ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಾರಾ ಆಸ್ತಿಪಾಸ್ತಿ ವಶಕ್ಕೆ ಮುಂದಾದ ಸೆಬಿ

By Mahesh
|
Google Oneindia Kannada News

Sahara India Scam
ನವದೆಹಲಿ,ಫೆ.7: ತನ್ನ ಹೂಡಿಕೆದಾರರಿಗೆ ನೀಡಬೇಕಾಗಿದ್ದ 24 ಸಾವಿರ ಕೋಟಿ ರೂ.ಗಳನ್ನು ಮರುಪಾವತಿಸಲು ಸೋತಿರುವ ಸಹಾರಾ ಸಂಸ್ಥೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ. ಸಹರಾ ಸಮೂಹ ಉದ್ಯಮ ಸಂಸ್ಥೆಗೆ ಸೇರಿದ ಎರಡು ಕಂಪೆನಿಗಳ ಆಸ್ತಿಪಾಸ್ತಿಗಳನ್ನು ಷೇರು ವ್ಯವಹಾರಗಳ ನಿಯಂತ್ರಣ ಮಂಡಳಿ 'ಸೆಬಿ' ಮುಕ್ತ ಸ್ವಾತಂತ್ರವನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಸರ್ವೋಚ್ಚ ನ್ಯಾಯಾಲಯದ ಈ ಆದೇಶವು ದೇಶದ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಲ್ಲೊಂದಾದ ಸಹರಾ ಗ್ರೂಪ್‌ಗೆ ದೊಡ್ಡ ಹೊಡೆತ ನೀಡಲಿದೆ. ಸಹಾರಾ ಸಂಸ್ಥೆ ತನ್ನ ಹೂಡಿಕೆದಾರರಿಗೆ 24 ಸಾವಿರ ಕೋಟಿ ಹಿಂತಿರುಗಿಸಲು ಕಳೆದ ಡಿಸೆಂಬರ್ ನಲ್ಲಿ ಸುಪ್ರೀಂಕೋರ್ಟ್ ಹೆಚ್ಚಿನ ಕಾಲಾವಕಾಶ ನೀಡಿತ್ತು. ಎರಡು ತಿಂಗಳಲ್ಲಿ 24 ಸಾವಿರ ಕೋಟಿ ರು ಹಿಂತಿರುಗಿಸಲು ಸಹಾರಾ ಸಂಸ್ಥೆಗೆ ಸಾಧ್ಯವಾಗಿರಲಿಲ್ಲ.

ಜೊತೆಗೆ 5,120 ಕೋಟಿ ರು ಗಳಿಗೆ ಡಿಮ್ಯಾಂಡ್ ಡ್ರಾಫ್ಟನ್ನು ಸೆಬಿಗೆ ನೀಡಬೇಕು ಎಂದು ಸಿಜೆ ಅಲ್ತಾಮಸ್ ಕಬೀರ್ ಅವರು ಸೂಚಿಸಿದ್ದಾರೆ. ಉಳಿದ ಬಾಕಿ ಮೊತ್ತವನ್ನು ಎರಡು ಕಂತುಗಳಲ್ಲಿ ಫೆಬ್ರವರಿ ತಿಂಗಳೊಳಗೆ ಕಟ್ಟತಕ್ಕದ್ದು ಎಂದು ನ್ಯಾಯಪೀಠ ಹೇಳಿತ್ತು.

ಸಹರಾ ಸಮೂಹದ ಸಂಸ್ಥೆಗಳಾದ ಸಹರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ (ಎಸ್‌ಐಆರ್‌ಇಸಿ) ಹಾಗೂ ಸಹರಾ ಹೌಸಿಂಗ್ ಇನ್‌ವೆಸ್ಟ್‌ಮೆಂಟ್ ಕಾರ್ಪೊರೇಶನ್ (ಎಸ್‌ಎಚ್‌ಐಸಿ) ಸೊತ್ತುಗಳನ್ನು ಜಪ್ತಿ ಮಾಡುವಂತೆ ಹಾಗೂ ಅವುಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೋರ್ಟ್ ಹೇಳಿದೆ.

ಅಲ್ಲದೆ, 2012ರ ಆಗಸ್ಟ್ 31ರಂದು ನೀಡಿದ ಆದೇಶವನ್ನು ಏಕೆ ಇನ್ನೂ ಪಾಲಿಸಿಲ್ಲ ಎಂದು ಸೆಬಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳಾದ ಕೆ.ಎಸ್.ರಾಧಾಕೃಷ್ಣನ್ ಹಾಗೂ ಜೆ.ಎಸ್.ಖೇಹರ್ ಅವರನ್ನೊಳಗೊಂಡ ನ್ಯಾಯಪೀಠ ಸಹರಾ ಗ್ರೂಪ್‌ಗೆ ನೋಟಿಸ್ ಜಾರಿಗೊಳಿಸಿದೆ.

ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಸಹರಾ ಸಮೂಹದ ಈ ಎರಡು ಕಂಪೆನಿಗಳು ತಮ್ಮ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ಶೇ.15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮೂರು ತಿಂಗಳುಗಳೊಳಗೆ ಮರುಪಾವತಿಸಬೇಕೆಂದು ಸುಪ್ರೀಂಕೋರ್ಟ್ ಕಳೆದ ವರ್ಷದ ಆಗಸ್ಟ್ 3ರಂದು ನೀಡಿದ ಆದೇಶದಲ್ಲಿ ತಿಳಿಸಿತ್ತು.

ಏನಿದು ಪ್ರಕರಣ?: ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳಿಗೆ ವಿರುದ್ಧವಾಗಿ ರೂ. 24,029 ಕೋಟಿ ರೂ. ಸಂಗ್ರಹಿಸಿದ್ದ ಸಹಾರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ.

ಸಹಾರಾ ಹೌಸಿಂಗ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಶನ್ ಮತ್ತು ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ ಮೂಲಕ ಠೇವಣಿದಾರರು ತಮಗೆ ಅಗತ್ಯವಿದ್ದಾಗ ಪರಿವರ್ತಿಸಬಹುದಾದ ಒಎಫ್ ಸಿಡಿ ಬಾಂಡ್ ಗಳನ್ನು ವಿತರಿಸುವ ಮೂಲಕ ಈ ನಿಧಿ ಸಂಗ್ರಹಿಸಲಾಗಿತ್ತು. ಠೇವಣಿ ಸಂಗ್ರಹಣೆಯ ಸ್ಪಷ್ಟ ಉದ್ದೇಶವನ್ನು ಕಂಪನಿ ಸ್ಪಷ್ಟವಾಗಿ ತಿಳಿಸಿರಲಿಲ್ಲ.

ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದದಿರುವುದು ಕುತೂಹಲಕಾರಿಯಾಗಿದೆ.

English summary
Sahara Group received a fresh setback after Supreme Court said that SEBI is free to freeze accounts and seize properties of its two companies- Sahara India Real Estate Corporation (SIREC) and Sahara Housing Investment Corporation (SHIC) - for defying court orders by not refunding Rs 24,000 crore to investors. SC issued notice to the group to respond within four weeks why contempt action should not be initiated against the companies for not complying with its order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X