವಾಗುವ ಉದ್ದೇಶದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ 2 ರೂ.ಗೆ ಕೆ.ಜಿ. ಅಕ್ಕಿ ನೀಡುವ ತೀರ್ಮಾನ ಪ್ರಕಟಿಸಿದ್ದು ಇದರಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ನಿರೀಕ್ಷೆಯಂತೆ ಬಿಜೆಪಿ ನಾಯಕರು ಬಜೆಟ್ ಅನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.. ಯಾರು ಏನು ಹೇಳಿದ್ದಾರೆ. ಒಂದು ಓದಿ..

ಬೊಂಬಾಬ್ ಬಜೆಟ್ : ಬಿಜೆಪಿ ಹೇಳಿಕೆ

ಬೊಂಬಾಬ್ ಬಜೆಟ್ : ಬಿಜೆಪಿ ಹೇಳಿಕೆ

ಅಭಿವೃದ್ದಿ ಮಂತ್ರ: ಬಿಜೆಪಿ ಸರ್ಕಾರದ ಅಭಿವೃದ್ಧಿ ಮಂತ್ರ ಮತ್ತೊಮ್ಮೆ ಪಠಿಸಿದ ಶೆಟ್ಟರ್, ತಮ್ಮ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಸಮಾಜದ ಅಭಿವೃದ್ದಿಗೆ ಪ್ರಾಶಸ್ತ್ಯ ನೀಡಲಾಗಿದೆ ಎಂದರು. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಜ್ಯದ ಎಲ್ಲ ಭಾಗಗಳಿಗೂ ಆದ್ಯತೆ ನೀಡಿ ಪ್ರಸಕ್ತ ಬಜೆಟ್‌ನಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ ಎಂದು ಶೆಟ್ಟರ್ ತಿಳಿಸಿದರು.

ಬೊಂಬಾಬ್ ಬಜೆಟ್ : ಬಿಜೆಪಿ ಹೇಳಿಕೆ

ಬೊಂಬಾಬ್ ಬಜೆಟ್ : ಬಿಜೆಪಿ ಹೇಳಿಕೆ

ಅತ್ಯಂತ ಸಮರ್ಥವಾದ ಬಜೆಟ್ ಮಂಡನೆಯಾಗಿದೆ. ನಾವೆಲ್ಲರೂ ಖುಷಿಯಿಂದ ಈ ಬಜೆಟ್ ಅನ್ನು ಸ್ವಾಗತಿಸುತ್ತೇವೆ, ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗೆ ಕನ್ನಡಿ ಹಿಡಿದ ಹಾಗೆ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದರು.

ಬೊಂಬಾಬ್ ಬಜೆಟ್ : ಬಿಜೆಪಿ ಹೇಳಿಕೆ

ಬೊಂಬಾಬ್ ಬಜೆಟ್ : ಬಿಜೆಪಿ ಹೇಳಿಕೆ

ಆರ್ ಅಶೋಕ್ : ಕೃಷಿ ಮತ್ತು ನೀರಾವರಿಗೆ ಸೂಕ್ತ ಆದ್ಯತೆ ನೀಡಿದಂತೆ ಬೆಂಗಳೂರು ಸೇರಿದಂತೆ ಇತರೆ ನಗರ ಗಳ ಅಭಿವೃದ್ಧಿ ಹಾಗೂ ರಸ್ತೆ, ಸಾರಿಗೆ ಇಲಾಖೆ ಹೆಚ್ಚಿನ ಅನುದಾನ ನೀಡಲಾಗಿದೆ.

ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ 100 ಕೋಟಿ ರು, ಪೊಲೀಸ್ ಇಲಾಖೆಗೆ 1000 ಹೊಸ ವಾಹನಗಳು ಹಾಗೂ ರಾಜ್ಯದಲ್ಲಿ ಇಂಟೆಲಿಜೆನ್ಸ್ ಅಕಾಡೆಮಿ ಸ್ಥಾಪನೆ ಮುಖ್ಯವಾಗಿದೆ.

ಶೆಟ್ಟರ್ ಹೋಂ ಮಿನಿಷ್ಟ್ರು

ಶೆಟ್ಟರ್ ಹೋಂ ಮಿನಿಷ್ಟ್ರು

ಈ ಬಜೆಟ್ ಎಲ್ಲಾ ವರ್ಗದ ಜನತೆಗೆ ನ್ಯಾಯ ಸಲ್ಲಿಸಿದೆ. 10ಕ್ಕೆ 10 ಅಂಕ ನೀಡುತ್ತೇನೆ. ಮುಖ್ಯವಾಗಿ ಮಹಿಳೆಯರ ಸಬಲೀಕರಣ, ರಕ್ಷಣೆಗಾಗಿ ಸಮರ್ಥವಾಗಿ ಬಜೆಟ್ ನಲ್ಲಿ ಅನುದಾನ ಸಿಕ್ಕಿದೆ. ಇನ್ನಷ್ಟು ಶಕ್ತಿಯುತವಾದ ಕಾನೂನು ಇರಬೇಕು. ಒಟ್ಟಾರೆ ಬಜೆಟ್ ಎಲ್ಲರಿಗೂ ತೃಪ್ತಿ ನೀಡಿದೆ ಎಂದು ಭಾವಿಸಿದ್ದೇನೆ- ಶಿಲ್ಪಾ ಶೆಟ್ಟರ್

English summary
CM Jagadish Shettar defended his maiden Karnataka Budget 2013-14 and said it is development oriented budget. BJP leaders KS Eshwarappa, R Ashok also welcomed the Budget
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X