ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೇಶ್ ಎಕ್ಸ್ ಪೋರ್ಟ್ಸ್ ತೆಕ್ಕೆಗೆ 432 ಕೋಟಿ ಡೀಲ್

By Mahesh
|
Google Oneindia Kannada News

Rajesh Exports Ltd Rs 432 crore order
ಬೆಂಗಳೂರು, ಫೆ.6: ರಾಜೇಶ್ ಎಕ್ಸ್ ಪೋಟ್ಸ್ ಲಿ (ಆರ್ ಇಎಲ್) ಸಂಸ್ಥೆಯ ರೀಟೈಲ್ ಉತ್ಪನ್ನವಾದ ಶುಭ್ ಜ್ಯುವೆಲ್ಲರಿಸ್ ಪುಷ್ಯ ಮಾಸದಲ್ಲೂ ಭರ್ಜರಿ ವ್ಯಾಪಾರ ನಡೆಸಿದೆ.

ಬೆಂಗಳೂರು ಮೂಲದ ರಾಜೇಶ್ ಎಕ್ಸ್ ಪೋಟ್ಸ್ ಸಂಸ್ಥೆಯ ಶುಭ್ ಜುವೆಲ್ಲರ್ಸ್ ಗೆ ಈಗ ಅರೇಬಿಯಾದಿಂದ ಭರ್ಜರಿ ಡೀಲ್ ಒದಗಿ ಬಂದಿದೆ. ಯುಎಇಯ ಅಲ್ ಮಲೆಕ್ ಜ್ಯುವೆಲ್ಲರಿ ಸಂಸ್ಥೆಯಿಂದ ಸುಮಾರು 432 ಕೋಟಿ ರು ಒಪ್ಪಂದಕ್ಕೆ ರಾಜೇಶ್ ಎಕ್ಸ್ ಪೋರ್ಟ್ಸ್ ಸಹಿ ಹಾಕಿದೆ. ಚಿನ್ನ ಮತ್ತು ವಜ್ರದ ಆಭರಣ ರಫ್ತು ಮಾಡಲು ರಾಜೇಶ್ ಎಕ್ಸ್ ಪೋರ್ಟ್ ಸಿದ್ಧತೆ ನಡೆಸಿದೆ.

ಮಾ.31ರೊಳಗೆ ಈ ಭಾರಿ ಮೊತ್ತ ಡೀಲ್ ಗೆ ಸಂಬಂಧಿಸಿದ ಸರಕು ರಫ್ತು ಮಾಡಬೇಕಿದೆ. ಬೆಂಗಳೂರಿನ ತಯಾರಿಕಾ ಘಟಕ ಸುಸಜ್ಜಿತವಾಗಿದ್ದು, ನುರಿತ ವಿನ್ಯಾಸಗಾರರನ್ನು ಹೊಂದಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಆಭರಣಗಳನ್ನು ತಲುಪಿಸುವ ನಿರೀಕ್ಷೆಯಿದೆ ಎಂದು ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಮುಖ್ಯಸ್ಥ ರಾಜೇಶ್ ಮೆಹ್ತಾ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಡಾ. ವಿಷ್ಣುವರ್ಧನ್ ಹಾಗೂ ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿಸಿಕೊಂಡು ಸಂಸ್ಥೆ ಅಧಿಕ ಲಾಭ ಪಡೆದಿದೆ. ಇದಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದು ಸಂಸ್ಥೆ ಚೇರ್ ಮನ್ ರಾಜೇಶ್ ಮೆಹ್ತಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಸುಮಾರು 40 ಕ್ಕೂ ಅಧಿಕ ಶುಭ್ ಜುವೆಲ್ಲರಿ ಶೋ ರೂಮ್ ಗಳನ್ನು ಆರಂಭಿಸಲಿದೆ. ಮುಂದಿನ ಎರಡು ತ್ರೈಮಾಸಿಕದಲ್ಲೇ ಮಳಿಗೆಗಳ ಸಂಖ್ಯೆ ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ ಸಂಸ್ಥೆ ಉತ್ತಮ ಪ್ರಗತಿ ಕಂಡಿದೆ ಎಂದು ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಮುಖ್ಯಸ್ಥ ರಾಜೇಶ್ ಮೆಹ್ತಾ ಹೇಳಿದ್ದಾರೆ.

ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ಸುಮಾರು 2000ಕ್ಕೂ ಅಧಿಕ ಮದುವೆ ಸಂಬಂಧಿಸಿದ ಆಭರಣಗಳ ವಿನ್ಯಾಸವನ್ನು ರೂಪಿಸುತ್ತಿದೆ.

ಬುಧವಾರ (ಫೆ.6) ಬಿಎಸ್ ಇಯಲ್ಲಿ ಕಂಪನಿ ಷೇರುಗಳು ಮಧ್ಯಾಹ್ನ 3.20 ಗಂಟೆ ವೇಳೆಗೆ 128.05 ರು ದರದಂತೆ ಶೇ 2.66 ರ ಇಳಿಕೆ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 128.15 ರು.ನಂತೆ ಶೇ 2.66 ರಷ್ಟು ಇಳಿಮುಖವಾಗಿದೆ.

ರಾಜೇಶ್ ಎಕ್ಸ್ ಪೋರ್ಟ್ ದಾಖಲೆ: ಕಳೆದ ತ್ರೈಮಾಸಿಕದಲ್ಲಿ ರಾಜೇಶ್ ಎಕ್ಸ್ ಪೋರ್ಟ್ಸ್ ಆದಾಯ ಶೇ 5.15 ರಷ್ಟು ಏರಿಕೆಯಾಗಿದ್ದು ಒಟ್ಟಾರೆ 4,967.1 ಕೋಟಿ ಗಳಿಸಿದೆ. ಈ ತ್ರೈಮಾಸಿಕದಲ್ಲಿ Earnings Per Share (EPS) 3.33ರು ಗೆ ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ 3.22 ರು. ನಷ್ಟಿತ್ತು.

ಶುಭ್ ಜ್ಯುವೆಲ್ಲರಿಸ್, ಕಳೆದ ವರ್ಷಾಂತ್ಯದ ಹಬ್ಬದ ಸಂದರ್ಭದಲ್ಲಿ ಸುಮಾರು ಶೇ 232 ರಷ್ಟು ಆದಾಯ ಗಳಿಸಿ ಭರ್ಜರಿ ವ್ಯಾಪಾರ ನಡೆಸಿತ್ತು. ಡಿ.31, 2011ಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕದಲ್ಲಿ ಶೇ.51ರಷ್ಟು ಅಥವಾ 114.7ಕೋಟಿ ರು ಲಾಭ ಗಳಿಸಿತ್ತು.

ನಂತರದ ತ್ರೈಮಾಸಿಕದಲ್ಲಿ 107.07 ರಷ್ಟು ನಿವ್ವಳ ಲಾಭ, ಆದಾಯದಲ್ಲಿ ಶೇ 17 ರಷ್ಟು ಆದಾಯ ಹೆಚ್ಚಳ 6,745.47 ಕೋಟಿ ರು ಆದಾಯ ಗಳಿಸಿತ್ತು.

English summary
Bangalore based Rajesh Exports Ltd has secured an order for export of gold and diamond jewelery valued Rs 432 crore from Al Malek Jewellery, UAE. The company has plans to open 40 more Shubh Jewellers showrooms in Karnataka, within the next two quarters said Rajesh Mehta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X