• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ಯಾಚಾರ: ಕೊನೆಗೂ ಸತ್ಯ ಒಪ್ಪಿಕೊಂಡ ಶೀಲಾ

By Srinath
|

ನವದೆಹಲಿ, ಫೆ.7: ಇತ್ತೀಚೆಗೆ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ರಾಡಿನಿಂದ ಮಾರಕವಾಗಿ ಗಾಯಗೊಳಿಸಿದ ಘಟನೆ ನಡೆಯುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಆಡಳಿತ ತೀವ್ರ ಟೀಕೆಗೆ ಗುರಿಯಾಗಿತ್ತು. ಶೀಲಾ ಮೇಡಂ ಸಹ ಒಂದಷ್ಟು ಸಬೂಬು ಹೇಳಿಕೊಂಡು ಅಸಹಾಯಕತೆ ಪ್ರದರ್ಶಿಸಿದ್ದರು.

ಆದರೆ ಮೊನ್ನೆ ರಾಜಧಾನಿಯಲ್ಲಿ ಯುವತಿಯ ಬಾಯಿಗೆ ಕಬ್ಬಿಣದ ರಾಡ್ ನುಗ್ಗಿಸಿ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ನಡೆದ ಮೇಲೆ ಶೀಲಾ ಮೇಡಂ ನಿಜಕ್ಕೂ ಧರಾಶಾಯಿಯಾಗಿದ್ದಾರೆ. ನಮ್ಮ ದಿಲ್ಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ತಮಗೆ ವೇದ್ಯವಾಗುತ್ತಿದೆ ಎಂದು ಶೀಲಾ ದೀಕ್ಷಿತ್ ತಲೆಯ ಮೇಲೆ ಕೈಹೊತ್ತುಕೊಂಡು ಹೇಳಿದ್ದಾರೆ.

ನಿನ್ನೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶೀಲಾ ದೀಕ್ಷಿತ್, 19 ವರ್ಷ ವಯಸ್ಸಿನ ಯುವತಿಯ ಮೇಲೆ ಮಂಗಳವಾರ ನಡೆದ ಅತ್ಯಾಚಾರ ಯತ್ನದ ಘಟನೆಯನ್ನು ಪ್ರಸ್ತಾಪಿಸುತ್ತಾ ದಿಲ್ಲಿ ತಮಗೆ ಸುರಕ್ಷಿತವಲ್ಲವೆಂಬ ಭಾವನೆ ಮಹಿಳೆಯರಲ್ಲಿ ಉಂಟಾಗಿದೆ. ಅವರಲ್ಲಿ ಭಯ ಅಧಿಕವಾಗುತ್ತಿದೆ. ಲಜಪತ್‌ ನಗರದಲ್ಲಿ ನಿನ್ನೆ ನಡೆದ ಅತ್ಯಾಚಾರ ಯತ್ನದ ಘಟನೆಯನ್ನು ಕೇಳಿ ನನಗೆ ದಿಗ್ಭ್ರಮೆಯಾಗಿದೆ. ನಮಗೆ ಇದೊಂದು ದೊಡ್ಡ ಹಿನ್ನಡೆ' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಆದರೆ ಇದರಿಂದ ಧೃತಿಗೆಡುವುದಿಲ್ಲ. ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಶೀಲಾ ದೀಕ್ಷಿತ್ ಭರವಸೆ ನೀಡಿದರು.

ಇದೇ ವೇಳೆ, ದಿಲ್ಲಿಯಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರು ಶೀಲಾ ದೀಕ್ಷಿತ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲವೆಂಬುದು ಈಗ ಸ್ಪಷ್ಟವಾಗಿದೆ. ದೆಹಲಿ ಮುಖ್ಯಮಂತ್ರಿ ಸತ್ಯವನ್ನೇ ಹೇಳಿದ್ದಾರೆ. ಅದರೆ ಇಷ್ಟೇ ಸಾಲದು. ಇದರಲ್ಲಿ ಅವರ ಹೊಣೆಗಾರಿಕೆ ಏನು ಎಂಬುದು ತಿಳಿಯಬೇಕಾಗಿದೆ' ಎಂದು ಕಿವಿಮಾತು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Molestaion cases on rise: Women not safe in New Delhi, says Chief Minister Sheila Dikshit. A day after a man shoved an iron rod into a young girl's throat while trying to rape her, CM Sheila said women do not feel safe in the national capital. 'Women don't feel safe in Delhi. There is no feeling of security. What had happened yesterday in Lajpat Nagar is shocking. The incident has raised our worries.' 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more