ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಕ್ಷಣ ತ.ನಾಡಿಗೆ ಅಗತ್ಯ ನೀರು ಹರಿಸಿ: ಸು.ಕೋರ್ಟ್

By Srinath
|
Google Oneindia Kannada News

release-2point-44-tmc-cauvery-water-to-tamilnadu-sc
ನವದೆಹಲಿ, ಫೆ.7: ನಿರೀಕ್ಷೆಯಂತೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಕರ್ನಾಟಕಕ್ಕೆ ಹಿನ್ನಡೆಯುಂಟಾಗಿದೆ. ಕೇಂದ್ರ ಜಲ ಆಯೋಗದ ತ್ರಿಸದಸ್ಯ ಸಮಿತಿ ವರದಿಯನ್ನಾಧರಿಸಿ ಇಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್ 2.44 ಟಿಎಂಸಿ ನೀರು ಬಿಡಬೇಕು ಎಂದು ಆದೇಶಿಸಿದೆ.

ಕೆಆರ್ ಎಸ್ ಅಣೆಕಟ್ಟೆಯಲ್ಲಿ ಇಂದಿನ ನೀರಿನ ಪ್ರಮಾಣ: 11.21 ಟಿಎಂಸಿ ನೀರಿದೆ. ಇದರಲ್ಲಿ 2.9 ಟಿಎಂಸಿ ನೀರು ಮಾತ್ರ ಬಳಕೆಗೆ ಸಾಧ್ಯ. ಉಳಿದದ್ದು (8.3 TMC) ಡೆಡ್ ಸ್ಟೋರೆಜ್ ಗೆ ಬೇಕಾಗುತ್ತದೆ. ಆದರೂ ತಮಿಳುನಾಡಿಗೆ ಪ್ರತಿನಿತ್ಯ 2.44 ಟಿಎಂಸಿ ನೀರು ಹರಿಸಬೇಕಾಗಿದೆ.

ಈ ಮಧ್ಯೆ, ಇಂದಿನ ಸು.ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕರ್ನಾಟಕಕ್ಕೆ ಅವಕಾಶವಿಲ್ಲವಾಗಿದ್ದು, ಇಂದಿನಿಂದಲೇ ನೀರು ಬಿಡುವುದು ಅನಿವಾರ್ಯವಾಗಿದೆ.

'ಇದು ಕರ್ನಾಟಕ ಸರಕಾರದ ಸಂಪೂರ್ಣ ವೈಫಲ್ಯ. ಇನ್ನು, ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. ಕೋರ್ಟ್ ನಿಂದನೆಯಾದರೂ ಪರವಾಗಿಲ್ಲ. ನಮಗೆ ಅಗತ್ಯವಿರುವ ನೀರನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ' ಎಂದು ರೈತ ಮುಖಂಡರು ಹೇಳಿದ್ದಾರೆ.

English summary
Cauvery Row: Release 2.44 TMC water to Tamil Nadu hencewith- Supreme Court to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X