ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ 755 ಕೋಟಿ ರು. ಕಳೆದುಕೊಂಡ ಮಲ್ಯ

By Mahesh
|
Google Oneindia Kannada News

Kingfisher Airlines reports huge losses in Q3 as operations falter
ಬೆಂಗಳೂರು, ಫೆ.5 : ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಮತ್ತೊಮ್ಮೆ ಭಾರಿ ನಷ್ಟ ಅನುಭವಿಸಿದೆ. ಡಿಸೆಂಬರ್ 31,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಗೆ ಸುಮಾರು 755 ಕೋಟಿ ರು ನಷ್ಟವಾಗಿದೆ ಎಂದು ಸಂಸ್ಥೆ ಮಂಗಳವಾರ(ಫೆ.5) ಪ್ರಕಟಿಸಿದೆ.

ಆರ್ಥಿಕ ವೆಚ್ಚ 401 ಕೋಟಿ ರು, ಏರ್ ಕ್ರಾಫ್ಟ್ ನಿರ್ವಹಣಾ ವೆಚ್ಚ 201 ಸೇರಿದಂತೆ ಒಟ್ಟಾರೆ 755 ಕೋಟಿ ರು ನಷ್ಟವಾಗಿದೆ ಎಂದು ಕಿಂಗ್ ಫಿಷರ್ ಸಂಸ್ಥೆ ಹೇಳಿದೆ.

ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಗೆ ಕಿಂಗ್ ಫಿಷರ್ ಸಂಸ್ಥೆ ಮೇಲಕ್ಕೆತ್ತಲು ಕೈಗೊಂಡಿರುವ ಪುನರುತ್ಥಾನ ಕ್ರಮಗಳ ಪಟ್ಟಿಯನ್ನು ನೀಡಲಾಗಿದೆ. ವಿಮಾನಯಾನ ಅನುಮತಿ ನವೀಕರಣಕ್ಕೂ ಅರ್ಜಿ ಹಾಕಲಾಗಿದೆ ಎಂದು ಬಿಎಸ್ ಇಗೆ ಕೊಟ್ಟಿರುವ ಹೇಳಿಕೆಯಲ್ಲಿ ಕಂಡು ಬಂದಿದೆ.

ಮಂಗಳವಾರ(ಫೆ.5) ಷೇರುಪೇಟೆಯಲ್ಲೂ ಕಿಂಗ್ ಫಿಷರ್ ಷೇರುಗಳು ಕೆಳಮುಖವಾಗಿ ಹಾರಾಟ ಮಾಡುತ್ತಿದ್ದವು. ಬಿಎಸ್ ಇನಲ್ಲಿ ಮಧ್ಯಾಹ್ನ 3.55 ನಿಮಿಷಕ್ಕೆ ಸರಿಯಾಗಿ ಸಂಸ್ಥೆ ಷೇರುಗಳು 12.24 ರು.ನಂತೆ ಶೇ2.39 ರಷ್ಟು ಇಳಿಕೆ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 12.20 ರು.ನಂತೆ ಶೇ 2.79 ರಷ್ಟು ಇಳಿಮುಖವಾಗಿದೆ. ಒಟ್ಟಾರೆ ದಿನದಲ್ಲಿ 12 ರು ನಂತೆ ಶೇ 4 ರಷ್ಟು ಕುಸಿತ ಕಂಡಿದೆ.

ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 754 ಕೋಟಿ ರು ನಷ್ಟು ನಿವ್ಚಳ ನಷ್ಟ ಅನುಭವಿಸಿತ್ತು. ಸುಮಾರು 7,524 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಸುಮಾರು 8000 ಕೋಟಿ ರು ನಷ್ಟು ನಷ್ಟ ಅನುಭವಿಸಿದೆ. 17 ಬ್ಯಾಂಕ್ ಗಳಿಂದ ಸಾಲ ಪಡೆದಿದೆ. ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ.

ಈ ನಡುವೆ ಕಿಂಗ್ ಫಿಷರ್ ಮೇಲೆ Etihad Airways ಹಿಡಿತ ಹೊಂದುವ ಮೊದಲು ತೆರಿಗೆ ಬಾಕಿ, ಸಾಲ ಬಾಕಿ ಹಿಂಪಡೆಯಲು ಸಾಲ ಕೊಟ್ಟ ಸಂಸ್ಥೆಗಳು ಯೋಜಿಸಿದೆ. ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಕಳೆದ ಏಳೆಂಟು ತಿಂಗಳಿನಿಂದ ಸಂಬಳ ನೀಡಿಲ್ಲ. ವರ್ಷದ ಆರಂಭದಲ್ಲಿ ಡಿಜಿಸಿಎ(Directorate General Of Civil Aviation) ಹಾರಾಟದ ಅನುಮತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.

English summary
Vijay Mallya led Kingfisher Airlines reported loss in its third quarter as the Airlines did not have any operations. The company's net loss stood at Rs 755 crore for the quarter ended December 31, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X